ಮಗನ ಶಿಕ್ಷಣಕ್ಕೆ ಸಾಕಷ್ಟು ಹಣ ಖರ್ಚು ಮಾಡಿದ್ದಕ್ಕೆ ಆತನನ್ನೇ ಮದುವೆಯಾದ ತಾಯಿ!

ಇತ್ತೀಚೆಗೆ ವಿವಾಹ ಕಾರ್ಯ ನೆರವೇರಿದೆ. ಈ ಮದುವೆಗೆ ಕೆಲವರು ವಿರೋಧ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಬೆಂಬಲ ಸೂಚಿಸಿದ್ದಾರೆ. ಇನ್ನು ಮದುವೆ ಬಗ್ಗೆ ಮೆಮೊರಿ ನೀಡುವ ಹೇಳಿಕೆ ತುಂಬಾನೇ ವಿಚಿತ್ರವಾಗಿದೆ.

news18-kannada
Updated:September 16, 2020, 2:31 PM IST
ಮಗನ ಶಿಕ್ಷಣಕ್ಕೆ ಸಾಕಷ್ಟು ಹಣ ಖರ್ಚು ಮಾಡಿದ್ದಕ್ಕೆ ಆತನನ್ನೇ ಮದುವೆಯಾದ ತಾಯಿ!
ಮದುವೆಯಾದ ಜೋಡಿ
  • Share this:
ಮಕ್ಕಳಿಗೆ ಶಿಕ್ಷಣ ಕೊಡಿಸೋದು ಪಾಲಕರ ಕರ್ತವ್ಯ. ಈ ಕರ್ತವ್ಯ ನಿಭಾಯಿಸಿದ ನಂತರ ಮಕ್ಕಳು ಉತ್ತಮ ಕೆಲಸ ಹಿಡಿದು ತಮ್ಮನ್ನು ಉತ್ತಮವಾಗಿ ನೋಡಿಕೊಳ್ಳಲಿ ಎಂಬುದು ಅನೇಕರ ಆಸೆ ಕೂಡ ಹೌದು. ಆದರೆ, ಮಕ್ಕಳ ಶಿಕ್ಷಣಕ್ಕಾಗಿ ಹಣ ಖರ್ಚು ಮಾಡಿದ್ದೇನೆ ಎನ್ನುವ ಕಾರಣಕ್ಕೆ ಆತನನ್ನೇ ಮದುವೆಯಾಗಿ ಬಿಟ್ಟರೆ? ಹೀಗೊಂದು ವಿಚಿತ್ರ ಘಟನೆ ನಡೆದಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.ಆಫ್ರಿಕಾದ ಮಲಾವಿ ದೇಶದಲ್ಲಿ ಈ ಘಟನೆ ನಡೆದಿದೆ. ಇದೊಂದು ಸಣ್ಣ ರಾಷ್ಟ್ರ. ಇದು ಸಾಕಷ್ಟು ನಿರ್ಲಕ್ಷಕ್ಕೆ ಒಳಗಾದ ರಾಷ್ಟ್ರ ಕೂಡ ಹೌದು. ಈ ದೇಶದಲ್ಲಿ ಈ ರೀತಿಯ ಘಟನೆಯೊಂದು ನಡೆದಿದೆ. 47 ವರ್ಷದ ಮೆಮೋರಿ ನಂಜೇಮಣಿ ಈ ರೀತಿ ವಿವಾಹವಾದವರು. ಈಕೆ 30 ವರ್ಷದ ಮಗನ ಜೊತೆ ಹಸೆಮಣೆ ಏರಿದ್ದಾಳೆ.


ಇತ್ತೀಚೆಗೆ ವಿವಾಹ ಕಾರ್ಯ ನೆರವೇರಿದೆ. ಈ ಮದುವೆಗೆ ಕೆಲವರು ವಿರೋಧ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಬೆಂಬಲ ಸೂಚಿಸಿದ್ದಾರೆ. ಇನ್ನು ಮದುವೆ ಬಗ್ಗೆ ಮೆಮೊರಿ ನೀಡುವ ಹೇಳಿಕೆ ತುಂಬಾನೇ ವಿಚಿತ್ರವಾಗಿದೆ. ನಾನು ನನ್ನ ಮಗನ ಏಳ್ಗೆಗಾಗಿ ಹಣ ಹೂಡಿಕೆ ಮಾಡಿದ್ದೇನೆ. ಹೀಗಿರುವಾಗ ಬೇರೆ ಯಾವುದೋ ಮಹಿಳೆ ಆತನನ್ನು ಮದುವೆಯಾದರೆ ಅದೆಷ್ಟು ಸರಿ? ಹೀಗಾಗಿ, ನಾನೇ ಆತನನ್ನು ಮದುವೆಯಾಗುತ್ತಿದ್ದೇನೆ, ಎಂದಿದ್ದಾಳೆ. ಈ ಮದುವೆಯನ್ನು ಅನೇಕರು ಟ್ರೋಲ್​ ಮಾಡಿದ್ದಾರೆ.
Published by: Rajesh Duggumane
First published: September 16, 2020, 12:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading