HOME » NEWS » Trend » KARNATAKA FARMER CULTIVATES YELLOW WATERMELONS HERES HOW TWITTER REACTED MAK

ಕರ್ನಾಟಕದಲ್ಲಿ ಹಳದಿ ಬಣ್ಣದ ಕಲ್ಲಂಗಡಿ ಬೆಳೆದ ರೈತ; ಟ್ವಿಟರ್​ನಲ್ಲಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ಈ ಕುತೂಹಲಕಾರಿ ಕಲ್ಲಂಗಡಿಗಳು ಕೆಂಪು ಬಣ್ಣದ ಕಲ್ಲಂಗಡಿಗಳಿಗಿಂತ ರುಚಿಯಲ್ಲಿ ಮತ್ತಷ್ಟು ಸಿಹಿಯಾಗಿರುತ್ತದೆ. ನಾನು 2 ಲಕ್ಷ ರೂ. ಹೂಡಿಕೆ ಮಾಡಿದ್ದೇನೆ ಮತ್ತು 3 ಲಕ್ಷ ರೂ.ಗಿಂತ ಹೆಚ್ಚಿನ ಲಾಭವನ್ನು ಗಳಿಸಿದ್ದೇನೆ ಎಂದು ಉತ್ಸಾಹಿ ಯುವ ರೈತ ಬಸವರಾಜ್​ ಪಾಟೀಲ್​ ತಿಳಿಸಿದ್ದಾರೆ.

news18india
Updated:February 24, 2021, 8:56 PM IST
ಕರ್ನಾಟಕದಲ್ಲಿ ಹಳದಿ ಬಣ್ಣದ ಕಲ್ಲಂಗಡಿ ಬೆಳೆದ ರೈತ; ಟ್ವಿಟರ್​ನಲ್ಲಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?
ಹಳದಿ ಬಣ್ಣದ ಕಲ್ಲಂಗಡಿ.
  • Share this:
ಬೇಸಿಗೆ ಕಾಲ ಹತ್ತಿರಾಗುತ್ತಿದ್ದಂತೆ ಎಲ್ಲರಿಗೂ ಅಗತ್ಯವಾದ ಮತ್ತು ಅಷ್ಟೇ ಪ್ರಿಯವಾದ ಹಣ್ಣು ಕಲ್ಲಂಗಡಿ. ಈ ಹಣ್ಣಿನಲ್ಲಿ ಅಧಿಕ ನೀರಿನಂಶ ಮತ್ತು ಸಿಹಿ ದೇಹವನ್ನು ಪುನರ್ಯೌವನಗೊಳಿಸುತ್ತದೆ. ಕಲ್ಲಂಗಡಿಗಳಲ್ಲಿನ ಅಪಾರ ನೀರಿನ ಅಂಶವು ಒಳಗಿನಿಂದಲೂ ಹೈಡ್ರೇಟ್ ಆಗುತ್ತದೆ. ಹಸಿರು ಸಿಪ್ಪೆ ಮತ್ತು ಒಳಗೆ ಕೆಂಪು ಬಣ್ಣದ ಹಣ್ಣು ನೋಡಲೇ ಆನಂದವಾಗಿರುತ್ತದೆ. ಆದರೆ, ಕೆಲವು ಪ್ರದೇಶಗಳ ಭೌಗೋಳಿಕ ಲಕ್ಷಣಗಳಿಗೆ ತಕ್ಕಂತೆ ಕಲ್ಲಂಗಡಿ ಗಾತ್ರ ಮತ್ತು ಬಣ್ಣದಲ್ಲಿ ಸಣ್ಣ ಪ್ರಮಾಣದ ವ್ಯತ್ಯಾಸ ಇರುತ್ತದೆ. ಆದಾಗ್ಯೂ, ಇತ್ತೀಚೆಗೆ ಅಭಿವೃದ್ಧಿ ಹೊಂದಿದ, ಹೊಸ ರೀತಿಯ ಕಲ್ಲಂಗಡಿಯೊಂದು ಅಂತರ್ಜಾಲದಲ್ಲಿ ಸಾಕಷ್ಟು ವೈರಲ್ ಆಗುತ್ತಾ ಜನರನ್ನು ಅಚ್ಚರಿಗೆ ದೂಡುತ್ತಿದೆ. ಅದೇನೆಂದರೆ ಕರ್ನಾಟಕದ ಯುವ ರೈತನೊಬ್ಬ ತನ್ನ ಹೊಲದಲ್ಲಿ ಹೊಸ ಬಗೆಯ 'ಹಳದಿ ಕಲ್ಲಂಗಡಿ' ಬೆಳೆಯುವಲ್ಲಿ ಯಶಸ್ವಿಯಾಗಿದ್ದಾನೆ. ಈ ಹಣ್ಣು ಇದೀಗ ದೇಶದಾದ್ಯಂತ ದೊಡ್ಡ ಅಚ್ಚರಿಗೆ ಕಾರಣವಾಗಿದೆ.ಬಸವರಾಜ್ ಪಾಟೀಲ್ ಅವರು ಕರ್ನಾಟಕದ ಕಲಬುರಗಿಯ ಕೊರಲ್ಲಿ ಗ್ರಾಮದ ಪದವೀಧರರಾಗಿದ್ದಾರೆ. ಎಎನ್‌ಐ ವರದಿ ಮಾಡಿದಂತೆ ಯುವ ರೈತ ಸ್ವತಃ ಹಳದಿ ಕಲ್ಲಂಗಡಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವು ಹೊರಗಿನಿಂದ ಹಸಿರು ಬಣ್ಣದಲ್ಲಿ ಕಂಡುಬಂದರೆ, ಒಳಗೆ ಹಣ್ಣು ಹಳದಿ ಬಣ್ಣದಿಂದ ಕೂಡಿದೆ.

ಈ ಕುರಿತು ಮಾತನಾಡಿರುವ ಪಾಟೀಲ್, "ಈ ಕುತೂಹಲಕಾರಿ ಕಲ್ಲಂಗಡಿಗಳು ಕೆಂಪು ಬಣ್ಣದ ಕಲ್ಲಂಗಡಿಗಳಿಗಿಂತ ರುಚಿಯಲ್ಲಿ ಮತ್ತಷ್ಟು ಸಿಹಿಯಾಗಿರುತ್ತದೆ. ನಾನು 2 ಲಕ್ಷ ರೂ. ಹೂಡಿಕೆ ಮಾಡಿದ್ದೇನೆ ಮತ್ತು 3 ಲಕ್ಷ ರೂ.ಗಿಂತ ಹೆಚ್ಚಿನ ಲಾಭವನ್ನು ಗಳಿಸಿದ್ದೇನೆ. ನಮ್ಮ ಬೆಳೆ ಉತ್ಪಾದನೆಯನ್ನು ನಾವು ವೈವಿಧ್ಯಗೊಳಿಸಬೇಕು" ಎಂದು ಅಭಿಪ್ರಾಯಪಟ್ಟಿದ್ದಾರೆ.ಉತ್ಸಾಹಿ ರೈತ ಪಾಟೀಲ್ ತನ್ನ ಬೆಳೆಗಳ ಮಾರಾಟಕ್ಕಾಗಿ ಸ್ಥಳೀಯ ಮಾರ್ಟ್ ಮತ್ತು ಬಿಗ್ ಬಜಾರ್‌ನೊಂದಿಗೆ ಸಂಪರ್ಕದಲ್ಲಿದ್ದಾರೆ. ಇದು ಅವರಿಗೆ ಸಾಕಷ್ಟು ಲಾಭವನ್ನೂ ಗಳಿಸಿಕೊಡುತ್ತಿದೆ ಎನ್ನಲಾಗುತ್ತಿದೆ.

ಈ ವಿಶಿಷ್ಟ ಕಲ್ಲಂಗಡಿಯ ಬಗ್ಗೆ ತಿಳಿದುಕೊಳ್ಳಲು ಟ್ವಿಟರ್​ ಬಳಕೆದಾರರು ಸಾಕಷ್ಟು ಆಸಕ್ತಿ ತೋರಿಸಿದ್ದು, ಈ ಕುರಿತ ಅವರ ಟ್ವೀಟ್​ ಈ ಕೆಳಗಿನಂತಿದೆ.


Published by: MAshok Kumar
First published: February 24, 2021, 8:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories