HOME » NEWS » Trend » A MONSTER MOTH SO HEAVY THAT IT CANT FLY SPOTTED IN AUSTRALIA STG HG

ಆಸ್ಟ್ರೇಲಿಯ ಶಾಲೆಯಲ್ಲಿ ಕಂಡು ಬಂತು ವಿಶ್ವದಲ್ಲೇ ಅಪರೂಪದ ಭಾರವಾದ ಚಿಟ್ಟೆ; ಮಳೆಕಾಡಿನ ಜೀವ ಜಗತ್ತಿನ ರೋಚಕ ಪಯಣ

ರೆಡ್‌ಲ್ಯಾಂಡ್ಸ್‌ನಲ್ಲಿರುವ ಮೌಂಟ್ ಕಾಟನ್ ಸ್ಟೇಟ್ ಶಾಲೆಯಲ್ಲಿ ಹೊಸ ತರಗತಿ ಕೊಠಡಿಗಳ ನಿರ್ಮಾಣ ಕೆಲಸ ನಿರ್ವಹಿಸುತ್ತಿದ್ದ ಕೆಲಸಗಾರರು ಇದನ್ನು ಗಮನಿಸಿದ್ದಾರೆ.

news18-kannada
Updated:May 6, 2021, 6:46 PM IST
ಆಸ್ಟ್ರೇಲಿಯ ಶಾಲೆಯಲ್ಲಿ ಕಂಡು ಬಂತು ವಿಶ್ವದಲ್ಲೇ ಅಪರೂಪದ ಭಾರವಾದ ಚಿಟ್ಟೆ; ಮಳೆಕಾಡಿನ ಜೀವ ಜಗತ್ತಿನ ರೋಚಕ ಪಯಣ
ಚಿಟ್ಟೆ
  • Share this:
 ಆಸ್ಟ್ರೇಲಿಯಾದ ದಕ್ಷಿಣ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ಶಾಲೆಯಲ್ಲಿ 25 ಸೆಂ.ಮೀ ಅಳತೆಯ ರೆಕ್ಕೆಗಳನ್ನು ಹೊಂದಿರುವ ದೈತ್ಯ ಪತಂಗ ಕಂಡುಬಂದಿದೆ. ರೆಡ್‌ಲ್ಯಾಂಡ್ಸ್‌ನಲ್ಲಿರುವ ಮೌಂಟ್ ಕಾಟನ್ ಸ್ಟೇಟ್ ಶಾಲೆಯಲ್ಲಿ ಹೊಸ ತರಗತಿ ಕೊಠಡಿಗಳ ನಿರ್ಮಾಣ ಕೆಲಸ ನಿರ್ವಹಿಸುತ್ತಿದ್ದ ಕೆಲಸಗಾರರು ಇದನ್ನು ಗಮನಿಸಿದ್ದಾರೆ. ಇವುಗಳ ಪ್ರಭೇದಗಳಲ್ಲೇ ಅತ್ಯಂತ ತೂಕವನ್ನು ಹೊಂದಿರುವ ಈ ಚಿಟ್ಟೆ 30 ಗ್ರಾಂ ತೂಗುತ್ತದೆ. ವಿಶ್ವದಲ್ಲೇ ಅತಿ ದೊಡ್ಡದಾದ, ಭಾರವಾದ ಪತಂಗ ಇದಾಗಿದೆ. ಇಲಿಯ ಗಾತ್ರದಷ್ಟಿರುವ ಈ ಚಿಟ್ಟೆ ಹಾರಲು ಬಹಳ ಕಷ್ಟಪಟ್ಟಿದೆ.

ಸದ್ಯ ಶಾಲಾ ಮಕ್ಕಳು ಇದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಇನ್ನು ಶಾಲೆಯ ಪ್ರಾಂಶುಪಾಲರಾದ ಮೀಗನ್ ಸ್ಟೀವರ್ಡ್ ಇದನ್ನು "ಅದ್ಭುತ ಶೋಧ" ಎಂದಿದ್ದಾರೆ. ABC Radio Brisbane ಜೊತೆಗೆ ಮಾತನಾಡಿದ ಪ್ರಾಂಶುಪಾಲರು 'ನಮ್ಮ ಹೊಸ ಶಾಲೆಯು ಮಳೆಕಾಡಿನ ಅಂಚಿನಲ್ಲಿದೆ. ಆದ್ದರಿಂದ ಚಿಟ್ಟೆ ನಮ್ಮ ಶಾಲಾ ಕಟ್ಟಡಕ್ಕೆ ಬಂದಿದೆ' ಎಂದಿದ್ದಾರೆ.

'ಅಲ್ಲದೇ ನಮ್ಮ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಲವಾರು ಪ್ರಾಣಿಗಳನ್ನು ನೋಡುತ್ತಿದ್ದರು. ಬುಷ್ ಟರ್ಕಿಗಳು, ವಾಲಬೀಸ್, ಕೋಲಾಗಳು, ಬಾತುಕೋಳಿಗಳು, ಹಾವು ಮತ್ತು ಒಮ್ಮೆ ಗ್ರಂಥಾಲಯದಲ್ಲಿ ಆಮೆಯನ್ನೂ ಕಂಡಿದ್ದರು. ಆದರೆ ಈ ರೀತಿಯಾದ ಚಿಟ್ಟೆಯನ್ನು ಕಂಡಿರಲಿಲ್ಲ. ಈಗ ಅದನ್ನೂ ನೋಡಿದ್ದಾರೆ. ಖುಷಿಯ ವಿಷಯವಿದು' ಎಂದಿದ್ದಾರೆ. ಇನ್ನು ಶಾಲೆಯ ಫೇಸ್ಬುಕ್ ಪುಟದಲ್ಲಿ ಚಿಟ್ಟೆಯ ಚಿತ್ರವನ್ನು ಹಂಚಿಕೊಳ್ಳಲಾಗಿದ್ದು ಸದ್ಯ ಈ ಪೋಸ್ಟ್ ವೈರಲ್ ಆಗಿದೆ. ಜೊತೆಗೆ ನೂರಾರು ಮೆಚ್ಚುಗೆಗಳು, ಪ್ರತಿಕ್ರಿಯೆ ಮತ್ತು ಶೇರ್‌ಗಳಿಂದ ತುಂಬಿಹೋಗಿದೆ.

ವರದಿಗಳ ಪ್ರಕಾರ, ಈ ಪತಂಗವು ಅದರ ಪ್ರಭೇದಗಳಲ್ಲಿ ಅತಿ ಹೆಚ್ಚು ಮತ್ತು 30 ಗ್ರಾಂವರೆಗೆ ತೂಗುತ್ತದೆ. ಕ್ವೀನ್ಸ್‌ಲ್ಯಾಂಡ್ ಮತ್ತು ನ್ಯೂ ಸೌತ್ ವೇಲ್ಸ್ ಕರಾವಳಿಯಲ್ಲಿ ದೈತ್ಯ ಮರದ ಪತಂಗಗಳು ಕಂಡುಬರುತ್ತವೆ. ಸದ್ಯ ಈ ಅಪರೂಪದ ಚಿಟ್ಟೆಯನ್ನು ಮಳೆಕಾಡಿನೊಳಗೆ ಬಿಡಲಾಗಿದೆ.

ವನ್ಯಜೀವಿ ತಜ್ಞರ ಪ್ರಕಾರ, ವಿಶ್ವದಲ್ಲೇ ಅತಿ ಹೆಚ್ಚು ದೊಡ್ಡದಾದ ಈ ಚಿಟ್ಟೆಗಳು ತನ್ನ ಭಾರದ ಕಾರಣದಿಂದ ಹೆಚ್ಚು ಹಾರಾಟ ನಡೆಸಲು ಸಾಧ್ಯವಾಗುವುದಿಲ್ಲ. ಅಲ್ಲದೇ ಮನುಷ್ಯರು ಇರುವ ಕಡೆ ಸುಳಿಯುವುದು ತೀರಾ ಅಪರೂಪ. ಮುಖ್ಯವಾಗಿ ಇವು ಕೆಲವು ದಿನಗಳು ಮಾತ್ರವೇ ಬದುಕುತ್ತವೆ. ಸಂಯೋಗ ಮತ್ತು ಮೊಟ್ಟೆಗಳನ್ನು ಇಟ್ಟ ನಂತರ ಅವು ಬದುಕಿಗೆ ವಿದಾಯ ಹೇಳುತ್ತವೆ. ಹೆಣ್ಣು 30 ಗ್ರಾಂ ವರೆಗೆ ತೂಗಬಹುದು , ಗಂಡು ಅರ್ಧದಷ್ಟು ಗಾತ್ರದಲ್ಲಿರುತ್ತದೆ.



ಮೌಂಟ್ ಕಾಟನ್ ಸ್ಟೇಟ್ ಶಾಲೆಯಲ್ಲಿ ಬಿಲ್ಡರ್‌ಗಳು ಪತಂಗವನ್ನು ಕಾಡಿಗೆ ಮರಳಿಸುವ ಮುನ್ನ ಅದರ ಫೋಟೊ ತೆಗೆದುಕೊಂಡರು. ಎಂಡೋಕ್ಸಿಲಾ ಸಿನೆರಿಯಸ್ ಎನ್ನುವ ಹೆಸರು ಈ ಚಿಟ್ಟೆಗಿದೆ. ಇದು ಹಲವು ಹೊಸ ಸಂಗತಿಗಳನ್ನು ಕಲಿಯಲು ಶಾಲೆಯಲ್ಲಿ ನೆರವಾಯಿತು.25 ಸೆಂಟಿಮೀಟರ್ ರೆಕ್ಕೆಗಳನ್ನು ಹೊಂದಿರುವ ಈ ಚಿಟ್ಟೆ ಕೀಟವಾಗಬಹುದು. ಆಹಾರಕ್ಕಾಗಿ ಮರಗಳನ್ನು ಕೊರೆಯಬಹುದು ಎಂದು ಕ್ವೀನ್ಸ್‌ಲ್ಯಾಂಡ್‌ ಸರ್ಕಾರ ಹೇಳಿದೆ.
First published: May 6, 2021, 6:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories