Viral Video: ಭೂತ...ಭೂತ; ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ!

Video Viral: ಅಮೆರಿಕದ ಪೆನ್ಸಿಲ್ವೇನಿಯಾದ ಸಿವಿಲ್ ವಾರ್ ಸೈಟ್​ನಲ್ಲಿ ಈ ದೃಶ್ಯ ಕಂಡುಬಂದಿದೆ. ಸಿವಿಲ್ ವಾರ್ ಸೈಟ್ ಐತಿಹಾಸಿಕ ಸ್ಥಳವಾಗಿದ್ದು, 1863 ಜೂನ್ 1 ರಿಂದ 3ರ ತನಕ ಈ ಸ್ಥಳದಲ್ಲಿ ಯುದ್ಧ ನಡೆದಿತ್ತು. ಆ ಸಂದರ್ಭದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಸೈನಿಕರು ಸಾವನ್ನಪ್ಪಿದ್ದರು.

news18-kannada
Updated:September 22, 2020, 11:08 AM IST
Viral Video: ಭೂತ...ಭೂತ; ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ!
Photo: Youtube
  • Share this:
ಕಾರಿನಲ್ಲಿ ಒಬ್ಬರೇ ಚಲಿಸುವ ವೇಳೆ ತಕ್ಷಣ ಭೂತವೊಂದು ಕಂಡರೆ ಎನಾಗಬಹುದು.? ಎದೆ ಬಡಿತ ನಿಲ್ಲಬುದು!.ಇಲ್ಲದಿದ್ದರೆ ಎದೆ ಬಡಿತ ಹೆಚ್ಚಾಗಿ ಜೋರು ಚೀರಾಡ ಬೇಕಾದ ಪ್ರಸಂಗ ಬರಬಹುದು!. ಆದರೆ ಇಲ್ಲೊಂದು ದೃಶ್ಯದಲ್ಲಿ ಭೂತದಂತೆ ನೆರಳೊಂದು ಕಾಣಿಸಿಕೊಂಡಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಆ ದೃಶ್ಯ ಕಣ್ಣಿಗೆಕಟ್ಟಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯವನ್ನು ಕಂಡು ಅನೇಕರು ಭಯಭೀತರಾಗಿದ್ದಾರೆ. ಅಮೆರಿಕದಲ್ಲಿ ಈ ದೃಶ್ಯ ಕಂಡುಬಂದಿದ್ದು, ಕಾರಿನಲ್ಲಿ ಪ್ರಯಾಣಿಸುವ ವೇಳೆ ನೆರಳೊಂದು ಭೂತದಂತೆ ಕಾಣಿಸಿಕೊಂಡಿದೆ. ಮಾತ್ರವಲ್ಲದೆ ಕಾರ್​ ಒಳಗಿದ್ದವರು ತಮ್ಮ ಕ್ಯಾಮೆರಾದ ಮೂಲಕ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಶೇರ್ ಮಾಡಿದ್ದಾರೆ. ಅನೇಕರು ವಿಡಿಯೋ ಕಂಡು ಭಯಭೀತರಾಗಿದ್ದಾರೆ.

ಅಮೆರಿಕದ ಪೆನ್ಸಿಲ್ವೇನಿಯಾದ ಸಿವಿಲ್ ವಾರ್ ಸೈಟ್​ನಲ್ಲಿ ಈ ದೃಶ್ಯ ಕಂಡುಬಂದಿದೆ. ಸಿವಿಲ್ ವಾರ್ ಸೈಟ್ ಐತಿಹಾಸಿಕ ಸ್ಥಳವಾಗಿದ್ದು, 1863 ಜೂನ್ 1 ರಿಂದ 3ರ ತನಕ ಈ ಸ್ಥಳದಲ್ಲಿ ಯುದ್ಧ ನಡೆದಿತ್ತು. ಆ ಸಂದರ್ಭದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಸೈನಿಕರು ಸಾವನ್ನಪ್ಪಿದ್ದರು.ಪ್ರಯಾಣಿಕರಿಬ್ಬರು ಕಾರಿನಲ್ಲಿ ಪ್ರಯಾಣಿಸುವ ವೇಳೆ ದೂರದಲ್ಲಿ ಮನ್ಯಷ್ಯರಿಬ್ಬರು ಚಲಿಸಿದಂತೆ ದೃಶ್ಯ ಅವರ ಕಣ್ಣಿಗೆ ಕಟ್ಟಿದೆ.  ಕ್ಯಾಮೆರಾ ಆನ್ ಇದ್ದ ಕಾರಣ ದೃಶ್ಯ ಕ್ಯಾಮೆರಾದಲ್ಲೂ ಸೆರೆಯಾಗಿದೆ. ಹಾಗಾಗಿ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಈ ದೃಶ್ಯವನ್ನು ಕಂಡು ಅಚ್ಚರಿಗೊಂಡಿದ್ದಾರೆ. ಮಾತ್ರವಲ್ಲದೆ, ಬಗೆ ಬಗೆಯ ಕಾಮೆಂಟ್ ಕೂಡ ಬರೆದಿದ್ದಾರೆ.
First published: September 21, 2020, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading