ಮೊಬೈಲ್- ಟೆಕ್

  • associate partner

Xiaomi: ಮಕ್ಕಳಿಗಾಗಿ ಶಿಯೋಮಿ ಪರಿಚಯಿಸಿದೆ ಹೊಸ ಸ್ಮಾರ್ಟ್​ಫೋನ್​​​!

Xiaomi Kids Smartphone: ಶಿಯೋಮಿ ಮಕ್ಕಳಿಗಾಗಿ ಕಿನ್​​ ಎಐ ಫೋನ್​ ಅನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್​ಫೋನ್​ ಚೀನಾದ ಕ್ರೌಡ್​ಫಂಡಿಂಗ್​ನಲ್ಲಿ ಉತ್ಪಾದನೆಯಾಗುತ್ತಿದ್ದು, ಖರೀದಿದಾರರಿಗಾಗಿ ಯುಪಿನ್​​​ ಪ್ಲಾರ್ಟ್​ಫಾರ್ಮ್​ನಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದೆ.

news18-kannada
Updated:September 21, 2020, 8:33 AM IST
Xiaomi: ಮಕ್ಕಳಿಗಾಗಿ ಶಿಯೋಮಿ ಪರಿಚಯಿಸಿದೆ ಹೊಸ ಸ್ಮಾರ್ಟ್​ಫೋನ್​​​!
Xiaomi Kids smartphone
  • Share this:
ಚೀನಾದ ಸ್ಮಾರ್ಟ್​ಫೋನ್​ ಉತ್ಪಾದಕ ಸಂಸ್ಥೆಯಾದ ಶಿಯೋಮಿ ಹಲವಾರು ಆ್ಯಂಡ್ರಾಯ್ಡ್​ ಫೋನ್​ಗಳನ್ನ ಪರಿಚಯಿಸಿದೆ. ವಿವಿಧ ಫೀಚರ್​ಗಳನ್ನು ಅಳವಡಿಸುವದರ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆದರೆ ಇದೀಗ ಶಿಯೋಮಿ ಮಕ್ಕಳಿಗಾಗಿ ಸ್ಮಾರ್ಟ್​ಫೋನ್​ವೊಂದನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿದೆ. ಶಿಯೋಮಿ ಮಕ್ಕಳಿಗಾಗಿ ಕಿನ್​​ ಎಐ ಫೋನ್​ ಅನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್​ಫೋನ್​ ಚೀನಾದ ಕ್ರೌಡ್​ಫಂಡಿಂಗ್​ನಲ್ಲಿ ಉತ್ಪಾದನೆಯಾಗುತ್ತಿದ್ದು, ಖರೀದಿದಾರರಿಗಾಗಿ ಯುಪಿನ್​​​ ಪ್ಲಾರ್ಟ್​ಫಾರ್ಮ್​ನಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದೆ.

ಗಿಝ್​ಮೊಚೀನಾ ವರದಿ ಮಾಡಿದ ಪ್ರಕಾರ, ಮಕ್ಕಳಿಗಾಗಿ ಸಿದ್ದಪಡಿಸಿದ ನೂತನ ಸ್ಮಾರ್ಟ್​ಫೋನ್​​ 240x​240 ಪಿಕ್ಸೆಲ್​ ಸ್ಕ್ರೀನ್​ ರೆಸಲ್ಯೂಶನ್​​ ಹೊಂದಿದ್ದು, ಆ್ಯಂಡ್ರಾಯ್ಡ್​ ಒಎಸ್​​ನಿಂದ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ವೈ-ಫೈ ಮತ್ತು ಬ್ಲೂಟೂತ್​ 4.2 ಇದರಲ್ಲಿದೆ. 1,150ಎಮ್​ಎಚ್​ ಬ್ಯಾಟರಿಯನ್ನು ಅಳವಡಿಸಲಾಗಿದೆ.

ಇದರಲ್ಲಿ 4ಜಿ ಇಸಿಮ್​​ ಬಳಸಿಕೊಂಡು ಕರೆ ಮಾಡಬಹುದಾಗಿದೆ. ಜೊತೆಗೆ ಜಿಪಿಎಸ್​​​ ಆಯ್ಕೆಯನ್ನು ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ XiaoAI ಸ್ಮಾರ್ಟ್​ ವಾಯ್ಸ್​​ ಅಸಿಸ್ಟೆಂಟ್​​ ಬೆಂಬಲವನ್ನು ಪಡೆದಿದೆ. ಮಕ್ಕಳಿಗಾಗಿ ಕೆಂಪು ಮತ್ತು ಬಿಳಿಯ ಬಣ್ಣದಲ್ಲಿ ಬಿಡುಗಡೆ ಮಾಡಿದ್ದು, ಇದರ ಬೆಲೆ 4,200 ರೂ ಎಂದು ಅಂದಾಜಿಸಲಾಗಿದೆ.

ಕಿಡ್ಸ್​​ ಸ್ಮಾರ್ಟ್​ಫೋನ್​


ಸದ್ಯ, ಈ ಕಿಡ್ಸ್​​ ಸ್ಮಾರ್ಟ್​ಫೋನ್​ ಅನ್ನು ವೆಬ್​ಸೈಟ್​ ಮೂಲಕ ಮಾರಾಟ ನಡೆಸುತ್ತಿದೆ. ಅಗಸ್ಟ್​ 10 ನಂತರ ಮಾರುಕಟ್ಟೆಯ ವ್ಯಾಪ್ತಿಯನ್ನು ಹೆಚ್ಚಿಸಲು ಯೋಜನೆ ಹಾಕಿಕೊಂಡಿದೆ. ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳ ಯುಗದಲ್ಲಿ ಮಕ್ಕಳಿಗಾಗಿ ಸ್ಮಾರ್ಟ್​ಫೋನ್​ವೊಂದು ಮಾರುಕಟ್ಟೆಗೆ ಬಿಡುಗಡೆಗೊಂಡಿರುವು ಅಚ್ಚರಿಗೆ ಕಾರಣವಾಗಿದೆ.

ಶಿಯೋಮಿ ಹೊಸ ಉತ್ಪನ್ನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಪರಿಚಯಿಸುತ್ತಲೇ ಬಂದಿದೆ. ಇತ್ತೀಚೆಗೆ ಮಿ ಟಿವಿ ಸ್ಟಿಕ್​ ಅನ್ನು ಪರಿಚಯಿಸಿತ್ತು. ಅದರ ಜೊತೆಗೆ ಮಿ ಬ್ಯಾಂಡ್​ 4 ಸಿ, ಮಿ ಬ್ಯಾಂಡ್​ 5 ಅನ್ನು ಪರಿಚಯಿಸಿದೆ. ಇದೀಗ ಮಕ್ಕಳಿಗಾಗಿ ಸ್ಮಾರ್ಟ್​ಫೋನ್​ ಉತ್ಪಾದಿಸಿ ಬಿಡುಗಡೆ ಮಾಡಿದೆ.
Published by: Harshith AS
First published: September 21, 2020, 7:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading