HOME » NEWS » Trend » IS ALPHONSO OVERRATED MANGO LOVERS ARE AT WAR ON TWITTER TO DEBATE THE BEST VARIETY OF AAM STG HG

ಟ್ವಿಟ್ಟರ್‌ನಲ್ಲಿ ಶುರುವಾಗಿದೆ ಮ್ಯಾಂಗೋ ವಾರ್: ಯಾವ ತಳಿಯ ಹಣ್ಣು ಹೆಚ್ಚು ರುಚಿಯಾಗಿದೆ ಎಂದು ನೆಟ್ಟಿಗರ ಚರ್ಚೆ!

ಮಹಾರಾಷ್ಟ್ರದಲ್ಲಿ ಆಲ್ಫೋನ್ಸೋ ಮಾವಿನಹಣ್ಣು, ಉತ್ತರಪ್ರದೇಶದಲ್ಲಿ ದುಶೇರಿ, ಪಶ್ಚಿಮ ಬಂಗಾಳದಲ್ಲಿ ಹಿಮ್‍ಸಾಗರ್, ಆಂಧ್ರಪ್ರದೇಶದಲ್ಲಿ ಸಫೇದಾ ಸೇರಿದಂತೆ ಚೌಸ, ಲೆಂಗ್ರಾ, ಕೇಸರ್, ತೋತಾಪುರಿ, ನೀಲಮ್ ಹೀಗೆ ವಿಭಿನ್ನ ಜಾತಿಯ ಮಾವಿನಹಣ್ಣುಗಳನ್ನೊಳಗೊಂಡಿದೆ ನಮ್ಮ ಭಾರತ. ಆದರೆ ಟ್ವಿಟ್ಟರ್‌ನಲ್ಲಿ ಯಾವುದು ಉತ್ತಮ ಎಂದು ಮಾತನಾಡಲು ಶುರುಮಾಡಿದ್ದಾರೆ.

news18-kannada
Updated:April 12, 2021, 1:26 PM IST
ಟ್ವಿಟ್ಟರ್‌ನಲ್ಲಿ ಶುರುವಾಗಿದೆ ಮ್ಯಾಂಗೋ ವಾರ್: ಯಾವ ತಳಿಯ ಹಣ್ಣು ಹೆಚ್ಚು ರುಚಿಯಾಗಿದೆ ಎಂದು ನೆಟ್ಟಿಗರ ಚರ್ಚೆ!
#MangoWars
  • Share this:
ಬೇಸಿಗೆ ಕಾಲ ಬಂದೇ ಬಿಟ್ಟಿದೆ. ಬಿಸಿಲಿನ ಬೇಗೆಯಲ್ಲಿ ಹಣ್ಣುಗಳ ರಾಜ ಮಾವಿನಹಣ್ಣುಗಳದ್ದೇ ದರ್ಬಾರ್. ಮಾವಿನಹಣ್ಣು ಇಷ್ಟಪಡದವರು ಯಾರು ಇಲ್ಲ. ಅಷ್ಟೊಂದು ಸಿಹಿ ಭರಿತ ಹಣ್ಣು ಮಾವಿನಹಣ್ಣು. ಬಣ್ಣ, ರುಚಿಯಿಂದ ಕೂಡಿದ ಸ್ವಾದಿಷ್ಟಭರಿತ ಮಾವಿನ ಹಣ್ಣುಗಳಲ್ಲಿ ನಾನಾ ಜಾತಿ ಅಥವಾ ತಳಿಗಳಿವೆ. ಪ್ರತಿ ರಾಜ್ಯಗಳಲ್ಲಿ ವಿಭಿನ್ನ ಹೆಸರುಗಳಿಂದ ಕೂಡಿದ ಇವುಗಳಿಗೆ ತನ್ನದೇಯಾದ ಮಾರುಕಟ್ಟೆಯಿದೆ. ಇದೀಗ ಇದೇ ಹಣ್ಣಿನ ಕುರಿತು ಟ್ವಿಟ್ಟರ್‌ನಲ್ಲಿ ಮ್ಯಾಂಗೋ ವಾರ್ (#MangoWars) ಹ್ಯಾಶ್‍ಟ್ಯಾಗ್ ಅಡಿಯಲ್ಲಿ ಯಾವ ಜಾತಿಯ ಹಣ್ಣು ರುಚಿಯಾದುದು ಎಂದು ನೆಟ್ಟಿಗರು ವಾದ-ವಿವಾದಗಳಲ್ಲಿ ತೊಡಗಿದ್ದಾರೆ.

ಮಹಾರಾಷ್ಟ್ರದಲ್ಲಿ ಆಲ್ಫೋನ್ಸೋ ಮಾವಿನಹಣ್ಣು, ಉತ್ತರಪ್ರದೇಶದಲ್ಲಿ ದುಶೇರಿ, ಪಶ್ಚಿಮ ಬಂಗಾಳದಲ್ಲಿ ಹಿಮ್‍ಸಾಗರ್, ಆಂಧ್ರಪ್ರದೇಶದಲ್ಲಿ ಸಫೇದಾ ಸೇರಿದಂತೆ ಚೌಸ, ಲೆಂಗ್ರಾ, ಕೇಸರ್, ತೋತಾಪುರಿ, ನೀಲಮ್ ಹೀಗೆ ವಿಭಿನ್ನ ಜಾತಿಯ ಮಾವಿನಹಣ್ಣುಗಳನ್ನೊಳಗೊಂಡಿದೆ ನಮ್ಮ ಭಾರತ. ಆದರೆ ಟ್ವಿಟ್ಟರ್‌ನಲ್ಲಿ ಯಾವುದು ಉತ್ತಮ ಎಂದು ಮಾತನಾಡಲು ಶುರುಮಾಡಿದ್ದಾರೆ.

ಇಡೀ ದೇಶದಲ್ಲಿ ಮಹಾರಾಷ್ಟ್ರದ ಆಲ್ಫೋನ್ಸೋ ಹೆಚ್ಚು ಬೆಲೆಬಾಳುವ ಹಣ್ಣು. ಇದರ ಬಗ್ಗೆ ಹೆಚ್ಚು ತಿಳಿದಿಲ್ಲ. ಹಾಗಾಗಿ ದಶಹರಿ, ಚೌಸಾ, ಸಫೇದಾ, ಮಾಗ್ಡಾ ಹಣ್ಣುಗಳನ್ನು ಪ್ರಯತ್ನಿಸಿ ಎಂದು ನೆಟ್ಟಿಗರಾದ ಯಶವಂತ ಚೌಧರಿ ಟ್ವೀಟ್ ಮಾಡಿದರೆ, ಇನ್ನು ಸಿದ್ದಾರ್ಥ ಭಟಿಯಾ ಎಂಬುವವರು ಆಲ್ಫೋನ್ಸೋ ಮ್ಯಾಂಗೋ ಪರ ಮಾತನಾಡಿದ್ದು, ಯಾರು ಹೇಳಲಿ, ಬಿಡಲಿ ಅದರ ಬಗ್ಗೆ ತಿಳಿದವರಿಗಷ್ಟೇ ಗೊತ್ತು ಎಂದು ಹೇಳುವ ಮೂಲಕ ಅಲ್ಫೋನ್ಸೋ ಮಾವಿನಹಣ್ಣಿಗೆ ಹೆಚ್ಚಿನ ಮತ ಹಾಕಿದ್ದಾರೆ.

ನೀವು ಆಲ್ಫೋನ್ಸೋ ಹಣ್ಣನ್ನು ಇಷ್ಟಪಟ್ಟರೆ ಕೊಲ್ಕತ್ತಾದಲ್ಲಿನ ಬಿರುಬೇಸಿಗೆ ಸಮಯದಲ್ಲಿ ದುಶೇರಿ ಹಣ್ಣಿನ ರುಚಿ ಸವಿಯುವುದೇ ಚಂದ ಎಂದು ಮಿಥಾಲಿ ಮುಖರ್ಜಿ ಅವರು ಹೇಳಿದ್ದಾರೆ. ಸುರೇಂದ್ರ ಎಂಬುವವರು ಲಂಗ್ಡಾ, ದಶಹರಿ ಮಾವಿನಹಣ್ಣುಗಳಿಗೆ ಸುರೇಂದ್ರ ಯಾಧವ್ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೊಬ್ಬರು ಲಂಗ್ಡಾ ಮಾವಿನಹಣ್ಣನ್ನು ತಿನ್ನದೇ ಬೇರೆ ಯಾವ ಮಾವಿನಹಣ್ಣನ್ನು ತಿನ್ನಲು ಸಾಧ್ಯ ಎಂದು ಯಶವಂತ ದೇಶಮುಖ್ ಅವರಿಗೆ ಮನೀಷ್ ಕುಮಾರ್ ಪ್ರಶ್ನಿಸಿದ್ದಾರೆ. ಇನ್ನು ದಿಲೀಪ್ ರೆಡ್ಡಿ ಅವರು ಕೂಡ ಬಂಗೀನಪಲ್ಲಿ, ಬನಗನಪಲ್ಲಿ, ಬೆನಿಶನ್ ಮಾವಿನಹಣ್ಣುಗಳ ರುಚಿಯನ್ನೊಮ್ಮೆ ನೋಡಿ ಎಂದು ಹೇಳಿದ್ದಾರೆ.

ಇನ್ನು ಚಿಂತನ್ ದೇಸಾಯ್ ಎಂಬುವವರು ಯಶವಂತ ದೇಶಮುಖ್ ಅವರಿಗೆ ನಿಮ್ಮ ವಿಳಾಸ ಕಳುಹಿಸಿಕೊಡಿ. ನಮ್ಮ ತೋಟದಲ್ಲಿ ಬೆಳೆದಿರುವ ದಕ್ಷಿಣ ಗುಜರಾತಿನ ಕೇಸರ್ ಮಾವಿನಹಣ್ಣನ್ನು ಕಳುಹಿಸಿಕೊಡುತ್ತೇನೆ. ಈ ಹಣ್ಣು ತಿಂದ ಮೇಲೆ ಮ್ಯಾಂಗೋ ವಾರ್‌ ಅನ್ನು ಕೈಬಿಡಬಹುದು. ಮುಖ್ಯವಾಗಿ ದಕ್ಷಿಣ ಗುಜರಾತಿನಲ್ಲಿ ಕೇಸರ್ ಹಣ್ಣುಗಳನ್ನು ರಾಜನೆಂದೇ ಕರೆಯಲಾಗುತ್ತದೆ ಎಂದಿದ್ದಾರೆ.

ಇನ್ನೊಂದೆಡೆ, 5 ವರ್ಷಗಳಿಂದ ಮುಂಬೈನಲ್ಲಿ ನೆಲೆಸಿರುವ ನಾನು ಆಲ್ಫೋನ್ಸೋವನ್ನು ಬಹಳ ಬಾರಿ ತಿಂದಿದ್ದೇನೆ. ಹಣ್ಣಿನ ಸಿಹಿಯಲ್ಲಿ ದುಶೇರಿಯನ್ನು ಕಡೆಗಣಿಸುವಂತಿಲ್ಲ. ಕೇಸರ್ ಕೂಡ ಉತ್ತಮವಾಗಿದೆ. ಆದರೆ ಆಲ್ಫೋನ್ಸೋ ಬಗ್ಗೆ ಹೊಗಳುತ್ತಿರುವುದು ಸರಿಯಲ್ಲ. ಮಹಾರಾಷ್ಟ್ರದಲ್ಲಿ ಮಾತ್ರ ಇದು ಯಶಸ್ವಿಯಾಗಿರುವುದು ಎಂದು ಮತ್ತೊಬ್ಬರು ಹೇಳಿದ್ದಾರೆ.
Youtube Video
ಹೀಗೆ ಪ್ರತಿಯೊಬ್ಬರು ಮಾವಿನ ಹಣ್ಣಿನ ಕುರಿತಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ರತಿ ರಾಜ್ಯದಲ್ಲೂ ಅದರದ್ದೇ ಆದ ಮಹತ್ವವಿರುತ್ತದೆ. ಹೀಗಾಗಿ ನಿಮಗೆ ಯಾವ ಮಾವಿನ ಹಣ್ಣು ಇಷ್ಟ ಎಂದು ಕಾಮೆಂಟ್‌ ಮಾಡಿ.
First published: April 12, 2021, 1:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories