Gold Price: ಬೆಳ್ಳಿ ಖರೀದಿದಾರರಿಗೆ ಶಾಕ್​; ಸತತ 7ನೇ ದಿನವೂ ಬೆಲೆ ಏರಿಕೆ

ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ.

news18-kannada
Updated:July 14, 2020, 9:20 AM IST
Gold Price: ಬೆಳ್ಳಿ ಖರೀದಿದಾರರಿಗೆ ಶಾಕ್​; ಸತತ 7ನೇ ದಿನವೂ ಬೆಲೆ ಏರಿಕೆ
ಚಿನ್ನ
  • Share this:
ಬೆಂಗಳೂರು (ಜು.14): ನೀವು ಚಿನ್ನ-ಬೆಳ್ಳಿ ಖರೀದಿ ಮಾಡಬೇಕು ಎನ್ನುವ ಆಲೋಚನಲ್ಲಿ ಇದ್ದೀರಾ? ಹಾಗಿದ್ದರೆ ಈಗಲೇ ಖರೀದಿ ಮಾಡುವುದು ಒಳಿತು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಏರಿಕೆ ಕಾಣುತ್ತರಿದೆ. ಲಾಕ್​ಡೌನ್​ಗೂ ಮೊದಲು 45 ಸಾವಿರದ ಗಡಿಯಲ್ಲಿದ್ದ ಶುದ್ದ ಚಿನ್ನ ಈಗ 50ಸಾವಿರದ ಗಡಿ ತಲುಪಿದೆ. ಇನ್ನು, ಬೆಳ್ಳಿ ಬೆಲೆ 7 ದಿನಗಳಿಂದ ಸತತ ಏರಿಕೆ ಆಗಿದೆ.  ಸೋಮವಾರ 22 ಕ್ಯಾರೆಟ್​ನ 10 ಗ್ರಾಂ ಚಿನ್ನ 130 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಬೆಲೆ 46,340 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 130 ರೂಪಾಯಿ ಏರಿಕೆ ಕಂಡಿದ್ದು, 50,560 ರೂಪಾಯಿ ಆಗಿದೆ. 

ಅನ್​ಲಾಕ್​ ಘೋಷಣೆ ಆದ ನಂತರ ಚಿನ್ನ ಖರೀದಿಗೆ ಜನರು ಮುಗಿಬಿದ್ದಿದ್ದರು. ಹೀಗಾಗಿ, ಚಿನ್ನದ ದರದಲ್ಲಿ ಭಾರೀ ಏರಿಳಿತ ಕಾಣುತ್ದೆತಿದೆ. ಇನ್ನು, ಬೆಳ್ಳಿ ಬೆಲೆಯಲ್ಲೂ ಸತತ ಏರಿಕೆ ಕಾಣುತ್ತಿದೆ. ಕಳೆದ ಏಳು ದಿನಗಳಿಂದ ಬೆಳ್ಳಿ ಬೆಲೆ ಹೆಚ್ಚಿದೆ. ಒಂದೇ ದಿನ ಬೆಳ್ಳಿ ಬೆಲೆ 1880 ರೂಪಾಯಿ ಏರಿಕೆ ಕಂಡ ಉದಾಹರಣೆಯೂ ಇದೆ.  ಸೋಮವಾರ ಬೆಳ್ಳಿ ಬೆಲೆಯಲ್ಲಿ 210 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ 52,210 ರೂಪಾಯಿ ಆಗಿದೆ.

ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ.

ಇದನ್ನೂ ಓದಿ:  ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ

ವರ್ಷಾಂತ್ಯಕ್ಕೆ 55  ಸಾವಿರದ ಗಡಿ ತಲುಪಲಿದೆ ಚಿನ್ನ?:

ಈ ವರ್ಷಾಂತ್ಯಕ್ಕೆ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದಾಗಿ moneycontrol ವೆಬ್ಸೈಟ್ ವರದಿಮಾಡಿದೆ. ಸದ್ಯ, ಲಾಕ್ಡೌನ್ ಪೂರ್ಣಗೊಂಡಿದೆ. ಆದರೆ, ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಲಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ.
Published by: Rajesh Duggumane
First published: July 14, 2020, 9:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading