Video Viral: ಉರುಳಿದ ತಡೆಗೋಡೆ; ಮಹಿಳೆಯನ್ನು ರಕ್ಷಿಸಿದ ಬೈಕ್​ ಸವಾರ

ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪೀಪಲ್ಸ್​ ಡೈಲಿ ಚೀನಾ ಎಂಬ ಟ್ವಿಟ್ಟರ್​ ಖಾತೆ ಈ ವಿಡಿಯೋವನ್ನು ಶೇರ್​ ಮಾಡಿದೆ.

news18-kannada
Updated:August 2, 2020, 8:33 PM IST
Video Viral: ಉರುಳಿದ ತಡೆಗೋಡೆ; ಮಹಿಳೆಯನ್ನು ರಕ್ಷಿಸಿದ ಬೈಕ್​ ಸವಾರ
Photo credit: twitter
  • Share this:
ಜಸ್ಟ್​ ಮಿಸ್​!. ಇಲ್ಲದಿದ್ದರೆ ಕ್ಷಣಾರ್ಧದಲ್ಲೇ ಇಬ್ಬರು ಯಮನಪಾದ ಸೇರುತ್ತಿದ್ದರು. ಆದರೆ ಅದೃಷ್ಟವೇನೋ ಕಣ್ಣೆದುರೇ ನಡೆದ ಆ ಘಟನೆಯಿಂದ ಇಬ್ಬರು ಪ್ರಾಣ ಉಳಿಸಿಕೊಂಡಿದ್ದಾರೆ. ದೊಪ್ಪನೆ ಬಿದ್ದ ತಡೆಗೋಡೆಯಿಂದ ಜೀವ ರಕ್ಷಿಸಿಕೊಂಡಿದ್ದಾರೆ.

ಈ ಘಟನೆ ನಡೆದಿರುವುದು ಚೀನಾದ ಚೊಂಗ್​ಕ್ವಿಂಗ್​ನಲ್ಲಿ. ನಿರಂತರ ಮಳೆಯಿಂದಾಗಿ ತಡೆಗೋಡೆ ಜರಿದು ಬಿದಿದ್ದೆ. ಆದರೆ ತಡೆಗೋಡೆಯ ಹಿಂದೆ ಬೈಕ್​​ ಸವಾರನೊಬ್ಬನಿದ್ದ. ತಡೆಗೋಡೆ ಬೀಳುತ್ತಿದೆ ಎಂದು ತಿಳಿದಂತೆ ಬೈಕ್​​ ಸವಾರ ಬೈಕ್​ನಿಂದ ಹಾರಿ ಜೀವ ಕಾಪಾಡಿಕೊಂಡಿದ್ದಾನೆ. ಅಷ್ಟು ಮಾತ್ರವಲ್ಲ, ಅಲ್ಲೇ ಇದ್ದ ಮಹಿಳೆಯನ್ನು ಅಪಾಯದಿಂದ ಪಾರು ಮಾಡಿದ್ದಾನೆ.
ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪೀಪಲ್ಸ್​ ಡೈಲಿ ಚೀನಾ ಎಂಬ ಟ್ವಿಟ್ಟರ್​ ಖಾತೆ ಈ ವಿಡಿಯೋವನ್ನು ಶೇರ್​ ಮಾಡಿದೆ. ಮಳೆಯಿಂದಾಗಿ ತಡೆಗೋಡೆ ಜರಿದು ಬಿದ್ದಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಬರೆದುಕೊಂಡಿದೆ.
Published by: Harshith AS
First published: August 2, 2020, 8:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading