ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ಮುಖಕ್ಕೆ ಮಾಸ್ಕ್ ಬದಲು ಅಂಡರ್ ವೇರ್ ಧರಿಸಿದ ಭೂಪ!

ಯುವಕನೋರ್ವ ಮನೆಯಿಂದ ಹೊರ ಬರುವಾಗ ಮಾಸ್ಕ್ ಧರಿಸದೆಯೇ ಬಂದಿದ್ದ. ಈತನಿಗೆ ಬೇರೆ ದಾರಿ ಕಾಣದೆ, ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ್ದ. ಅಲ್ಲಿ ತನ್ನ ಅಂಡವೇರ್​​ಅನ್ನು ತೆಗೆದು ಮಾಸ್ಕ್ ಮಾಡಿಕೊಂಡಿದ್ದಾನೆ.

news18-kannada
Updated:July 13, 2020, 4:03 PM IST
ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ಮುಖಕ್ಕೆ ಮಾಸ್ಕ್ ಬದಲು ಅಂಡರ್ ವೇರ್ ಧರಿಸಿದ ಭೂಪ!
ಮುಖಕ್ಕೆ ಅಂಡರ್​ವೇರ್​ ಧರಿಸಿದ ಯುವಕ
  • Share this:
ಕೊರೋನಾ ವೈರಸ್ ಇಡೀ ವಿಶ್ವವನ್ನೇ ಆವರಿಸಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಕೊರೋನಾ ವೈರಸ್ಗೆ ಅಕ್ಷರಶಃ ತತ್ತರಿಸಿ ಹೋಗಿದೆ. ಈ ಮಧ್ಯೆ ಕೊರೋನಾ ನಿಯಂತ್ರಣಕ್ಕೆ ಲಸಿಕೆ ಕಂಡು ಹಿಡಿಯುವ ಪ್ರಯತ್ನವೂ ನಡೆಯುತ್ತಲೇ ಇದೆ. ಈ ಮಧ್ಯೆ ಎಲ್ಲೆಡೆ ಮಾಸ್ಕ್ ಕಡ್ಡಾಯ ಮಾಡಿ ಅನೇಕ ರಾಷ್ಟ್ರಗಳ ಸರ್ಕಾರ ಆದೇಶ ಹೊರಡಿಸಿದೆ. ಐರ್ಲೆಂಡ್ ವ್ಯಕ್ತಿಯೋರ್ವ ಮಾಸ್ಕ್ ಬದಲಿಗೆ ಅಂಡರ್ವೇರ್ ಧರಿಸಿರುವ ಫೋಟೋ ವೈರಲ್ ಆಗಿದ್ದು ಸಾಕಷ್ಟು ಸದ್ದು ಮಾಡಿದೆ.

ಐರ್ಲೆಂಡ್​ನಲ್ಲಿ ಎರಡು ತಿಂಗಳ ಹಿಂದೆ ಭಾರೀ ಏರಿಕೆ ಕಂಡಿದ್ದ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಂದಿದೆ. ಹೀಗಾಗಿ, ಸಿನಿಮಾ ಮಂದಿರ, ಮಾಲ್, ಸಾರಿಗೆ ವ್ಯವಸ್ಥೆ, ದೇಶಿಯ ವಿಮಾನಯಾನವನ್ನು ಇಂಗ್ಲೆಂಡ್ ಆರಂಭಿಸಿದೆ. ಆದರೆ, ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿದೆ. ಒಂದೊಮ್ಮೆ ಮಾಸ್ಕ್ ಧರಿಸದಿದ್ದರೆ ದೊಡ್ಡ ಪ್ರಮಾಣದ ದಂಡವನ್ನು ಕಟ್ಟಬೇಕು.

ಹೀಗಾಗಿ ಐರ್ಲೆಂಡ್​ನಲ್ಲಿ ಎಲ್ಲರೂ ಮಾಸ್ಕ್ ಧರಿಸಿಯೇ ತಿರುಗುತ್ತಿದ್ದಾರೆ. ಈ ಮಧ್ಯೆ ಯುವಕನೋರ್ವ ಮನೆಯಿಂದ ಹೊರ ಬರುವಾಗ ಮಾಸ್ಕ್ ಧರಿಸದೆಯೇ ಬಂದಿದ್ದ. ಈತನಿಗೆ ಬೇರೆ ದಾರಿ ಕಾಣದೆ, ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ್ದ. ಅಲ್ಲಿ ತನ್ನ ಅಂಡವೇರ್​​ಅನ್ನು ತೆಗೆದು ಮಾಸ್ಕ್ ಮಾಡಿಕೊಂಡಿದ್ದಾನೆ.

ಹೀಗೆ ಅಂಡರ್​ವೇರ್​  ಮಾಸ್ಕ್ ರೀತಿ ಮಾಡಿಕೊಂಡು ಆತ ಬಸ್ ಏರಿದ್ದಾನೆ. ಆರಂಭದಲ್ಲಿ ಇದನ್ನು ಯಾರೂ ಗಮನಿಸಿರಲಿಲ್ಲ. ನಂತರ ಬಸ್ನಲ್ಲಿದ್ದ ಯುವತಿ ಇದನ್ನು ಗಮನಸಿದ್ದಳು. ಅಷ್ಟೇ ಅಲ್ಲ ಒಂದೇಸಮನೆ ನಗಲು ಆರಂಭಿಸಿದ್ದಳು.

ಎಲ್ಲರೂ ಆಕೆ ಏಕೆ ನಗುತ್ತಿದ್ದಾಳೆ ಎಂದು ಆಲೋಚಿಸುತ್ತಿರುವಾಗಲೇ ಎಲ್ಲರಿಗೂ ಈ ವ್ಯಕ್ತಿ ಕಾಣಿಸಿದ್ದಾನೆ. ಇಡೀ ಬಸ್ಗೆ ಬಸ್ಸೇ ನಗೆ ಅಲೆಯಲ್ಲಿ ತೇಲಿದೆ. ಕೆಲವರು ಗೊತ್ತಿಲ್ಲದೆ ಆತನ ಫೋಟೋ ತೆಗೆದುಕೊಂಡಿದ್ದಾರೆ. ಕೊರೋನಾ ವೈರಸ್ ಹರಡದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಆದರೆ ಮಾಸ್ಕ್ ಮರೆತುಬಂದಿದೆ. ಹೀಗಾಗಿ ಈ ರೀತಿ ಮಾಡಿದ್ದೆ ಎಂದು ಆತ ಹೇಳಿಕೊಂಡಿದ್ದಾನೆ.
Published by: Rajesh Duggumane
First published: July 13, 2020, 4:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading