28 ಮಿಲಿಯನ್ ಫಾಲೋವರ್ಸ್ ಹೊಂದಿರುವ ಸ್ಟಾರ್ ಸೆಲೆಬ್ರಿಟಿಯ ಖಾಸಗಿ ವಿಡಿಯೋ ವೈರಲ್?

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಿಶಾ ಅವರು ತಮ್ಮ ಅಭಿಮಾನಿಗಳ ಮುಂದೆ ಬಂದು ಕಣ್ಣೀರು ಸುರಿಸಿದ್ದಾರೆ. ಇಂಥ ಕೆಲಸ ಯಾವ ಕಾರಣಕ್ಕೆ ಮಾಡುತ್ತೀರಿ, ವಿಡಿಯೋವನ್ನು ಇಡೀ ದೇಶಾದ್ಯಂತ ಶೇರ್ ಮಾಡಿ ಎಂದು ನೋವಿನಿಂದ ನುಡಿದಿದ್ದಾರೆ.

news18-kannada
Updated:June 29, 2020, 1:34 PM IST
28 ಮಿಲಿಯನ್ ಫಾಲೋವರ್ಸ್ ಹೊಂದಿರುವ ಸ್ಟಾರ್ ಸೆಲೆಬ್ರಿಟಿಯ ಖಾಸಗಿ ವಿಡಿಯೋ ವೈರಲ್?
ಸ್ಟಾರ್ ಸೆಲೆಬ್ರಿಟಿಯ ಖಾಸಗಿ ವಿಡಿಯೋ ವೈರಲ್?
  • Share this:
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸ್ಟಾರ್ ಸೆಲೆಬ್ರಿಟಿಗಳ ಖಾಸಗಿ ವಿಡಿಯೋ ಹರಿದಾಡುತ್ತಿರುವ ಪ್ರಕರಣ ಹೆಚ್ಚಾಗುತ್ತದೆ. ಅದರಲ್ಲೂ ಫೇಮಸ್ ಆ್ಯಪ್ ಟಿಕ್​ಟಾಕ್​ನಲ್ಲಿ ಸದ್ಯ ಈರೀತಿಯ ವಿಡಿಯೋ ಹೆಚ್ಚು ಹರಿದಾಡುತ್ತಿದೆ. ಅಷ್ಟರಮಟ್ಟಿಗೆ ಬಿನ್ನಾಣದ ಈ ಆ್ಯಪ್​ಗೆ ಮರುಳಾಗಿದ್ದಾರೆ. ಅಂಗಪ್ರದರ್ಶನದಿಂದ ಹಿಡಿದು ಪ್ರತಿಭಾ ಪ್ರದರ್ಶನದವರೆಗೂ ಎಲ್ಲದಕ್ಕೂ ತೆರೆದ ವೇದಿಕೆಯಾಗಿರುವ ಟಿಕ್​ಟಾಕ್​ನಿಂದ ಕೆಲವರು ಈಗ ದೊಡ್ಡ ದೊಡ್ಡ ಸೆಲೆಬ್ರಿಟಿಗಳೇ ಆಗಿದ್ದಾರೆ.

ಇಂಥವರಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿರುವ ನಿಶಾ ಗುರ್‌ ಗೇನ್. ಸದ್ಯ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ತಮ್ಮ ವಿಭಿನ್ನ ಶೈಲಿ ಮತ್ತು ಭಾವಾಭಿನಯದಿಂದ ಟಿಕ್ ಟಾಕ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಿಶಾ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಟಿಕ್​ ಟಾಕ್​ನಿಂದ ಸಾಕಷ್ಟು ಫೇಮಸ್ ಆಗಿರುವ ಇವರು 28 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ಇನ್​ಸ್ಟಾಗ್ರಾಂ ಎರಡು ಮಿಲಿಯನ್​ಗೂ ಅಧಿಕ ಫಾಲೋವರ್ಸ್​ ಇದ್ದಾರೆ.

Rashmika Mandanna: ಆ ಕೆಲಸವನ್ನು ರಶ್ಮಿಕಾ 10 ಸಲ ಮಾಡಿದರೆ ಒಮ್ಮೆ ಸರಿಯಾಗಿರುತ್ತದೆಯಂತೆ..!

ಆದರೆ, ಕಳೆದ ಒಂದು ವಾರದಿಂದ ನಿಶಾ ಗುರ್‌ ಅವರದ್ದು ಎನ್ನಲಾದ ಖಾಸಗಿ ಕ್ಷಣದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವಿಡಿಯೋದಲ್ಲಿರುವ ಹುಡುಗಿ ತನ್ನ ಬಾಯ್ ಫ್ರೆಂಡ್ ಜತೆ ಖಾಸಗಿ ಕ್ಷಣಗಳನ್ನು ಕಳೆದಿದ್ದಾರೆ. ಎಂಟು ನಿಮಿಷದ ವಿಡಿಯೋ ಸಿಕ್ಕಾಪಟ್ಟೆ ಹರಿದಾಡಿದೆ.

 
@nishaguragain##nishaguragainfam ##fantastic3 ##foryou ##tiktokindia

♬ original sound - sanakhan301ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಿಶಾ ಅವರು ತಮ್ಮ ಅಭಿಮಾನಿಗಳ ಮುಂದೆ ಬಂದು ಕಣ್ಣೀರು ಸುರಿಸಿದ್ದಾರೆ. ಇಂಥ ಕೆಲಸ ಯಾವ ಕಾರಣಕ್ಕೆ ಮಾಡುತ್ತೀರಿ, ವಿಡಿಯೋವನ್ನು ಇಡೀ ದೇಶಾದ್ಯಂತ ಶೇರ್ ಮಾಡಿ ಎಂದು ನೋವಿನಿಂದ ನುಡಿದಿದ್ದಾರೆ. ಜೊತೆಗೆ ಈ ವಿಡಿಯೋದಲ್ಲಿ ಇರುವುದು ನಾನಲ್ಲ, ದಯವಿಟ್ಟು ಇಂಥದ್ದನ್ನು ಶೇರ್ ಮಾಡುವುದ ನಿಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕೊರೋನಾ ಟೈಮ್​ನಲ್ಲಿ ಲಿಪ್​ಕಿಸ್​ ಮಾಡೋಕೆ ಭಯ ಆಗುತ್ತೆ ಎಂದ ಕನ್ನಡದ ನಟಿ!

ಟಿಕ್ ಟಾಕ್ ನಲ್ಲಿ 27.9 ಮಿಲಿಯನ್ ಫಾಲೋವರ್ಸ್ ಹೊಂದಿರುವ ನಿಶಾ ಅವರು ಇತ್ತೀಚೆಗಷ್ಟೆ ಹೃತಿಕ್ ಚೌಹಾಣ್ ಎಂಬುವರೊಂದಿಗೆ ಸೇರಿ 'ರೋಮಾನ್ಸ್ ಕರೂನ್' ಎಂಬ ಮ್ಯೂಸಿಕ್ ಅಲ್ಬಂ ಹೊರತಂದಿದ್ದರು. ಈ ಮ್ಯೂಸಿಕ್ ಆಲ್ಬಂ ಯುಟ್ಯೂಬ್​ನಲ್ಲಿ ಸಖತ್ ಸೌಂಡ್ ಮಾಡಿತ್ತು.
First published: June 29, 2020, 1:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading