RRB NTPC Recruitment 2020: ಅಪ್ಲಿಕೇಷನ್ ಸ್ಟೇಟಸ್​ ಚೆಕ್​ ಮಾಡೋದಕ್ಕೆ ಇಲ್ಲಿದೆ ಮಾಹಿತಿ

Railway Recruitment 2020 | rrbonlinereg.co.in: ಈಗಾಗಲೇ ಈ ಹುದ್ದೆಗಳಿಗೆ ಪರೀಕ್ಷೆ ನಡೆಯಬೇಕಿತ್ತು. ಆದರೆ ಕೊರೋನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ತಡವಾಗಿತ್ತು.

news18-kannada
Updated:September 21, 2020, 2:45 PM IST
RRB NTPC Recruitment 2020: ಅಪ್ಲಿಕೇಷನ್ ಸ್ಟೇಟಸ್​ ಚೆಕ್​ ಮಾಡೋದಕ್ಕೆ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
  • Share this:
RRB NTPC Recruitment 2020 | ನವದೆಹಲಿ (ಸೆಪ್ಟೆಂಬರ್ 21): ಖಾಲಿ ಇರುವ 1.40 ಲಕ್ಷ ಹುದ್ದೆಗಳನ್ನು ತುಂಬಲು ರೈಲ್ವೆ ಇಲಾಖೆ ಮುಂದಾಗಿದೆ. ಡಿಸೆಂಬರ್​ 15ರಿಂದ ಪರೀಕ್ಷೆ ನಡೆಯಲಿದೆ. ಈಗಾಗಲೇ ಅರ್ಜಿ ಇದಕ್ಕೆ ಆಹ್ವಾನ ಮಾಡಲಾಗಿತ್ತು. ನಿಮ್ಮ ಅರ್ಜಿಯನ್ನು ಸ್ವೀಕರಿಸಲಾಗಿದೆಯೇ ಅಥವಾ ರಿಜೆಕ್ಟ್​ ಮಾಡಲಾಗಿದೆಯೇ ಎಂಬುದನ್ನು rrbonlinereg.co.inಗೆ ತೆರಳು ಪರೀಕ್ಷಿಸಬಹುದು. ಗಾರ್ಡ್​, ಕ್ಲರ್ಕ್​, ಟ್ರ್ಯಾಕ್​ ನಿರ್ವಹಣಾಕಾರ, ಪಾಯಿಂಟ್ಸ್​ಮೆನ್​ಗ ಹುದ್ದೆಗಳಿಗೆ ರೈಲ್ವೆ ಇಲಾಖೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತಿದೆ. ಇದಕ್ಕೆ ಕಂಪ್ಯೂಟರ್ ಆಧಾರಿತ​ ಪರೀಕ್ಷೆ ನಡೆಸುತ್ತಿದೆ.

ಈಗಾಗಲೇ ಈ ಹುದ್ದೆಗಳಿಗೆ ಪರೀಕ್ಷೆ ನಡೆಯಬೇಕಿತ್ತು. ಆದರೆ ಕೊರೋನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಡೀ ದೇಶದ ಆರ್ಥಿಕ ಚಟುವಟಿಕೆಗಳು ನಿಂತಿದ್ದವು. ಅಷ್ಟೇ ಅಲ್ಲ, ರೈಲ್ವೆ ಕೂಡ ಸಂಚಾರ ನಿಲ್ಲಿಸಿತ್ತು. ಅಲ್ಲದೆ, ಪರೀಕ್ಷೆಗಳನ್ನು ನಡೆಸಲು ಭಾರೀ ವಿರೋಧಗಳು ಕೇಳಿ ಬಂದಿತ್ತು. ಈ ಎಲ್ಲ ಕಾರಣಕ್ಕೆ ಪರೀಕ್ಷೆಯನ್ನು ನಡೆಸಿರಲಿಲ್ಲ.


  • ನಿಮ್ಮ ಅರ್ಜಿ ಸ್ಟೇಟಸ್​ ನೋಡೋದು ಹೇಗೆ?

  • rrbonlinereg.co.in ವೆಬ್​ಸೈಟ್​ಗೆ ಭೇಟಿ ನೀಡಿ

  • Application Status ಕಾಲಂ ಮೇಲೆ ಕ್ಲಿಕ್​ ಮಾಡಿ

  • ನಿಮ್ಮ ನಗರವನ್ನು ಆಯ್ಕೆ ಮಾಡಿ
  • ಈ ವೇಳೆ ಹೊಸ ಪೇಜ್​ ಓಪನ್​ ಆಗಲಿದೆ

  • ನಂತರ ಲಾಗಿನ್​ ಮಾಹಿತಿಯನ್ನು ತುಂಬಬೇಕು

  • ಈ ವೇಳೆ ನಿಮ್ಮ ಅಪ್ಲಿಕೇಷನ್​ ಸ್ಟೇಟಸ್​ ಅಲ್ಲಿ ಕಾಣುತ್ತದೆ

Published by: Rajesh Duggumane
First published: September 21, 2020, 2:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading