Video: ಚಕ್ರದಡಿ ಸಿಲುಕಿಕೊಂಡ ಮಹಿಳೆ; ಬಸ್ಸು ಎತ್ತಿ ಜೀವ ಉಳಿಸಿದ ಸಾರ್ವಜನಿಕರು!

ಈ ಘಟನೆ ಚೀನಾದ ಝೆಜಿಯಾಂಗ್​ ನಡೆದಿದೆ. ಮಹಿಳೆ ರಸ್ತೆ ದಾಟುವ ವೇಳೆ ಎದುರಿನಿಂದ ಬರುತ್ತಿದ್ದ ಬಸ್ಸಿನ ಚಕ್ರಕ್ಕೆ ಸಿಲುಕಿಕೊಂಡಿದ್ದಾಳೆ. ಇದನ್ನು ಗಮನಿಸಿದ ಅಲ್ಲಿನ ಸಾರ್ವಜನಿಕರು ಬಸ್ಸನ್ನು ಎತ್ತುವ ಮೂಲಕ ಅಡಿಯಲ್ಲಿ ಸಿಲುಕಿಕೊಂಡಿದ್ದ ಮಹಿಳೆಯನ್ನು ಕಾಪಾಡಿದ್ದಾರೆ.

news18-kannada
Updated:September 12, 2020, 5:30 PM IST
Video: ಚಕ್ರದಡಿ ಸಿಲುಕಿಕೊಂಡ ಮಹಿಳೆ; ಬಸ್ಸು ಎತ್ತಿ ಜೀವ ಉಳಿಸಿದ ಸಾರ್ವಜನಿಕರು!
ಝೆಜಿಯಾಂಗ್
  • Share this:
ಮಹಿಳೆಯೊಬ್ಬಳು ರಸ್ತೆದಾಟುತ್ತಿದ್ದ ವೇಳೆ ಎದುರಿನಿಂದ ಬಂದ ಬಸ್ಸಿನ ಚಕ್ರಕ್ಕೆ ಸಿಲುಕಿಕೊಂಡಿರುವ ಘಟನೆ ಚೀನಾದಲ್ಲಿ ನಡೆದಿದೆ.  ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಘಟನೆ ಚೀನಾದ ಝೆಜಿಯಾಂಗ್​ ನಡೆದಿದೆ. ಮಹಿಳೆ ರಸ್ತೆ ದಾಟುವ ವೇಳೆ ಎದುರಿನಿಂದ ಬರುತ್ತಿದ್ದ ಬಸ್ಸಿನ ಚಕ್ರಕ್ಕೆ ಸಿಲುಕಿಕೊಂಡಿದ್ದಾಳೆ. ಇದನ್ನು ಗಮನಿಸಿದ ಅಲ್ಲಿನ ಸಾರ್ವಜನಿಕರು ಬಸ್ಸನ್ನು ಎತ್ತುವ ಮೂಲಕ ಅಡಿಯಲ್ಲಿ ಸಿಲುಕಿಕೊಂಡಿದ್ದ ಮಹಿಳೆಯನ್ನು ಕಾಪಾಡಿದ್ದಾರೆ.
ಚೀನಾದ ಪೀಪಲ್ಸ್​ ಡೈಲಿ ಎಂಬ ಟ್ವಿಟ್ಟರ್​​​ ಖಾತೆಯ ಈ ದೃಶ್ಯವನ್ನು ತನ್ನ ಖಾತೆಯಲ್ಲಿ ಅಪ್ಲೋಡ್​ ಮಾಡಿದೆ. ದೃಶ್ಯದಲ್ಲಿ ಸಾರ್ವಜನಿಕರು ಸೇರಿಕೊಂಡು 30 ಸೆಕೆಂಡಿನಲ್ಲಿ ಮಹಿಳೆಯನ್ನು ಸಾವಿನ ದವಡೆಯಿಂದ ಪಾರುಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಅನೇಕರು ಈ ದೃಶ್ಯವನ್ನು ಕಂಡು ಅಚ್ಚರಿಗೊಂಡಿದ್ದಾರೆ. ಇನ್ನು ಕೆಲವರು ಮಹಿಳೆಯ ಜೀವ ಉಳಿಸಿದ ಆ ಆಪತ್ಬಾಂಧವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Published by: Harshith AS
First published: September 12, 2020, 5:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading