HOME » NEWS » Trend » DINOSAUR BONES FOUND IN MEGHALAYA 100 MILLION YEAR OLD DINOSAUR BONES FIRST RECORD OF SAUROPODS IN REGION STG HG

ಮೇಘಾಲಯದ 100 ಮಿಲಿಯನ್ ವರ್ಷ ಹಳೆಯದಾದ ಡೈನೋಸಾರ್ ಮೂಳೆ ಪತ್ತೆ!

ಸೌರೋಪಾಡ್ ಮೂಳೆಗಳು ಟೈಟಾನೊಸೌರಿಯನ್ ಜೊತೆಗೆ ಸಂಬಂಧ ಹೊಂದಿವೆ ಎಂದು ಅನ್ವೇಷಿಸಿದ ಮೊದಲ ಉತ್ತರ ಪೂರ್ವ ರಾಜ್ಯವೆಂಬ ಹೆಗ್ಗಳಿಕೆಯೂ ಮೇಘಾಲಯಕ್ಕೆ ಇದೆ. ಆಫ್ರಿಕಾ, ಏಷ್ಯಾ, ದಕ್ಷಿಣ ಅಮೆರಿಕ, ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯ ಮತ್ತು ಅಂಟಾರ್ಟಿಕಾದಲ್ಲಿದ್ದ ಸೌರೋಪಾಡ್ ಡೈನೋಸಾರ್‌ಗಳ ವಿವಿಧ ರೂಪವನ್ನು ಟೈಟಾನೊಸಾರ್‌ಗಳು ಒಳಗೊಂಡಿವೆ.

news18-kannada
Updated:May 6, 2021, 5:46 PM IST
ಮೇಘಾಲಯದ 100 ಮಿಲಿಯನ್ ವರ್ಷ ಹಳೆಯದಾದ ಡೈನೋಸಾರ್ ಮೂಳೆ ಪತ್ತೆ!
Credits: Reuters
  • Share this:
ಮೇಘಾಲಯದ ಪಶ್ಚಿಮ ಖಾಸಿ ಬೆಟ್ಟಗಳ ಜಿಲ್ಲೆಯ ಅಕ್ಕ ಪಕ್ಕದ ಪ್ರದೇಶದಲ್ಲಿ ಸುಮಾರು 100 ಮಿಲಿಯನ್‌ ವರ್ಷಗಳಷ್ಟು ಹಳೆಯ ಸೌರೋಪಾಡ್ ಡೈನೋಸಾರ್‌ಗಳ ಪಳೆಯುಳಿಕೆಯ ಮೂಳೆಯನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯ ಪ್ಯಾಲಿಯಂಟಾಲಜಿ ವಿಭಾಗದ ಸಂಶೋಧಕರು ಇತ್ತೀಚೆಗೆ ನಡೆಸಿದ ಈ ಪ್ರವಾಸದ ವರದಿ ಇನ್ನಷ್ಟೇ ಪ್ರಕಟವಾಗಬೇಕಿದೆ. ಈ ಪ್ರದೇಶದಲ್ಲಿ ಪತ್ತೆಯಾದ ಟೈಟಾನೊಸೌರಿಯನ್ ಮೂಲದ ಸೌರೋಪಾಡ್‌ಗಳ ಮೊದಲ ದಾಖಲೆ ಇದು ಎಂದು ಜಿಎಸ್‌ಐ ಸಂಶೋಧಕರು ಗ್ರಹಿಸಿದ್ದಾರೆ. ಈ ಡೈನೋಸಾರ್ ನೀಳ ಕುತ್ತಿಗೆ, ಉದ್ದನೆಯ ಬಾಲ, ಕಿರಿದಾದ ತಲೆ, ದಪ್ಪನೆಯ ನಾಲ್ಕು ಕಾಲುಗಳನ್ನು ಹೊಂದಿದೆ. ಭೂಮಿ ಮೇಲಿನ ಅತಿ ದೈತ್ಯ ಪ್ರಾಣಿ ಇದಾಗಿದೆ. ಇನ್ನು, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಮತ್ತು ತಮಿಳುನಾಡಿನ ಬಳಿಕ ಸೌರೋಪಾಡ್ ಮೂಳೆಗಳು ಪತ್ತೆಯಾದ 5 ನೇ ರಾಜ್ಯ ಎನಿಸಿಕೊಂಡಿದೆ ಮೇಘಾಲಯ.

ಸೌರೋಪಾಡ್ ಮೂಳೆಗಳು ಟೈಟಾನೊಸೌರಿಯನ್ ಜೊತೆಗೆ ಸಂಬಂಧ ಹೊಂದಿವೆ ಎಂದು ಅನ್ವೇಷಿಸಿದ ಮೊದಲ ಉತ್ತರ ಪೂರ್ವ ರಾಜ್ಯವೆಂಬ ಹೆಗ್ಗಳಿಕೆಯೂ ಮೇಘಾಲಯಕ್ಕೆ ಇದೆ. ಆಫ್ರಿಕಾ, ಏಷ್ಯಾ, ದಕ್ಷಿಣ ಅಮೆರಿಕ, ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯ ಮತ್ತು ಅಂಟಾರ್ಟಿಕಾದಲ್ಲಿದ್ದ ಸೌರೋಪಾಡ್ ಡೈನೋಸಾರ್‌ಗಳ ವಿವಿಧ ರೂಪವನ್ನು ಟೈಟಾನೊಸಾರ್‌ಗಳು ಒಳಗೊಂಡಿವೆ. ಮೇಘಾಲಯದಿಂದ ಬಂದ ಡೈನೋಸಾರ್ ಮೂಳೆಗಳು 2001 ರಲ್ಲಿ ಜಿಎಸ್‌ಐನಿಂದ ವರದಿಯಾಗಿದ್ದವು. ಅದರ ಅಸಮರ್ಪಕ ಸಂರಕ್ಷಣಾ ವಿಧಾನದಿಂದ ಅವುಗಳ ಅಂಗಗಳನ್ನು ವಿಭಾಗಿಸುವಿಕೆಯ ಗುರುತಿಸುವಿಕೆ ಸಾಧ್ಯವಾಗಲಿಲ್ಲವೆಂದು ಎಂದು ಜಿಎಸ್‌ಐನ ಪಾಲಿಯಂಟಾಲಜಿ ವಿಭಾಗದ ಹಿರಿಯ ಭೂವಿಜ್ಞಾನಿ ಅರಿಂದಮ್ ರಾಯ್ ಹೇಳಿದ್ದಾರೆ.

ಈ ಸಂಶೋಧನೆ 2019 ರಿಂದ 2021 ಫೆಬ್ರವರಿವರೆಗೆ ನಡೆದಿದ್ದು, ಸುಮಾರು 100 ಮಿಲಿಯನ್‌ ವರ್ಷಗಳ ಹಿಂದಿನ ಯುಗದಲ್ಲಿದ್ದ ಕ್ರಿಟೇಶಿಯಸ್ ಪಳೆಯುಳಿಕೆಗಳಾಗಿರಬಹುದು ಎಂದು ಪಿಟಿಐಗೆ ತಿಳಿಸಿದರು. ವಿವಿಧ ಅಂಗಗಳ ಮೂಳೆ, ಅವುಗಳ ತಿರುಗಿರುವಿಕೆ, ಪಾರ್ಶ್ವ ಮೂಳೆಗಳು ಸಂರಕ್ಷಿಸಲ್ಪಟ್ಟಿದ್ದು ಅವುಗಳನ್ನು ಹ್ಯೂಮರಸ್ ಮೂಳೆ(ನೀಳವಾದ ಮೂಳೆ)ಎಂದು ಗುರುತಿಸಲಾಗಿದೆ. ಇದಿಷ್ಟು ಪ್ರಾಥಮಿಕ ಅಧ್ಯಯನದಿಂದ ತಿಳಿದು ಬಂದಿದ್ದು, ಈ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಬೇಕಿದೆ.

ಅಲ್ಲದೇ ಈ ಮೂಳೆಗಳ ವಿಂಗಡಣೆಯ ಕೊರತೆ, ಬಣ್ಣ ಬದಲಾಗಿರುವಿಕೆಯಿಂದ ಕೂಡಿದೆ. 25ಕ್ಕೂ ಹೆಚ್ಚು ಬೇರ್ಪಡಿಸಿರುವ ಮೂಳೆ ಮಾದರಿಗಳಿವೆ. ವಿಭಿನ್ನ ಗಾತ್ರದ ಕೆಲವೊಂದು ವಿಧದ ಮೂಳೆಗಳಿವೆ ಎನ್ನುತ್ತಾರೆ ಸಂಶೋಧಕರು.

ಮೂಳೆಗಳು ಸರಿಯಾದ ನಿರ್ವಹಣೆ ಇರದ ಕಾರಣ ಜೀವಿ ವರ್ಗೀಕರಣಕ್ಕೆ ತೊಡಕಾಗಿದೆ. 55 ಸೆಂಟಿಮೀಟರ್ ಉದ್ದದ ಭಾಗಶಃ ಸಂರಕ್ಷಿಸಲ್ಪಟ್ಟ ಅಂಗ ಮೂಳೆ ಇದ್ದು ಇದನ್ನು ಟೈಟಾನೊಸಾರಿಡ್‌ಗಳ ಸರಾಸರಿ ಹ್ಯೂಮರಸ್ ಉದ್ದದೊಂದಿಗೆ ಹೋಲಿಸಬಹುದು. ಜೊತೆಗೆ ಅಧ್ಯಯನ ಮಾಡಬಹುದು ಆ ಮೂಲಕ ಮೂಳೆಯ ದೃಢತೆ , ಪಾರ್ಶ್ವದ ಅಂಚು ಗಮನಿಸಿದರೆ ಟೈಟಾನೊಸಾರಿಡ್‌ಗಳ ಸಂಬಂಧವನ್ನು ಪುಷ್ಟೀಕರಿಸುತ್ತವೆ. 45 ಸೆಂ.ಮೀ ಉದ್ದದ ಮತ್ತೊಂದು ಅಪೂರ್ಣ ಅಂಗ ಮೂಳೆಯನ್ನು ಟೈಟಾನೊಸೌರಿಫಾರ್ಮ್ ಗುಂಪಿನ ಅಂಗ ಮೂಳೆಗಳೊಂದಿಗೆ ಹೋಲಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಸದ್ಯ ಕೆಲವು ಮೂಳೆಗಳನ್ನು ಸರಿ ಮಾಡಲಾಗಿದ್ದು, ಅದನ್ನು ಟೈಟಾನೊಸೌರಿಫಾರ್ಮ್ ಗುಂಪಿನ ಅಂಗಗಳ ವಿಭಾಗೀಕರಣಕ್ಕೆ ಮೂಳೆ ಮತ್ತು ಕಶೇರು ಖಂಡ ಗುರುತಿಸಲು ನೆರವಾಗುತ್ತದೆ. ಕ್ರಿಟೇಶಿಯಸ್ಗಳ ಕಶೇರುಕಗಳ ವೈವಿಧ್ಯತೆಗೆ ಈ ಎರಡರ ಸಂಬಂಧ ಕಾರಣವಾಗುತ್ತದೆ ಎಂದು ಅವರು ಗಮನಿಸಿದರು.

ಗರ್ಭ ಕಂಠ ಕಶೇರು ಖಂಡವನ್ನು ಸುಧಾರಿಸಿದ ಮೂಳೆ ಮಾದರಿಯಿಂದ ಮರು ನಿರ್ಮಿಸಲಾಗಿದೆ. ಬಹುತೇಕ ರಕ್ಷಿಸಿರುವ ಮೂಳೆಗಳು ಸೌರೋಪಾಡ್ ಡೈನೋಸಾರ್‌ನ ಅಂಗ ಮೂಳೆಗಳ ಭಾಗಗಳಾಗಿರಬಹುದು ಎಂದರು.ಕ್ರಿಟೇಶಿಯಸ್ ಅವಧಿಯಲ್ಲಿ ಸಸ್ಯವರ್ಗಗಳ ಜೊತೆಗೆ ಟೈಟಾನೊಸೌರಿಯನ್ ಸೌರೋಪಾಡ್ ಡೈನೋಸಾರ್‌ಗಳು ಭಾಗವವಾಗಿದ್ದವು ಆದರೆ ಅವು ಗೊಂಡ್ವಾನಾನ್ ಭೂ ಪ್ರದೇಶದ ಹತ್ತಿರವಿರಲಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

ಗೊಂಡ್ವಾನಾಲ್ಯಾಂಡ್ ಸುಮಾರು 300 ಮಿಲಿಯನ್ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಪಂಗೇಯನ್ ಖಂಡದ ದಕ್ಷಿಣ ಭಾಗವಾಗಿದೆ. ಇದು ದಕ್ಷಿಣ ಅಮೆರಿಕ, ಆಫ್ರಿಕಾ, ಅರೇಬಿಯಾ, ಮಡಗಾಸ್ಕರ್, ಶ್ರೀಲಂಕಾ, ಭಾರತ, ಅಂಟಾರ್ಕ್ಟಿಕಾ ಮತ್ತು ಆಸ್ಟ್ರೇಲಿಯಾದ ಪ್ರಮುಖ ಭೂಖಂಡದಿಂದ ಕೂಡಿದೆ.
Youtube Video

ಭಾರತದಲ್ಲಿ, ಭೂ ಗರ್ಭ ಸೇರಿರುವ ಕ್ರಿಟೇಶಿಯಸ್ ಸೌರೋಪಾಡ್ ಡೈನೋಸಾರ್ ಸಾಮಾನ್ಯವಾಗಿ ಟೈಟಾನೊಸೌರಿಯನ್ ಗುಂಪಿಗೆ ಸೇರಿದ್ದು, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಲ್ಯಾಮೆಟಾ ಮತ್ತು ತಮಿಳುನಾಡಿನ ಕಲ್ಲಮೇಡು ವಿನಿಂದ ವರದಿಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
First published: May 6, 2021, 5:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories