Video Viral: ಇದು ಮೂಗಿನ ರಂಧ್ರಕ್ಕೆ ಸಿಲುಕಿಸುವ ಮಾಸ್ಕ್​; ಹೇಗಿದೆ ಗೊತ್ತಾ?

Nose Mask: ಆರ್​ಜಿವಿ ಗ್ರೂಪ್​ ಮಾಲೀಕರಾದ ಹರ್ಷೇಂದ್ರ ಗೋಯೆಂಕಾ ಅವರು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮೇಲ್ನೋಟಕ್ಕೆ ಕಾಣದ ವಿಶೇಷ ಮಾಸ್ಕ್​ವೊಂದಿದೆ.

news18-kannada
Updated:October 29, 2020, 2:50 PM IST
Video Viral: ಇದು ಮೂಗಿನ ರಂಧ್ರಕ್ಕೆ ಸಿಲುಕಿಸುವ ಮಾಸ್ಕ್​; ಹೇಗಿದೆ ಗೊತ್ತಾ?
ಮಾಸ್ಕ್​
  • Share this:
ಮನೆ, ಪೇಟೆ, ಮಾಲ್​ಗಳಲ್ಲಿ ಸ್ವಚ್ಚಂಧವಾಗಿ ಓಡಾಡುತ್ತಿದ್ದವರು ಇಂದು ಕೊರೋನಾದಿಂದಾಗಿ ಮಾಸ್ಕ್​ ಧರಿಸಿ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಯಾವಾಗ ಕೊರೋನಾ ಭಾರತ ಬಿಟ್ಟು ತೊಲಗುತ್ತೋ?, ಮಾಸ್ಕ್​ ಇಲ್ಲದೆ ಓಡಾಡ ನಡೆಸುವ ಸಮಯ ಯಾವಾಗ ಬರುತ್ತೋ? ಎಂದು ಚಿಂತಿಸುವ ಕಾಲ ಬಂದಿದೆ. ಆದರೆ ಕೊರೋನಾದಿಂದಾಗಿ ಮಾಸ್ಕ್​ ಅನಿವಾರ್ಯವಾಗಿದೆ. ಮಾಸ್ಕ್​ ಇಲ್ಲದೆ ಮನೆಯಿಂದ ಹೊರಗೆ ಹೋಗಲು ಭಯಪಡುತ್ತಿದ್ದಾರೆ. ಕೊರೋನಾ ತಗುಲಿ ಸಾಯನ್ನಪ್ಪುತ್ತೇವೆ ಎಂಬ ಭಯ ಒಂದೆಡೆಯಾದರೆ, ಮತ್ತೊಂದೆಡೆ ಮಾಸ್ಕ್​ ಇಲ್ಲದೆ ಹೋದರೆ ದಂಡ ಕಟ್ಟಬೇಕಾಗುತ್ತದೆ ಎಂದು. ಅಂತು ಸದ್ಯದ ಪರಿಸ್ಥಿತಿಯಲ್ಲಿ ಮಾಸ್ಕ್​ ಬೇಕೆ ಬೇಕು.

ಮಹಾಮಾರಿ ಕೊರೋನಾ ಭಾರತಕ್ಕೆ ಬಂದ ನಂತರ ಮಾಸ್ಕ್​ಗಳ ಬಳಕೆ ಹೆಚ್ಚಾಗಿದೆ. ಹೊಸ ವಿನ್ಯಾಸದ ಮಾಸ್ಕ್​ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. 10 ರೂವಿಂದ ಹಿಡಿದು ಲಕ್ಷ ಬೆಲೆಯ ಮಾಸ್ಕ್​ಗಳು ಮಾರುಕಟ್ಟೆಯಲ್ಲಿವೆ. ಅಷ್ಟೇ ಏಕೆ ಚಿನ್ನದ, ವಜ್ರದ ಮಾಸ್ಕ್​ಗಳು ಧರಿಸುವ ವ್ಯಕ್ತಿಗಳು ಇದ್ದಾರೆ. ಆದರೀಗ ಅವೆಲ್ಲದಕ್ಕೂ ವಿಶೇಷವೆಂಬಂತೆ ಹೊಸ ಮಾಸ್ಕ್​ವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಆರ್​ಪಿಜಿ ಗ್ರೂಪಿನ ಅಧ್ಯಕ್ಷರಾದ ಹರ್ಷ ಗೋಯೆಂಕಾ ಅವರು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮೇಲ್ನೋಟಕ್ಕೆ ಕಾಣದ ವಿಶೇಷ ಮಾಸ್ಕ್​ವೊಂದಿದೆ. ಈವರೆಗೆ ಬಂದಿರುವ ಮಾಸ್ಕ್​ಗಳಲ್ಲಿ ಈ ಮಾಸ್ಕ್​​ ಕೊಂಚ ಡಿಫರೆಂಟ್​ ಆಗಿದೆ. ಸದ್ಯ ಮಾರುಕಟ್ಟೆಯಲ್ಲಿ ಮೂಗು ಮತ್ತು ಬಾಯಿ ಮುಚ್ಚಿಕೊಳ್ಳುವ ಮಾಸ್ಕ್​ಗಳಿವೆ. ಆದರೆ ಇದು ಮೂಗಿನ ರಂಧ್ರಗಳಿಗೆ ಸಿಕ್ಕಿಸುವ ಮಾಸ್ಕ್​ ಆಗಿದೆ.ದೃಶ್ಯದಲ್ಲಿ ಕಾಣುವಂತೆ ಅನೇಕರು ಈ ಮಾಸ್ಕ್​ವನ್ನು ಹಾಕಿಕೊಳ್ಳುತ್ತಿದ್ದಾರೆ. ಮಾತ್ರವಲ್ಲದೆ. ಸರಾಗವಾಗಿ ಉಸಿರಾಡಸಬಹುದಾಗಿದೆ. ಗಾಳಿ, ಬ್ಯಾಕ್ಟೀರಿಯಾ ತಡೆದು ಶುದ್ಧಗಾಳಿಯನ್ನು ಒದಗಿಸುತ್ತಂತೆ. ಟ್ರಾವೆಲ್​​ಗೂ ಯೋಗ್ಯವಾಗಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಸದ್ಯ, ಈ ವಿಶೇಷ ಮಾಸ್ಕಿನ ವಿಡಿಯೋ ನೋಡಿ ಅನೇಕರು ಕಾಮೆಂಟ್​ ಬರೆಯುತ್ತಿದ್ದಾರೆ. ಮಾಸ್ಕ್​ ಮೂಗಿನೊಳ್ಳಕೆ ಹಾಕಿದರೆ ಸಮಸ್ಯೆ ಆಗಲ್ವಾ? ಸೀನು ಬಂದರೆ ಏನು ಆಗಲ್ವಾ? ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಆದರೆ ಟ್ವಿಟ್ಟಿಗರ ಪ್ರಶ್ನೆಗೆ ಸದ್ಯ ಉತ್ತರ ಸಿಕ್ಕಿಲ್ಲ.

Video Viral: ಕೋಟಿ ಬೆಲೆಯ ಕಾರನ್ನು ನಿಮಿಷಾರ್ಧದಲ್ಲೇ ಸುಟ್ಟುಹಾಕಿದ; ಆತನ ಸಿಟ್ಟಿಗೆ ಕಾರಣವೇನು ಗೊತ್ತಾ?
Published by: Harshith AS
First published: October 29, 2020, 2:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading