Gold Rate: ಕಳೆದ ಒಂದು ವಾರದಲ್ಲಿ ಚಿನ್ನ ಏರಿಕೆ ಕಂಡಿದ್ದೆಷ್ಟು, ಇಳಿಕೆ ಆಗಿದ್ದೆಷ್ಟು?; ಇಲ್ಲಿದೆ ಮಾಹಿತಿ

Gold Price Today: ಕಳೆದ ವಾರ ಬೆಳ್ಳಿ ದರ ಮೂರು ದಿನ ಇಳಿಕೆ ಹಾಗೂ ಮೂರು ದಿನ ಏರಿಕೆ ಕಂಡಿದೆ. ಎರಡೂ ಸರಿಸಮವಾಗಿದ್ದರಿಂದ ಬೆಳ್ಳಿ ಬೆಲೆಯಲ್ಲಿ ಯಾವುದೆ ಬದಲಾವಣೆ ಆಗಿಲ್ಲ. 

news18-kannada
Updated:September 21, 2020, 8:53 AM IST
Gold Rate: ಕಳೆದ ಒಂದು ವಾರದಲ್ಲಿ ಚಿನ್ನ ಏರಿಕೆ ಕಂಡಿದ್ದೆಷ್ಟು, ಇಳಿಕೆ ಆಗಿದ್ದೆಷ್ಟು?; ಇಲ್ಲಿದೆ ಮಾಹಿತಿ
ಚಿನ್ನ
  • Share this:
Gold Price Today: ಬೆಂಗಳೂರು (ಸೆಪ್ಟೆಂಬರ್ 21): ಕೊರೋನಾ ವೈರಸ್​ ಹರಡುವಿಕೆ ಹೆಚ್ಚಿದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್​ ಎಸ್ಟೇಟ್​ ಸೇರಿ ಸಾಕಷ್ಟು ಉದ್ಯಮಗಳು ನೆಲಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದೆ ಬಂದಿದ್ದರು. ಈಗ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಈ ಮಧ್ಯೆ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ. ಎರಡು ದಿನ ಚಿನ್ನದ ದರ ಭಾರೀ ಏರಿಕೆ ಕಂಡರೆ, ಇನ್ನೂ ಎರಡೂ ದಿನ ಇಳಿಕೆ ಕಾಣುತ್ತಿದೆ. ಹಾಗಾದರೆ, ಕಳೆದ ವಾರ ಚಿನ್ನದ ಬೆಲೆ ಎಷ್ಟು ರೂಪಾಯಿ ಇಳಿಕೆ ಕಂಡಿತು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿದೆ. ಕೊರೋನಾ ವೈರಸ್​ ಆರಂಭವಾದ ನಂತರ ಚಿನ್ನದ ಬೆಲೆ ಏರಿಕೆ ಕಾಣಲು ಆರಂಭವಾಗಿತ್ತು. ನಂತರಚಿನ್ನದ ದರದಲ್ಲಿ ಇಳಿಕೆ ಕಂಡಿತ್ತು. ಇದು ಚಿನ್ನ ಪ್ರಿಯರಿಗೆ ಸಂತಸ ಮೂಡಿಸಿತ್ತು. ಆದರೆ, ಈಗ ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಾಣಲು ಆರಂಭವಾಗಿದೆ. ಶೀಘ್ರವೇ ಆಭರಣ ಚಿನ್ನದ ದರ 50 ಸಾವಿರ ಹಾಗೂ ಶುದ್ಧ ಚಿನ್ನ 55 ಸಾವಿರದ ಗಡಿ ದಾಟಲಿದೆ ಎನ್ನಲಾಗಿದೆ.

ಕಳೆದ ಸೋಮವಾರದಿಂದ ಶನಿವಾರದವರೆಗೆ ಚಿನ್ನದ ದರ ಒಮ್ಮೆ ಇಳಿತ ಕಂಡು ಐದು ದಿನ ಏರಿಕೆ ಕಂಡಿದೆ. ಈ ಮೂಲಕ 10ಗ್ರಾಂ ಆಭರಣ ಚಿನ್ನ ಕಳೆದ  ವಾರ ಒಟ್ಟು 710 ರೂಪಾಯಿ ಏರಿಕೆ ಕಂಡಂತಾಗಿದೆ. ಇನ್ನು, ಕೆಲ ದಿನಗಳ ಕಾಲ ಬೆಳ್ಳಿ ದರ ಇಳಿಕೆ ಕಂಡಿತ್ತು. ನಂತರ ಮತ್ತೆ ಬೆಳ್ಳಿ ದರದಲ್ಲಿ ಏರಿಕೆ ಕಂಡಿತ್ತು. ಈ ಮೂಲಕ ಕೆಜಿ ಬೆಳ್ಳಿಗೆ 70 ಸಾವಿರದ ಗಡಿ ದಾಟಿತ್ತು. ನಂತರ ಸತತವಾಗಿ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿತ್ತು.  ಕಳೆದ ವಾರ ಬೆಳ್ಳಿ ದರ ಮೂರು ದಿನ ಇಳಿಕೆ ಹಾಗೂ ಮೂರು ದಿನ ಏರಿಕೆ ಕಂಡಿದೆ. ಎರಡೂ ಸರಿಸಮವಾಗಿದ್ದರಿಂದ ಬೆಳ್ಳಿ ಬೆಲೆಯಲ್ಲಿ ಯಾವುದೆ ಬದಲಾವಣೆ ಆಗಿಲ್ಲ.

Gold Silver Rate: gold rate today Gold rate slumps down for the fourth time
ಚಿನ್ನ


ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಸದ್ಯ ಕೊರೋನಾ ವೈರಸ್​ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿತ್ತು.

ಇದನ್ನೂ ಓದಿ: ಇಂದು ಡೆಲ್ಲಿ- ಪಂಜಾಬ್​ ನಡುವೆ ಹಣಾಹಣಿ; ಯಾವ ತಂಡ ಸ್ಟ್ರಾಂಗ್? ಇಲ್ಲಿದೆ ವಿವರ

ಮತ್ತೆ ಏರಿಕೆ ಕಾಣಲಿದೆ ಚಿನ್ನ?:
ವಿಶ್ವದ ಆರ್ಥಿಕತೆ ತಲೆಕೆಳೆಗಾಗಿದೆ. ಹೀಗಾಗಿ ಯಾವ ಮಾರುಕಟ್ಟೆಯ ಮೇಲೂ ಖಚಿತವಾಗಿ ಏನನ್ನೂ ಹೇಳಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಚಿನ್ನದ ದರ ಏರಿಕೆ ಆಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
Published by: Rajesh Duggumane
First published: September 21, 2020, 8:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading