Video: ತೆಂಗಿನ ಮರವೇರಿ ಸುದ್ದಿಗೋಷ್ಠಿ ನಡೆಸಿದ ಶ್ರೀಲಂಕಾ ತೆಂಗು ಸಚಿವ!

ಅರುಂಧಿಕಾ ಫರ್ನಾಂಡೊ ಶ್ರೀಲಂಕಾದ ತೆಂಗು ಸಚಿವ. ಶ್ರೀಲಂಕಾದ ಡಂಕೋಟುವಾದಲ್ಲಿರುವ ತಮ್ಮ ತೋಟದಲ್ಲಿ ಸೆಪ್ಟೆಂಬರ್​ 18ರಂದು ಸುದ್ದಿಗೋಷ್ಠಿ ಕರೆದಿದ್ದರು. ಮಾಧ್ಯಮದವರು ಅಲ್ಲಿಗೆ ತೆರಳಿದಾಗ ಅಚ್ಚರಿ ಒಂದು ಕಾದಿತ್ತು.

news18-kannada
Updated:September 19, 2020, 12:14 PM IST
Video: ತೆಂಗಿನ ಮರವೇರಿ ಸುದ್ದಿಗೋಷ್ಠಿ ನಡೆಸಿದ ಶ್ರೀಲಂಕಾ ತೆಂಗು ಸಚಿವ!
ಶ್ರೀಲಂಕಾ ಸಚಿವ
  • Share this:
ಕೊಲಂಬೋ (ಸೆ.19): ತಾವು ನಡೆಸುವ ಸುದ್ದಿಗೋಷ್ಠಿ ಪರಿಣಾಮಕಾರಿಯಾಬೇಕು ಎಂದು ಸಾಕಷ್ಟು ಜನರು ಬೇರೆ ಬೇರೆ ಕಸರತ್ತು ನಡೆಸುತ್ತಾರೆ. ಕೃಷಿ ಸಚಿವರು ಗದ್ದೆ-ತೋಟದಲ್ಲಿ, ಪಶು ಸಂಗೋಪನೆ ಸಚಿವರು ದನದ  ಕೊಟ್ಟಿಗೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಉದಾಹರಣೆಗಳಿವೆ. ಅದೇ ರೀತಿ ಶ್ರೀಲಂಕಾದ ತೆಂಗು ಸಚಿವ ಸುದ್ದಿಗೋಷ್ಠಿಯನ್ನು ತೆಂಗಿನ ಮರದ ಮೇಲೆ ನಡೆಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ! ಅರುಂಧಿಕಾ ಫರ್ನಾಂಡೊ ಶ್ರೀಲಂಕಾದ ತೆಂಗು ಸಚಿವ. ಶ್ರೀಲಂಕಾದ ಡಂಕೋಟುವಾದಲ್ಲಿರುವ ತಮ್ಮ ತೋಟದಲ್ಲಿ ಸೆಪ್ಟೆಂಬರ್​ 18ರಂದು ಸುದ್ದಿಗೋಷ್ಠಿ ಕರೆದಿದ್ದರು. ಮಾಧ್ಯಮದವರು ಅಲ್ಲಿಗೆ ತೆರಳಿದಾಗ ಅಚ್ಚರಿ ಒಂದು ಕಾದಿತ್ತು. ಕಾರಣ ಅರುಂಧಿಕಾ ಫರ್ನಾಂಡೊ ಯಂತ್ರದ ಮೂಲಕ  ತೆಂಗಿನ ಮರ ಏರಿದ್ದರೆ. ಅಲ್ಲಿಂದಲೇ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ್ದಾರೆ! ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ತೆಂಗಿನ ಮರ ಏರಿದ ನಂತರ ಮಾತನಾಡಿದ ಅವರು, ಶ್ರೀಲಂಕಾದಲ್ಲಿ ತೆಂಗಿನ ಕಾಯಿ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಇದಕ್ಕೆ ಕಾರಣ, ಹೆಚ್ಚುತ್ತಿರುವ ಬೇಡಿಕೆ. ದೇಶದಲ್ಲಿ ತೆಂಗಿಗೆ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆ ಆಗಿದೆ ಎಂದರು.ಶ್ರೀಲಂಕಾದ ವ್ಯಕ್ತಿಯೋರ್ವ ತಯಾರಿಸಿದ ತೆಂಗಿನ ಮರ ಏರುವ ಯಂತ್ರವನ್ನು ಕೂಡ ಅರುಂಧಿಕಾ ಪರೀಕ್ಷೆ ಮಾಡಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಯಂತ್ರವನ್ನು ಪರಿಚಯಿಸುವ ಭರವಸೆಯನ್ನು ಅವರು ನೀಡಿದ್ದಾರೆ.



ಇನ್ನು, ಇವರು ಮರ ಏರಿರುವ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. ಕೆಲವರು ಇವರು ಸುದ್ದಿಗೋಷ್ಠಿ ನಡೆಸಿದ ವಿಧಾನವನ್ನು ಕೊಂಡಾಡಿದ್ದಾರೆ. ಇನ್ನೂ ಕೆಲವರು ಇದನ್ನು ಟ್ರೋಲ್​ ಮಾಡಿದ್ದಾರೆ.
Published by: Rajesh Duggumane
First published: September 19, 2020, 9:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading