Video: ಹಕ್ಕಿಯನ್ನು ತಿನ್ನುತ್ತಿರುವ ಜೇಡ; ವೈರಲ್​ ಆಗುತ್ತಿದೆ ಈ ವಿಡಿಯೋ

Viral Video: ದೃಶ್ಯದಲ್ಲಿ ಮರದ ಬೀಮ್​ನಲ್ಲಿ ನೇತಾಡುತ್ತಿರುವ ಜೇಡ ಹಕ್ಕಿಯನ್ನು ಹಿಡಿದುಕೊಂಡು ಅದರ ಕುತ್ತಿಗೆಯ ಭಾಗವನ್ನು ಸೇವಿಸುತ್ತಿದೆ

news18-kannada
Updated:September 22, 2020, 7:32 AM IST
Video: ಹಕ್ಕಿಯನ್ನು ತಿನ್ನುತ್ತಿರುವ ಜೇಡ; ವೈರಲ್​ ಆಗುತ್ತಿದೆ ಈ ವಿಡಿಯೋ
Viral Video: ದೃಶ್ಯದಲ್ಲಿ ಮರದ ಬೀಮ್​ನಲ್ಲಿ ನೇತಾಡುತ್ತಿರುವ ಜೇಡ ಹಕ್ಕಿಯನ್ನು ಹಿಡಿದುಕೊಂಡು ಅದರ ಕುತ್ತಿಗೆಯ ಭಾಗವನ್ನು ಸೇವಿಸುತ್ತಿದೆ
  • Share this:
ಹಕ್ಕಿಗಳು ಸಣ್ಣ ಜೇಡ, ಹುಳು ಹುಪ್ಪಟೆಗಳನ್ನು ಹೆಕ್ಕಿ ತಿನ್ನುತ್ತಾ ಬದುಕುತ್ತವೆ. ದೂರದಲ್ಲಿ ಕಂಡ ಆಹಾರವನ್ನು ಗಕ್ಕನೆ ಬಂದು ತನ್ನ ಕೊಕ್ಕಿನಲ್ಲಿ ಹಿಡಿದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಆದರೆ ಇಲ್ಲೊಂದು ದೃಶ್ಯ ಮಾತ್ರ ವಿಚಿತ್ರವಾಗಿದೆ.   ಯಾಕೆಂದರೆ ಇಲ್ಲಿ ಜೇಡವೇ ಹಕ್ಕಿಯನ್ನು ತಿನ್ನುತ್ತದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಅನೇಕರು ಜೇಡ ಹಕ್ಕಿಯನ್ನು ತಿನ್ನುತ್ತಿರುವುದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ನೇಚರ್​ ಇನ್​​ ಸ್ಕ್ಯಾರಿ ಎಂಬ ಟ್ವಿಟ್ಟರ್​ ಖಾತೆ ವಿಡಿಯೋವನ್ನು ಅಪ್​ಲೋಡ್​ ಮಾಡಿದೆ. ಅದರಲ್ಲಿ ದೊಡ್ಡ ಗಾತ್ರದ ಜೇಡವೊಂದು ಹಕ್ಲಿಯನ್ನು ತಿನ್ನುತಿರುವುದು ಕಂಡುಬಂದಿದೆ. ಅವಿಕುಲೇರಿಝಾ ಎಂಬ ಜೇಡ ಪಕ್ಷಿಯನ್ನು ಆಹಾರವಾಗಿ ಸೇವಿಸುತ್ತದೆ ಎಂದು ಬರೆದುಕೊಂಡಿದೆ.

ದೃಶ್ಯದಲ್ಲಿ ಮರದ ಬೀಮ್​ನಲ್ಲಿ ನೇತಾಡುತ್ತಿರುವ ಜೇಡ ಹಕ್ಕಿಯನ್ನು ಹಿಡಿದುಕೊಂಡು ಅದರ ಕುತ್ತಿಗೆಯ ಭಾಗವನ್ನು ಸೇವಿಸುತ್ತಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿಡಿಯೋ ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.



ಮೊದಲೇ ಹೇಳಿದಂತೆ ಅವಿಕುಲೇರಿಯಾ ಜೇಡದ ವೈಜ್ನಾನಿಕ ಹೆಸರು ಪಿಂಕ್​ ಟೋ ಟರಂಟುಲಾ ಎಂಂದಾಗಿದ್ದು, ಹೆಚ್ಚಾಗಿ ದಕ್ಷಿಣ ಅಮೆರಿಕದಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಇಲಿ, ಹಲ್ಲಿ, ಕಪ್ಪೆಗಳನ್ನು ಹಿಡಿದು ಆಹಾರವನ್ನಾಗಿ ಸೇವಿಸುತ್ತದೆ.
Published by: Harshith AS
First published: September 22, 2020, 7:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading