KL Rahul: ಕೊಹ್ಲಿ, ಫಿಂಚ್, ಬಾಬರ್ ಜೊತೆ ದಾಖಲೆ ಹಂಚಿಕೊಂಡ ಕೆಎಲ್ ರಾಹುಲ್..!
ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ ಅಂತಿಮವಾಗಿ 51 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಈ ಆಕರ್ಷಕ ಇನಿಂಗ್ಸ್ನೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ 1500 ರನ್ ಪೂರೈಸಿದ ದಾಖಲೆಗೆ ಪಾತ್ರರಾದರು.
News18 Kannada | December 4, 2020, 7:43 PM IST
1/ 5
ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಜಯಗಳಿಸುವ ಮೂಲಕ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಆರಂಭಿಕ ಕೆಎಲ್ ರಾಹುಲ್ ಅವರ ಆಕರ್ಷಕ ಅರ್ಧಶತಕ, ರವೀಂದ್ರ ಜಡೇಜಾ ಅವರ ಸ್ಪೋಟಕ 44 ರನ್ಗಳು, ಎಡಗೈ ವೇಗಿ ನಟರಾಜನ್ ಅವರ ಕರಾರುವಾಕ್ ದಾಳಿ, ಯಜುವೇಂದ್ರ ಚಹಲ್ ಅವರ ಸ್ಪಿನ್ ಮೋಡಿ ನೆರವಿನಿಂದ ಟೀಮ್ ಇಂಡಿಯಾ 11 ರನ್ಗಳ ರೋಚಕ ಜಯ ಸಾಧಿಸಿತು.
2/ 5
ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ಆರ್ 39 ರನ್ಗಳಿಸುವುದರೊಂದಿಗೆ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 1500 ರನ್ ಪೂರೈಸಿದರು. ಅಲ್ಲದೆ 37 ಎಸೆತಗಳಲ್ಲಿ ತಮ್ಮ 12ನೇ ಟಿ20 ಅರ್ಧಶತಕವನ್ನು ಸಿಡಿಸಿದರು.
3/ 5
ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ ಅಂತಿಮವಾಗಿ 51 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಈ ಆಕರ್ಷಕ ಇನಿಂಗ್ಸ್ನೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ 1500 ರನ್ ಪೂರೈಸಿದ ದಾಖಲೆಗೆ ಪಾತ್ರರಾದರು.
4/ 5
ಈ ಸಾಧನೆಗೈಯ್ಯಲು ರಾಹುಲ್ ತೆಗೆದುಕೊಂಡಿರುವುದು ಕೇವಲ 39 ಇನಿಂಗ್ಸ್ಗಳು ಮಾತ್ರ. ಆದರೆ ಕಾಕತಾಳೀಯ ಎಂಬಂತೆ ಇಷ್ಟೇ ಇನಿಂಗ್ಸ್ನಲ್ಲಿ ಇದಕ್ಕೂ ಮೊದಲೇ ಮೂವರು ಬ್ಯಾಟ್ಸ್ಮನ್ಗಳು ಈ ಸಾಧನೆ ಮಾಡಿದ್ದರು.
5/ 5
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ, ಆಸ್ಟ್ರೇಲಿಯಾ ತಂಡ ನಾಯಕ ಆರೋನ್ ಫಿಂಚ್ ಸಹ 39 ಇನ್ನಿಂಗ್ಸ್ಗಳಲ್ಲಿ 1500 ರನ್ಗಳನ್ನು ಕಲೆಹಾಕಿದ್ದರು. ಇದೀಗ ಕೆಎಲ್ ರಾಹುಲ್ ಸಹ ಇಷ್ಟೇ ಇನಿಂಗ್ಸ್ಗಳಿಂದ ಮೈಲಿಗಲ್ಲನ್ನು ತಲುಪಿರುವುದು ವಿಶೇಷ.