ಬರೋಬ್ಬರಿ 4 ಲಕ್ಷ ಬೆಲೆಯ ಮಾಸ್ಕ್​​!; ಅಷ್ಟಕ್ಕೂ ಇದರಲ್ಲೇನಿದೆ

Face Mask: ಎರಡು ಮಾಸ್ಕ್​​ ತಯಾರಿಸಿದ್ದೇವೆ. ಒಂದರಲ್ಲಿ ಚಿನ್ನ ಮತ್ತು ಅಮೆರಿಕನ್​ ಡೈಮಂಡ್​​ ಅಳವಡಿಸಲಾಗಿದ್ದು, 1.5 ಲಕ್ಷಕ್ಕೆ ಮಾರಾಟವಾಗಿದೆ. ಮತ್ತೊಂದು ಮಾಸ್ಕ್​​​​ ಚಿನ್ನ, ಬೆಳ್ಳಿ, ವಜ್ರ, ಅಮೆರಿಕನ್​ ಡೈಮಂಡ್​​ ಬಳಸಿ ತಯಾರಿಸಿದ್ದು, 4 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ದೀಪಕ್​.


Updated:July 12, 2020, 6:06 PM IST
ಬರೋಬ್ಬರಿ 4 ಲಕ್ಷ ಬೆಲೆಯ ಮಾಸ್ಕ್​​!; ಅಷ್ಟಕ್ಕೂ ಇದರಲ್ಲೇನಿದೆ
ದುಬಾರಿ ಫೇಸ್​ಮಾಸ್ಕ್​​
  • Share this:
ಕೊರೋನಾ ಸಮಯದಲ್ಲಿ ವಿವಿಧ ವಿನ್ಯಾಸದ ಮಾಸ್ಕ್​ಗಳು ಮಾರುಕಟ್ಟೆಗೆ ಬಂದಿವೆ. ಇತ್ತೀಚೆಗೆ ಪುಣೆಯ ವ್ಯಕ್ತಿಯೊಬ್ಬ ಚಿನ್ನದ ಫೇಸ್​​​ಮಾಸ್ಕ್​​​ ಧರಿಸಿರುವ ಸುದ್ದಿಯೊಂದು ಭಾರೀ ವೈರಲ್​ ಆಗಿತ್ತು, ಬರೋಬ್ಬರಿ 2.89 ಲಕ್ಷ ಬೆಲೆ ಬಾಳುವ ಮಾಸ್ಕ್​ ಧರಿಸಿರುವ ವ್ಯಕ್ತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದೀಗ ಅದಕ್ಕಿಂತ ಹೆಚ್ಚು ಬೆಲೆ ಬಾಳುವ ಮಾಸ್ಕ್​ವೊಂದರ ಕುರಿತು ಸುದ್ದಿಯಾಗಿದೆ. ಜ್ಯುವೆಲ್ಲರಿ ಮಳಿಗೆಯೊಂದು 4 ಲಕ್ಷ ಬೆಲೆಯ ಫೇಸ್​​ಮಾಸ್ಕ್​​​​​ ಸಿದ್ದಪಡಿಸಿ ಮಾಡರಾಟಕ್ಕೆ ಇಟ್ಟಿದೆ.

ಸಾಮಾನ್ಯವಾಗಿ ಫೇಸ್​ಮಾಸ್ಕ್​ನಲ್ಲಿ ಅಂತದ್ದೇನಿದೆ ಎಂದು ಹಲವರಿಗೆ ಅನಿಸಿರಬಹುದು. ಆದರೆ ಈ ಫೇಸ್​​ಮಾಸ್ಕ್​​ ಚಿನ್ನ, ಬೆಳ್ಳಿ, ವಜ್ರ ಮತ್ತು ಅಮೆರಿಕನ್ ಡೈಮಂಡ್​​ ಬಳಸಿ ತಯಾರಿಸಲಾಗಿದೆ. ಹಾಗಾಗಿ ಈ ಮಾಸ್ಕ್​​ ಅನ್ನು ಬರೋಬ್ಬರಿ  4 ಲಕ್ಷ ರೂಪಾಯಿ ಜ್ಯುವೆಲ್ಲರಿ ಮಳಿಗೆ ಮಾರಾಟ ಮಾಡುತ್ತಿದೆ.

ದೀಪಕ್​ ಚೋಕ್ಸಿ ಎಂಬವರು ಈ ಮಾಸ್ಕ್​​ ಅನ್ನು ಸಿದ್ಧಪಡಿಸಿದ್ದಾರೆ. ಜೊತೆಗೆ ಬೆಲೆ ಬಾಳುವ ಮಾಸ್ಕ್ ಸಿದ್ದಪಡಿಸಲು ಪ್ರಮುಖ ಕಾರಣವನ್ನು ತಿಳಿಸಿದ್ದಾರೆ.​​ ಗ್ರಾಹಕರೊಬ್ಬರು ತಮ್ಮ ಮಳಿಗೆಗೆ ಆಭರಣ ಕೊಂಡುಕೊಳ್ಳಲೆಂದು ಬಂದಿದ್ದರು. ಈ ವೇಳೆ ಚಿನ್ನ, ಬೆಳ್ಳಿ, ಡೈಮಂಡ್​ಗಳಿಂದ ಮಾಸ್ಕ್​​ ಸಿದ್ಧಪಡಿಸಿ ಎಂದರು. ಬಹುಷ ಅವರ ಮದುವೆ ಮುಂದಿನ ವರ್ಷ ಇರಬೇಕು. ಏಕೆಂದರೆ ಎರಡು ಮಾಸ್ಕ್​​ ತಯಾರಿಸಲು ಹೇಳಿದ್ದರು. ಹಾಗಾಗಿ ನಾನು ಮತ್ತು ಡಿಸೈನರ್​​ ಇಬ್ಬರು ಚರ್ಚಿಸಿ ಮಾಸ್ಕ್​​ ತಯಾರಿಸಿದ್ದೇವೆ.

ಎರಡು ಮಾಸ್ಕ್​​ ತಯಾರಿಸಿದ್ದೇವೆ. ಒಂದರಲ್ಲಿ ಚಿನ್ನ ಮತ್ತು ಅಮೆರಿಕನ್​ ಡೈಮಂಡ್​​ ಅಳವಡಿಸಲಾಗಿದ್ದು, 1.5 ಲಕ್ಷಕ್ಕೆ ಮಾರಾಟವಾಗಿದೆ. ಮತ್ತೊಂದು ಮಾಸ್ಕ್​​​​ ಚಿನ್ನ, ಬೆಳ್ಳಿ, ವಜ್ರ, ಅಮೆರಿಕನ್​ ಡೈಮಂಡ್​​ ಬಳಸಿ ತಯಾರಿಸಿದ್ದು, 4 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ದೀಪಕ್​.

ಬಾಲಿವುಡ್​ ಅಂಗಳದಲ್ಲಿ ಸಾಲು ಸಾಲು ಕೊರೋನಾ ಪ್ರಕರಣ; ಆತಂಕದಲ್ಲಿ ಅಭಿಮಾನಿಗಳು

ಅನುಪಮ್​ ಖೇರ್​ ಕುಟುಂಬಕ್ಕೆ ಕೊರೋನಾ ಸಂಕಟ; ತಾಯಿ, ಕುಟುಂಬ ಸದಸ್ಯರಿಗೆ ಪಾಸಿಟಿವ್​!
Published by: Harshith AS
First published: July 12, 2020, 6:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading