ಗಂಡ ಇಲ್ಲದ ವೇಳೆ ಅಳಿಯನನ್ನೇ ಮದುವೆಯಾದ ಅತ್ತೆ!; ವಿಷಯ ಕೇಳಿ ಮೂರ್ಛೆ ಹೋದ ಮಗಳು

ಆಶಾ ದೇವಿ ಒಂದು ತಿಂಗಳ ನಂತರ ಮನೆಗೆ ವಾಪಾಸಾಗಿದ್ದಳು. ಆಕೆಯ ಗಂಡ ದೆಹಲಿಯಲ್ಲಿ ಇರುತ್ತಿದ್ದರಿಂದ ಈಕೆ ಒಬ್ಬಂಟಿಯಾಗಿದ್ದಳು. ಈ ವೇಳೆ ಆಶಾ ದೇವಿಗೆ ಸೂರಜ್​ ಪದೇ ಪದೇ ಕರೆ ಮಾಡಿ ವಿಚಾರಿಸುತ್ತಿದ್ದ.

news18-kannada
Updated:September 18, 2020, 11:54 AM IST
ಗಂಡ ಇಲ್ಲದ ವೇಳೆ ಅಳಿಯನನ್ನೇ ಮದುವೆಯಾದ ಅತ್ತೆ!; ವಿಷಯ ಕೇಳಿ ಮೂರ್ಛೆ ಹೋದ ಮಗಳು
ಮದುವೆಯಾದ ಅತ್ತೆ ಅಳಿಯ
  • Share this:
ಮದುವೆ ಅನ್ನೋದು ಸ್ವರ್ಗದಲ್ಲೇ ನಿರ್ಧಾರವಾಗಿರುತ್ತದೆ ಎಂಬುದನ್ನು ಅನೇಕರು ನಂಬುತ್ತಾರೆ. ಅಲ್ಲದೆ, ಪೂರ್ವ ಜನ್ಮದ ಫಲಾಫಲಗಳು ಕೂಡ ಮದುವೆಗೆ ನೇರ ಕಾರಣವಾಗುತ್ತದೆ ಎಂಬುದು ಹಲವರ ನಂಬಿಕೆ. ಬೇರೆ ಜಾತಿಯವರನ್ನು ಮದುವೆ ಆಗೋದು, ತಮಗಿಂತ ದೊಡ್ಡ ವಯಸ್ಸಿನ ಹುಡುಗಿಯನ್ನು ಮದುವೆಯಾಗೋದು ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದೆ. ಆದರೆ, ಬಿಹಾರದಲ್ಲಿ ಘಟನೆಯೊಂದು ನಡೆದಿದ್ದು, ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅದೇನೆಂದರೆ, ಅತ್ತೆಗೆ ಅಳಿಯನ ಮೇಲೆ ಪ್ರೀತಿ ಉಂಟಾಗಿದ್ದು, ಆತನನ್ನೇ ವರಿಸಿ ಬಿಟ್ಟಿದ್ದಾಳೆ. ಈ ವಿಚಾರ ಕೇಳಿ ಮಗಳು ಮೂರ್ಛೆ ಹೋಗಿದ್ದಾಳೆ.

ಬಿಹಾರದಲ್ಲಿ ಈ ಘಟನೆ ನಡೆದಿದೆ. ಆಶಾ ದೇವಿ ಮದುವೆಯಾದ ಅತ್ತೆ. ಈಕೆಯ ಮಗಳು ಸೂರಜ್​ ಎಂಬಾತನನ್ನು ಮದುವೆಯಾಗಿದ್ದಳು. ಮದುವೆ ಕೂಡ ಅದ್ದೂರಿಯಾಗಿ ವಿವಾಹವಾಗಿದ್ದರು. ಇಬ್ಬರೂ ಸಿಟಿಯಲ್ಲಿ ವಾಸವಾಗಿದ್ದರು. ಒಂದು ದಿನ ಮಗಳು ಅಳಿಯನನ್ನು ನೋಡಲು ಆಶಾ ದೇವಿ ಇವರು ವಾಸವಾಗಿದ್ದ ಮನೆಗೆ ಬಂದಿದ್ದಳು. ಈ ವೇಳೆ ಒಂದು ತಿಂಗಳಿಗೂ ಅಧಿಕ ಕಾಲ ಆಶಾ ದೇವಿ ಅಲ್ಲಿಯೇ ವಾಸವಾಗಿದ್ದಳು.

ಮಗಳು ಕೆಲಸಕ್ಕೆ ತೆರಳುತ್ತಿದ್ದಳು. ಆದರೆ, ಸೂರಜ್​ಗೆ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದ. ಈ ವೇಳೆ ಅತ್ತೆ ಹಾಗೂ ಅಳಿಯನ ನಡುವೆ ಪ್ರೀತಿ ಬೆಳೆದಿದೆ. ಸೂರಜ್​ ಹೆಂಡತಿಗೆ ಈ ಬಗ್ಗೆ ಅನುಮಾನ ಬಂದಿತ್ತಾದರೂ ಅಮ್ಮ ಹಾಗೂ ಗಂಡನ ಬಗ್ಗೆ ತಾನೇ ತಪ್ಪಾಗಿ ಭಾವಿಸುತ್ತಿದ್ದೇನೇನೋ ಎಂದು ತಿಳಿದು ಸುಮ್ಮನಾಗಿದ್ದಳು.

ಆಶಾ ದೇವಿ ಒಂದು ತಿಂಗಳ ನಂತರ ಮನೆಗೆ ವಾಪಾಸಾಗಿದ್ದಳು. ಆಕೆಯ ಗಂಡ ದೆಹಲಿಯಲ್ಲಿ ಇರುತ್ತಿದ್ದರಿಂದ ಈಕೆ ಒಬ್ಬಂಟಿಯಾಗಿದ್ದಳು. ಈ ವೇಳೆ ಆಶಾ ದೇವಿಗೆ ಸೂರಜ್​ ಪದೇ ಪದೇ ಕರೆ ಮಾಡಿ ವಿಚಾರಿಸುತ್ತಿದ್ದ. ಕೆಲವೊಮ್ಮೆ ಆಶಾ ದೇವಿ ಮನೆಗೆ ಭೇಟಿ ಕೂಡ ಆಗಿದ್ದ. ನಂತರ ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು.

ಇದನ್ನೂ ಓದಿ: ಲಂಡನ್​ ಬೀದಿಗಳಲ್ಲಿ ನಗ್ನಳಾಗಿ ಸುತ್ತಾಡಿದ ಭಾರತೀಯ ಯುವತಿ!

ಸೂರಜ್​ ಹೆಂಡತಿಗೆ ವಿಚ್ಛೇದನ ನೀಡಿದ. ಇದಾದ ಬೆನ್ನಲ್ಲೇ ಆಶಾ ದೇವಿ ಹಾಗೂ ಸೂರಜ್​ ಮದುವೆಯಾಗಿದ್ದಾರೆ. ಈ ಬಗ್ಗೆ ತಿಳಿದ ಆಶಾ ದೇವಿ ಮಗಳು ಮೂರ್ಛೆ ಹೋಗಿದ್ದಾಳೆ. ನಂತರ ಈ ವಿಚಾರದ ಬಗ್ಗೆ ಊರಿನಲ್ಲೇ ಪಂಚಾಯ್ತಿ ಕೂಡ ಕರೆಯಲಾಯ್ತು. ಆದರೆ, ಇಬ್ಬರೂ ಸಮ್ಮತಿಸಿ ವಿವಾಹವಾದ್ದರಿಂದ ಯಾರೂ ಏನನ್ನೂ ಹೇಳಲಾಗದೆ ಸುಮ್ಮನಾಗಿದ್ದಾರೆ.
Published by: Rajesh Duggumane
First published: September 18, 2020, 11:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading