IPL 2021: ಈತನನ್ನು ಖರೀದಿಸಲು ಐಪಿಎಲ್ ಫ್ರಾಂಚೈಸಿಗಳು ಪೈಪೋಟಿ ನಡೆಸಲಿದೆ..!
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 13ನಲ್ಲಿ ಮ್ಯಾಕ್ಸ್ವೆಲ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ಪರ 13 ಪಂದ್ಯಗಳನ್ನಾಡಿದ ಮ್ಯಾಕ್ಸಿ ಗಳಿಸಿದ್ದು ಕೇವಲ 108 ರನ್ಗಳು ಮಾತ್ರ.
News18 Kannada | December 4, 2020, 9:54 PM IST
1/ 8
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 13 ಮುಕ್ತಾಯವಾಗಿದೆ. ಇನ್ನೇನು, ಕೆಲವೇ ತಿಂಗಳಲ್ಲಿ ಮತ್ತೆ ಸೀಸನ್ 14 ಶುರುವಾಗಲಿದೆ. ಈಗಾಗಲೇ ಇದಕ್ಕೆ ಬೇಕಾದ ಸಿದ್ಧತೆಗಳನ್ನು ಬಿಸಿಸಿಐ ಶುರು ಮಾಡಿಕೊಂಡಿದೆ.
2/ 8
ಇದೇ ಡಿಸೆಂಬರ್ 24 ರಂದು ಬಿಸಿಸಿಐ ವಾರ್ಷಿಕ ಮಹಾಸಭೆ ನಡೆಯಲಿದ್ದು, ಅಂದು ಐಪಿಎಲ್ನಲ್ಲಿ ಹೊಸ ಎರಡು ತಂಡಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಅಂತಿಮ ತೀರ್ಮಾನವಾಗಲಿದೆ. ಅಲ್ಲದೆ ಇದರ ಬೆನ್ನಲ್ಲೇ ಮೆಗಾ ಹರಾಜಿನ ದಿನಾಂಕಗಳು ಕೂಡ ಪ್ರಕಟವಾಗುವ ಸಾಧ್ಯತೆಯಿದೆ.
3/ 8
ಈ ಬಾರಿ ಮೆಗಾ ಹರಾಜು ನಡೆಯುವುದರಿಂದ ಪ್ರತಿಯೊಂದು ತಂಡಗಳು 3 ಆಟಗಾರರನ್ನು ಹೊರತುಪಡಿಸಿ ಉಳಿದ ಪ್ಲೇಯರ್ಸ್ಗಳನ್ನು ಬಿಡುಗಡೆ ಮಾಡಬೇಕು. ಹೀಗಾಗಿ ಬಹುತೇಕ ಆಟಗಾರರು ಇತರೆ ಫ್ರಾಂಚೈಸಿಗಳಿಗೆ ಬಿಡ್ಡಿಂಗ್ಗೆ ಲಭಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರನ ಖರೀದಿ ಮೇಲೆ ಎಲ್ಲಾ ಫ್ರಾಂಚೈಸಿಗಳ ಕಣ್ಣಿರಲಿದೆ ಎಂದಿದ್ದಾರೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್.
4/ 8
ಹೌದು, ಮೈಕೆಲ್ ವಾನ್ ಪ್ರಕಾರ, ಮುಂದಿನ ಸೀಸನ್ನಲ್ಲಿ ಎಲ್ಲಾ ಫ್ರಾಂಚೈಸಿಗಳು ಗ್ಲೆನ್ ಮ್ಯಾಕ್ಸ್ವೆಲ್ ಖರೀದಿಗೆ ಆಸಕ್ತಿವಹಿಸಲಿದ್ದಾರೆ. ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿರುವ ಮ್ಯಾಕ್ಸಿಯನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಮುಂದಿನ ಐಪಿಎಲ್ ಸೀಸನ್ನಲ್ಲೂ ಉತ್ತಮ ಪೈಪೋಟಿ ನಡೆಯಲಿದೆ ಎಂದಿದ್ದಾರೆ.
5/ 8
ಯುಎಇ ನಲ್ಲಿ ನಡೆದ ಐಪಿಎಲ್ನ ಪ್ರದರ್ಶನವನ್ನು ನೀವು ಗಣನೆಗೆ ತೆಗೆದುಕೊಳ್ಳಬೇಡಿ. ಮ್ಯಾಕ್ಸ್ವೆಲ್ ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 19 ಎಸೆತಗಳಲ್ಲಿ 45, ಎರಡನೇ ಪಂದ್ಯದಲ್ಲಿ 29 ಎಸೆತಗಳಲ್ಲಿ 69 ಹಾಗೂ 3ನೇ ಪಂದ್ಯದಲ್ಲಿ 38 ಎಸೆತಗಳಲ್ಲಿ 59 ರನ್ ಸಿಡಿಸಿದ್ದಾರೆ.
6/ 8
ಸದ್ಯ ಮ್ಯಾಕ್ಸ್ವೆಲ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಮುಂದಿನ ಐಪಿಎಲ್ ಹರಾಜಿನಲ್ಲಿ ಅವರು ಬಹುಬೇಡಿಕೆಯ ಆಟಗಾರರಾಗಿರುತ್ತಾರೆ ಎಂದು ಮೈಕೆಲ್ ವಾನ್ ತಿಳಿಸಿದರು.
7/ 8
7ನೇ ಕ್ರಮಾಂಕದಲ್ಲಿ ಅತ್ಯುತ್ತಮವಾಗಿ ಮ್ಯಾಕ್ಸ್ವೆಲ್ ಬ್ಯಾಟ್ ಬೀಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅದ್ಭುತ ಫೀಲ್ಡರ್ ಕೂಡ. ತಮ್ಮ ಕ್ಷೇತ್ರರಕ್ಷಣೆಯ ಮೂಲಕ ತಂಡಕ್ಕೆ 5 ರಿಂದ 10 ರನ್ ಉಳಿಸಿಕೊಡುತ್ತಾರೆ. ಹೀಗಾಗಿ ಆತನನ್ನು ಖರೀದಿಸಲು ಎಲ್ಲಾ ಫ್ರಾಂಚೈಸಿಗಳು ಹೆಚ್ಚಿನ ಆಸಕ್ತಿ ತೋರಿಸಲಿದೆ ಎಂದು ಮೈಕೆಲ್ ವಾನ್ ತಿಳಿಸಿದರು.
8/ 8
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 13ನಲ್ಲಿ ಮ್ಯಾಕ್ಸ್ವೆಲ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ಪರ 13 ಪಂದ್ಯಗಳನ್ನಾಡಿದ ಮ್ಯಾಕ್ಸಿ ಗಳಿಸಿದ್ದು ಕೇವಲ 108 ರನ್ಗಳು ಮಾತ್ರ. ಅದಕ್ಕಿಂತಲೂ ವಿಚಿತ್ರ ಎಂದರೆ ಈ ಬಾರಿಯ ಐಪಿಎಲ್ನಲ್ಲಿ ಮ್ಯಾಕ್ಸ್ವೆಲ್ ಬ್ಯಾಟ್ನಿಂದ ಒಂದೇ ಒಂದು ಸಿಕ್ಸ್ ಸಿಡಿದಿರಲಿಲ್ಲ. ಇನ್ನು ಬೌಂಡರಿ ರೂಪದಲ್ಲಿ 9 ಫೋರ್ ಬಾರಿಸಿರುವುದೇ ಸಾಧನೆ.