ನೀವು ಧರಿಸುವ ಚಪ್ಪಲಿಯನ್ನ ಎಷ್ಟು ಸಮಯ ಬಳಸಬಹುದು ಗೊತ್ತಾ?

ಹುಡುಗಿಯರ ಬಳಿ ನಾನಾ ತರಹದ ಚಪ್ಪಲಿ ಇರುತ್ತವೆ ಎಂಬುದು ನಿಜ. ಆದರೆ ಹುಡುಗರು ವರ್ಷ ಪೂರ್ತಿ ಒಂದೇ ಪಾದರಕ್ಷೆಯನ್ನು ಹಾಕಿಕೊಂಡು ಸವೆಸುತ್ತಾರೆ. ಇನ್ನು ಕೆಲವರು ಇಷ್ಟದ ಚಪ್ಪಲಿ ಎಂದು ಅಷ್ಟೇ ಜೋಪಾನ ಮಾಡಿಕೊಂಡು ಹಾಕುತ್ತಾರೆ. ಆದರೆ ಒಂದು ಪಾದರಕ್ಷೆಯನ್ನು ಇಂತಿಷ್ಟೇ ಅವಧಿ ಬಳಸಬೇಕಾಗಿದೆ ಎಂಬ ವಿಚಾರ ತಿಳಿದಿರಲಿ.

news18-kannada
Updated:October 24, 2020, 9:15 PM IST
ನೀವು ಧರಿಸುವ ಚಪ್ಪಲಿಯನ್ನ ಎಷ್ಟು ಸಮಯ ಬಳಸಬಹುದು ಗೊತ್ತಾ?
ಶೂ
  • Share this:
ಹುಡುಗರಿಗಿಂತ ಹುಡುಗಿಯರ ಜೊತೆಗೆ ಸಾಕಷ್ಟು ಚಪ್ಪಲಿಗಳಿರುತ್ತದೆ. ಮದುವೆಗೆ ಕಾರ್ಯಕ್ರಮಕ್ಕೆ, ಪಾರ್ಟಿಗೆ, ಆಫೀಸಿಗೆ ಹೀಗೆ ಒಂದೊಂದು ಕಡೆಗೆ ಹೋಗಲು ಒಂದೊಂದು ಬಣ್ಣದ ಪಾದರಕ್ಷೆಗಳನ್ನು ಬಳಸುತ್ತಾರೆ. ಶಾಪಿಂಗ್​ ತೆರಳಿದರಂತೂ ನಾನಾ ತರಹದ ಚಪ್ಪಲಿಗಳನ್ನು ಖರೀದಿಸುತ್ತಾರೆ. ಆಯಾಯ ಬಟ್ಟೆಗೆ ಸರಿಹೊಂದುವ ಪಾದರಕ್ಷೆಗಳನ್ನು ಹಾಕಿಕೊಳ್ಳುತ್ತಾರೆ. ಆದರೆ ಚಪ್ಪಲಿ ಅಥವಾ ಶೂಗಳಿಗೂ ಎಕ್ಸ್​ಪೈರಿ ಡೇಟ್​ ಇದೆ ಎಂದು ವಿಚಾರ ಗೊತ್ತಿದೆಯಾ?. ಒಂದು ಜೊತೆ ಪಾದರಕ್ಷೆಯನ್ನು ಎಷ್ಟು ಅವಧಿಯವರೆಗೆ ಬಳಸಬಹುದು ಎಂದು ಗೊತ್ತಿದೆಯಾ?. ಹಾಗಿದ್ದರೆ, ಈ ಸ್ಟೋರಿ ಓದಿ.

ಹುಡುಗಿಯರ ಬಳಿ ನಾನಾ ತರಹದ ಚಪ್ಪಲಿ ಇರುತ್ತವೆ ಎಂಬುದು ನಿಜ. ಆದರೆ ಹುಡುಗರು ವರ್ಷ ಪೂರ್ತಿ ಒಂದೇ ಪಾದರಕ್ಷೆಯನ್ನು ಹಾಕಿಕೊಂಡು ಸವೆಸುತ್ತಾರೆ. ಇನ್ನು ಕೆಲವರು ಇಷ್ಟದ ಚಪ್ಪಲಿ ಎಂದು ಅಷ್ಟೇ ಜೋಪಾನ ಮಾಡಿಕೊಂಡು ಹಾಕುತ್ತಾರೆ. ಆದರೆ ಒಂದು ಪಾದರಕ್ಷೆಯನ್ನು ಇಂತಿಷ್ಟೇ ಅವಧಿ ಬಳಸಬೇಕಾಗಿದೆ ಎಂಬ ವಿಚಾರ ತಿಳಿದಿರಲಿ.

ಚಪ್ಪಲಿ, ಶೂ, ಸಾಕ್ಸ್​ ಅನ್ನು ಆರು ತಿಂಗಳ ಕಾಲ ಮಾತ್ರ ಬಳಸಬಹುದಾಗಿದೆ. ಆದಕ್ಕಿಂತ ಹೆಚ್ಚು ಬಳಸಿದರೆ ಆರೋಗ್ಯದ ಸಮಸ್ಯೆ ಹುಟ್ಟಿಕೊಳ್ಳಬಹುದು ಎಂಬುದು ತಜ್ಞರ ಅಭಿಪ್ರಾಯ. ಅಂದರೆ ಪಾದರಕ್ಷೆಗಳಲ್ಲಿ ಸೂಕ್ಷಜೀವಿಗಳು, ಶಿಲೀಂಧ್ರಗಳು ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದರಿಂದ ಸೋಂಕು ಕೂಡ ಹರಡಬಹುದಾಗಿದ್ದು, ಕಾಲಿನ ಮೇಲೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ.

ಅನೇಕರು ಪಾದರಕ್ಷೆಗಳನ್ನು ವರ್ಷಾನುಗಟ್ಟಲೆ  ಧರಿಸುತ್ತಾರೆ. ಆದರೆ ಆರೋಗ್ಯ ಕಾಳಜಿಯಿಂದ ಇನ್ನಾದರು ಇಂತಿಷ್ಟೇ ಅವಧಿ ಪಾದರಕ್ಷೆಗಳನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿರಿ.

ಮಹಿಳೆಯರಿಗೆ ಮಾತ್ರವಲ್ಲ ಪುರುಷರು ಧರಿಸುವ ಬಿಕಿನಿ ಮಾರುಕಟ್ಟೆಗೆ ಬಂದಿದೆ!
Published by: Harshith AS
First published: October 24, 2020, 9:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading