Toyota Innova Crysta: ಭಾರತದಲ್ಲಿ ಬಿಡುಗಡೆಯಾಗುವ ಟೊಯೋಟಾ ಇನ್ನೋವಾ ಕ್ರಿಸ್ಟಾ ಫೇಸ್ಲಿಫ್ಟ್ ಕಾರಿನ ವಿಶೇಷತೆಗಳೇನು ಗೊತ್ತಾ?
ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಎಂಪಿವಿ ಕಾರು ಮಾದರಿಯಾದ ಇನೋವಾ ಕ್ರಿಸ್ಟಾ ಫೇಸ್ಲಿಫ್ಟ್ ಮಾದರಿಯ ನೂತನ ಕಾರನ್ನು ಗುರುವಾರ (ನವೆಂಬರ್ 26) ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ
News18 Kannada | November 24, 2020, 8:52 PM IST
1/ 8
ಟೊಯೋಟಾ ಕಂಪನಿಯು ತನ್ನ ಜನಪ್ರಿಯ ಎಂಪಿವಿ ಕಾರು ಮಾದರಿಯಾದ ಇನೋವಾ ಕ್ರಿಸ್ಟಾ ಫೇಸ್ಲಿಫ್ಟ್ ಮಾದರಿಯ ನೂತನ ಕಾರನ್ನು ಭಾರತೀಯ ಮಾರುಕಟ್ಟೆಗೆ ಗುರುವಾರ (ನವೆಂಬರ್ 26) ಬಿಡುಗಡೆ ಮಾಡಲಿದೆ.
2/ 8
ಫೇಸ್ಲಿಫ್ಟ್ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ಗಳೊಂದಿಗೆ ಮುಂಭಾಗದ ವಿನ್ಯಾಸದಲ್ಲಿ ಹೊಸ ಬದಲಾವಣೆ ಪಡೆದುಕೊಂಡಿದೆ.
3/ 8
2004ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಇನೋವಾ ಕಾರು 2016ರಲ್ಲಿ ಇನೋವಾ ಕ್ರಿಸ್ಟಾ ಹೆಸರಿನೊಂದಿಗೆ ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಿತ್ತು.
4/ 8
ಇದೀಗ ಫೇಸ್ಲಿಫ್ಟ್ ಆವೃತ್ತಿಯ ಮೂಲಕ ಹೊರಭಾಗ ಮತ್ತು ಒಳಭಾಗದ ವಿನ್ಯಾಸದಲ್ಲಿ ಸಾಕಷ್ಟು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.
5/ 8
ಹೊಸ ಕಾರಿನಲ್ಲಿ ಫ್ಲಕ್ಸ್ ಸಿಲ್ವರ್ ಸ್ಕ್ರೀಡ್ ಪ್ಲೇಟ್, ತ್ರಿಕೋನಾಕಾದಲ್ಲಿರುವ ಹೊಲೊಜೆನ್ ಫಾಗ್ ಲ್ಯಾಂಪ್, ಸಿಲ್ವರ್ ಫೀನಿಷ್ ಹೊಂದಿರುವ 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್ ಹೊಂದಿದ್ದು, ಹಿಂಭಾಗದ ಬಂಪರ್ ಮತ್ತು ಇತರೆ ವಿನ್ಯಾಸದಲ್ಲಿ ಯಾವುದೇ ಹೊಸ ಬದಲಾವಣೆಗಳನ್ನು ತಂದಿಲ್ಲ
6/ 8
ಫೇಸ್ಲಿಫ್ಟ್ ಒಳಭಾಗದ ವಿನ್ಯಾಸವು ಕೂಡಾ ಸಾಕಷ್ಟು ಬದಲಾವಣೆಗೊಂಡಿದ್ದು, ಆಲ್ ಬ್ಲ್ಯಾಕ್ ಥೀಮ್ ಇಂಟಿಯರ್ ಆಕರ್ಷಕವಾಗಿದೆ.
7/ 8
ಹೊಸ ಇನ್ನೋವಾ ಕ್ರಿಸ್ಟಾ ಜಿಎಕ್ಸ್, ವಿಎಕ್ಸ್ ಮತ್ತು X ಡ್ಎಕ್ಸ್ ಶ್ರೇಣಿಗಳಲ್ಲಿ ಲಭ್ಯವಿದೆ ಮತ್ತು ಇದು 16.26 ಲಕ್ಷದಿಂದ 24.33 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ) ಬರುತ್ತದೆ. ಕೇರಳವನ್ನು ಹೊರತುಪಡಿಸಿ ದೇಶಾದ್ಯಂತ ಬೆಲೆಗಳು ಒಂದೇ ಆಗಿವೆ ಎಂದು ಕಂಪನಿ ತಿಳಿಸಿದೆ.
8/ 8
ಸುರಕ್ಷತೆಗಾಗಿ ಪ್ರಸ್ತುತ ಮಾದರಿಯಲ್ಲಿರುವಂತೆಯೇ ಎಬಿಎಸ್ ಜೊತೆಗೆ ಇಬಿಡಿ, 7 ಏರ್ಬ್ಯಾಗ್, ಸ್ಪಿಡ್ ಸೆನ್ಸಾರ್ ಡೋರ್ ಲಾಕ್, ಕ್ರೂಸ್ ಕಂಟ್ರೋಲ್, ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಕೀ ಲೆಸ್ ಎಂಟ್ರಿ, ಆ್ಯಂಬಿಯೆಂಟ್ ಲೈಟಿಂಗ್ಸ್, ಲೆದರ್ ಆಸನಗಳು, ರಿವರ್ಸ್ ಕ್ಯಾಮೆರಾ ಸೇರಿದಂತೆ ಹಲವಾರು ಸುರಕ್ಷಾ ಸೌಲಭ್ಯಗಳಿವೆ