ಮಾಸ್ಕ್ ಇಲ್ಲದಕ್ಕೆ ಜೀವವಿರುವ ಹೆಬ್ಬಾವನ್ನೇ ಮುಖಕ್ಕೆ ಧರಿಸಿದ ಭೂಪ; ವಿಡಿಯೋ ವೈರಲ್

Viral Video: ವ್ಯಕ್ತಿಯೊಬ್ಬ ಜೀವವಿರುವ ಹೆಬ್ಬಾವನ್ನು ಮಾಸ್ಕ್​ ಆಗಿ ಧರಿಸಿದ್ದಾನೆ. ಈ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುವಂತೆ ಮಾಡಿದ್ದಾನೆ. ಸರ್ವಜನಿಕ ಸ್ಥಳಗಳಿಗೆ ಹೋಗುವಾಗ ಮಾಸ್ಕ್​​ ಧರಿಸುವುದು ಕಡ್ಡಾಯವಾಗಿದೆ

news18-kannada
Updated:September 16, 2020, 6:44 PM IST
ಮಾಸ್ಕ್ ಇಲ್ಲದಕ್ಕೆ ಜೀವವಿರುವ ಹೆಬ್ಬಾವನ್ನೇ ಮುಖಕ್ಕೆ ಧರಿಸಿದ ಭೂಪ; ವಿಡಿಯೋ ವೈರಲ್
Photo: Youtube
  • Share this:
ಮಹಾಮಾರಿ ಕೊರೋನಾ ಜಗತ್ಯಿನಾದ್ಯಂತ ಪಸರಿಸಿದ ಅವಾಂತರ ಸೃಷ್ಠಿಸಿದ ನಂತರ ಮಾಸ್ಕ್​​​, ಸ್ಯಾನಿಟೈಸರ್​ ಬಳಕೆ ಹೆಚ್ಚಾಯಿತು. ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ಮಾಸ್ಕ್​​ ಧರಿಸುವುದು ಅನಿವಾರ್ಯವಾಯಿತು. ಇತ್ತೀಚೆಗೆ ಮಾರುಕಟ್ಟೆಗೆ ಬಗೆ ಬಗೆಯ ಮಾಸ್ಕ್​ಗಳು ಬರಲಾರಂಭಿಸಿದೆ. ಹೊಸ ವಿನ್ಯಾಸದ ಮಾಸ್ಕ್​ಗಳು ಮಾರುಕಟ್ಟೆಯಲ್ಲಿವೆ. ಮತ್ತೊಂದೆಡೆ ಚಿನ್ನದ ಮಾಸ್ಕ್​ಗಳು ರಾರಾಜಿಸುತ್ತಿವೆ. ಹೀಗಿರುವಾಗ ವ್ಯಕ್ತಿಯೊಬ್ಬ ಯಾವ ಮಾಸ್ಕ್​​​ ಧರಿಸಿದ್ದಾನೆ ಗೊತ್ತಾ?.

ವ್ಯಕ್ತಿಯೊಬ್ಬ ಜೀವವಿರುವ ಹೆಬ್ಬಾವನ್ನು ಮಾಸ್ಕ್​ ಆಗಿ ಧರಿಸಿದ್ದಾನೆ. ಈ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುವಂತೆ ಮಾಡಿದ್ದಾನೆ. ಸರ್ವಜನಿಕ ಸ್ಥಳಗಳಿಗೆ ಹೋಗುವಾಗ ಮಾಸ್ಕ್​​ ಧರಿಸುವುದು ಕಡ್ಡಾಯವಾಗಿದೆ. ಕೆಲವೆಡೆ ಮಾಸ್ಕ್​​ ಧರಿಸದೇ ಹೋದರೆ ದಂಡ ಕೂಡ ವಿಧಿಸಲಾಗುತ್ತದೆ. ಅದರಂತೆ ಈತ ಜೀವವಿರುವ ಹೆಬ್ಬಾವನ್ನು ಮಾಸ್ಕ್​ ಆಗಿ ಧರಿಸಿಕೊಂಡು ಬಸ್ಸಿಗೆ ಹತ್ತಿದ್ದಾನೆ. ಬಸ್ಸಿನಲ್ಲಿದ್ದವರು ಈತನನ್ನು ನೋಡಿ ಭಯಬೀತರಾಗಿದ್ದಾರೆ.

ಮುಖಕ್ಕೆ ಹೆಬ್ಬಾವು ಸುತ್ತಿಕೊಂಡಿದ್ದ ವ್ಯಕ್ತಿ ಇಂಗ್ಲೆಂಡ್​ನ ಸ್ವಿಂಟನ್​ನಿಂದ ಮ್ಯಾಂಚೆಸ್ಟರ್​ಗೆ ಹೊರಟಿರುವ ಬಸ್ಸಿನಲ್ಲಿ ಕಾಣಿಸಿಕೊಂಡಿದ್ದಾನೆ. ಇದನ್ನು ಕಂಡು ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ . ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.ಇಂಗ್ಲೆಂಡ್​ನಲ್ಲಿ ಮಾಸ್ಕ್​ ಕಡ್ಡಾಯವಾಗಿದೆ. ಆದರೆ ಈತ ಮಾಸ್ಕ್​​ ನಿಯಮವನ್ನು ಉಲ್ಲಂಘನೆ ಮಾಡಿದ್ದಾನೆ. ಸರ್ಜಿಕಲ್​ ಮಾಸ್ಕ್​ ಧರಿಸಬೇಕು ಎಂಬ ನಿಯಮವಿಲ್ಲ. ಆದರೆ ಬಟ್ಟೆ ಅಥವಾ ಸ್ಕಾರ್ಪ್​ನಿಂದ ಮುಖ ಮುಚ್ಚಿಕೊಳ್ಳಬಹುದು. ಹಾಗೆಂದು ಹಾವನ್ನೇ ಮಾಸ್ಕ್​​ ಆಗಿ ಧರಿಸಿಕೊಳ್ಳುವಂತಿಲ್ಲ. ಆತ ನಿಯಮ ಉಲ್ಲಂಘನೆ ಮಾಡಿದ್ದಾನೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
Published by: Harshith AS
First published: September 16, 2020, 6:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading