ಪಶ್ಚಿಮ ಬಂಗಾಳದ ಸಮುದ್ರ ದಂಡೆಗೆ ತೇಲಿ ಬಂತು 35 ಅಡಿ ಉದ್ದದ ತಿಮಿಂಗಿಲದ ಶವ!

ಕೆಲ ಸಮುದ್ರಗಳಲ್ಲಿ ಈ ರೀತಿಯ ದೊಡ್ಡ ದೊಡ್ಡ ತಿಮಿಂಗಿಲಗಳು ಬಂದು ಬೀಳುವುಸು ಸರ್ವೇ ಸಾಮಾನ್ಯವಾಗಿರುತ್ತವೆ. ಆದರೆ, ಮಂದರಮಣಿ ಬೀಚ್​ನಲ್ಲಿ ಮಾತ್ರ ಈ ರೀತಿ ನಡೆದಿದ್ದು ಇದೇ ಮೊದಲು ಎನ್ನುತ್ತಾರೆ ಸ್ಥಳೀಯ ಮೀನುಗಾರರು.

news18-kannada
Updated:June 29, 2020, 1:45 PM IST
ಪಶ್ಚಿಮ ಬಂಗಾಳದ ಸಮುದ್ರ ದಂಡೆಗೆ ತೇಲಿ ಬಂತು 35 ಅಡಿ ಉದ್ದದ ತಿಮಿಂಗಿಲದ ಶವ!
ಮೃತಪಟ್ಟ ತಿಮಿಂಗಿಲ
  • Share this:
ಬೆಂಗಳೂರು (ಜೂ.29): ಚಿಕ್ಕಪುಟ್ಟ ಮೀನುಗಳು ದಡಕ್ಕೆ ತೇಲಿ ಬರುವುದು ಸಾಮಾನ್ಯ. ಆದರೆ, ದೊಡ್ಡ ಗಾತ್ರದ ತಿಮಿಂಗಿಲ ದಡಕ್ಕೆ ತೇಲಿ ಬಂದರೆ! ಹೀಗೊಂದು ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಸುಮಾರು 35 ಅಡಿ ಉದ್ದದ ತಿಮಿಂಗಿಲದ ಶವ ದಡಕ್ಕೆ ಬಂದಪ್ಪಳಿಸಿದೆ.

ಕೋಲ್ಕತ್ತದಿಂದ 150 ಕಿ.ಮೀ ದೂರದಲ್ಲಿರುವ ಮಂದರಮಣಿ ಬೀಚ್​ನಲ್ಲಿ ಈ ಘಟನೆ ನಡೆದಿದೆ. ಇಂದು ಮುಂಜಾನೆ ಸ್ಥಳೀಯ ಮೀನುಗಾರರು ದಡಕ್ಕೆ ಬರುತ್ತಿದ್ದಂತೆ ದೊಡ್ಡ ಗಾತ್ರದ ವಸ್ತುವೊಂದು ಕಂಡಿದೆ. ಕೆಲವರು ಬೋಟ್ ಎಂದು ಭಾವಿಸಿದ್ದರು. ಆದರೆ, ನಂತರ ಅದು ತಿಮಿಂಗಿಲ ಎಂದು ಗೊತ್ತಾಗಿತ್ತು.

ಸತ್ತು ಬಿದ್ದಿರುವ ತಿಮಿಂಗಲದ ದೇಹದ ಮೇಲೆ ದೊಡ್ಡ ಪ್ರಮಾಣದ ಗಾಯಗಳಿವೆ. ಮೀನನ್ನು ನೋಡಲು ಸ್ಥಳಿಯರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಅಷ್ಟು ಗಾಯವಾಗಲು ಕಾರಣವೇನು? ಇದನ್ನು ಯಾರಾದರೂ ಹತ್ಯೆ ಮಾಡಿದ್ದಾರೆಯೇ ಅಥವಾ ಇದೊಂದು ಸಹಜ ಸಾವೇ ಎನ್ನುವ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ಕೆಲ ಸಮುದ್ರಗಳಲ್ಲಿ ಈ ರೀತಿಯ ದೊಡ್ಡ ದೊಡ್ಡ ತಿಮಿಂಗಿಲಗಳು ಬಂದು ಬೀಳುವುಸು ಸರ್ವೇ ಸಾಮಾನ್ಯವಾಗಿರುತ್ತವೆ. ಆದರೆ, ಮಂದರಮಣಿ ಬೀಚ್​ನಲ್ಲಿ ಮಾತ್ರ ಈ ರೀತಿ ನಡೆದಿದ್ದು ಇದೇ ಮೊದಲು ಎನ್ನುತ್ತಾರೆ ಸ್ಥಳೀಯ ಮೀನುಗಾರರು.

ಮಂದರಮಣಿ ಪಶ್ಚಿಮ ಬಂಗಾಳದ ಪ್ರಮುಖ ಪ್ರವಾಸಿ ತಾಣವಾಗಿದೆ. ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ಇದನ್ನು ಮುಚ್ಚಲಾಗಿದೆ.
First published: June 29, 2020, 1:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading