HOME » NEWS » Tech » WHATSAPP MAY STOP WORKING ON THESE SMARTPHONES WHICH IS YOUR MOBILES CHECK HERE STG SCT

WhatsApp: ನೀವು ವಾಟ್ಸಾಪ್ ಬಳಸುತ್ತೀರಾ?; ಹಾಗಾದರೆ ಈ ಸುದ್ದಿಯನ್ನು ಓದಲೇಬೇಕು!

WhatsApp | ಕೆಲವೊಂದು ಹಳೆಯ ಅಪರೇಟಿಂಗ್ ಸಿಸ್ಟಮ್ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಸಫೋರ್ಟ್ ಮಾಡುವುದಿಲ್ಲ. ಹಾಗಾದರೆ ಯಾವ ಮೊಬೈಲ್‌ಗಳಲ್ಲಿ ವಾಟ್ಸಾಪ್‌ ಸೇವೆ ಸ್ಥಗಿತ ಆಗಬಹುದು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

news18-kannada
Updated:March 9, 2021, 11:45 AM IST
WhatsApp: ನೀವು ವಾಟ್ಸಾಪ್ ಬಳಸುತ್ತೀರಾ?; ಹಾಗಾದರೆ ಈ ಸುದ್ದಿಯನ್ನು ಓದಲೇಬೇಕು!
ವಾಟ್ಸ್​ಆ್ಯಪ್
  • Share this:
ನೀವು ವಾಟ್ಸಾಪ್‌ ಅನ್ನು ಬಳಕೆ ಮಾಡುತ್ತಿದ್ದರೆ ಈ ಸುದ್ದಿಯನ್ನು ಗಮನಿಸಲೇಬೇಕು. ಹೌದು, ಎಲ್ಲ ವಾಟ್ಸಾಪ್ ಬಳಕೆದಾರರಿಗೆ ವಾಟ್ಸಾಪ್ ಇದೀಗ ಒಂದು ಶಾಕಿಂಗ್ ಸುದ್ದಿಯನ್ನು ಹೊರ ಹಾಕಿದೆ. ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಏನೆಂದರೆ, ಕೆಲವೊಂದು ಹಳೆಯ ಅಪರೇಟಿಂಗ್ ಸಿಸ್ಟಮ್ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಸಫೋರ್ಟ್ ಮಾಡುವುದಿಲ್ಲ. ಹಾಗಾದರೆ ಯಾವೆಲ್ಲ ಮೊಬೈಲ್‌ಗಳಲ್ಲಿ ವಾಟ್ಸಾಪ್‌ ಸೇವೆ ಸ್ಥಗಿತ ಆಗಬಹುದು ಎನ್ನುವುದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕೆಲವೊಂದು ಆಪಲ್ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಣೆ ಮಾಡುವುದಿಲ್ಲ. ಹೌದು, ಆಪಲ್ ಐಒಎಸ್ 9 ಮತ್ತು ಅದಕ್ಕಿಂತ ಕೆಳಗಿನ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ವಾಟ್ಸಾಪ್‌ ಕೆಲಸ ಮಾಡುವುದಿಲ್ಲ. ಹೀಗಾಗಿ ಆಪಲ್ ಸ್ಮಾರ್ಟ್‌ಫೋನ್ ಬಳಕೆದಾರರು ಕೂಡಲೇ ತಮ್ಮ ಆಪರೇಟಿಂಗ್ ಸಿಸ್ಟಮ್‌ ಅನ್ನು ನವೀಕರಣ ಮಾಡಿಕೊಳ್ಳಬೇಕಿದೆ.

ಆಂಡ್ರಾಯ್ಡ್ ಫೋನ್‌ಗಳಲ್ಲಿ:

ಕೇವಲ ಆಪಲ್ ಸ್ಮಾರ್ಟ್‌ಫೋನ್ ಅಷ್ಟೇ ಅಲ್ಲದೇ, ಕೆಲವೊಂದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿಯೂ ವಾಟ್ಸಾಪ್ ತನ್ನ ಕೆಲಸವನ್ನು ನಿಲ್ಲಿಸಲಿದೆ. ಹೌದು ಆಂಡ್ರಾಯ್ಡ್ 4.0.3 ಹಾಗೂ ಅದಕ್ಕಿಂತ ಹಳೆಯ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಸೇವೆ ಸ್ಥಗಿತವಾಗಲಿದೆ. ಹೀಗಾಗಿ ಆಂಡ್ರಾಯ್ಡ್ ಬಳಕೆದಾರರು ಕೂಡಲೇ ತಮ್ಮ ಆಪರೇಟಿಂಗ್ ಸಿಸ್ಟಮ್‌ ಅನ್ನು ಅಪ್‌ಡೇಟ್‌ ಮಾಡಿಕೊಳ್ಳಬೇಕಿದೆ.

ಲೈನಕ್ಸ್‌:
ಇನ್ನು ಲೈನಕ್ಸ್‌ ಆಪರೇಟಿಂಗ್ ಸಿಸ್ಟಮ್‌ನ, KaiOS 2.5.1 ಅಥವಾ ಅದಕ್ಕೂ ಲೇಟೆಸ್ಟ್ ಅಪರೇಟಿಂಗ್ ಸಿಸ್ಟಮ್‌ನಲ್ಲಿ ಮಾತ್ರ ವಾಟ್ಸಾಪ್ ಇನ್ಮುಂದೆ ಕೆಲಸ ಮಾಡುತ್ತದೆ. ವರದಿಯೊಂದರ ಪ್ರಕಾರ, ವಾಟ್ಸಾಪ್ ಶೀಘ್ರದಲ್ಲಿಯೇ ತನ್ನ FAQ ಪೇಜ್‌ನಲ್ಲಿ ಯಾವೆಲ್ಲ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ವಾಟ್ಸಾಪ್ ತನ್ನ ಸೇವೆಯನ್ನು ಸ್ಥಗಿತ ಮಾಡಲಿದೆ ಎನ್ನುವ ಕುರಿತು ಮಾಹಿತಿಯನ್ನು ಅಪ್‌ಡೇಟ್ ಮಾಡಲಿದೆ. ಇದರಲ್ಲಿ ವಾಟ್ಸಾಪ್ ಸಪೋರ್ಟ್ ಮಾಡುವ ಎಲ್ಲ ಆಪರೇಟಿಂಗ್ ಸಿಸ್ಟೆಮ್‌ಗಳ ಮಾಹಿತಿಯೂ ಲಭ್ಯವಾಗಲಿದೆ.

ಸದ್ಯದ ವಾಟ್ಸಾಪ್‌ನ FAQ ಪೇಜ್‌ ಪ್ರಕಾರ, ಐಓಎಸ್ 9 ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ವಾಟ್ಸಾಪ್ ಸಪೋರ್ಟ್ ಆಗುತ್ತದೆ ಎಂದು ಹೇಳುತ್ತಿದೆ. ಅಲ್ಲದೇ ಆಂಡ್ರಾಯ್ಡ್ 4.0.3 ಹಾಗೂ ಅದಕ್ಕಿಂತ ಮೇಲ್ಪಟ್ಟ ಆಪರೇಟಿಂಗ್ ಸಿಸ್ಟೆಮ್‌ಗಳಲ್ಲಿ ವಾಟ್ಸಾಪ್ ಸಪೋರ್ಟ್ ಮಾಡುತ್ತಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಈ ಕುರಿತು ಎಲ್ಲ ವಿವರವಾದ ಮಾಹಿತಿಯನ್ನು ವಾಟ್ಸಾಪ್ ಶೀಘ್ರದಲ್ಲಿಯೇ ನೀಡಲಿದೆ.ಪರಿಹಾರ ಏನು?:

ಆದರೆ ಕೆಲವೊಬ್ಬರು ತಮ್ಮ ಹಳೆಯ ಫೋನ್‌ನಲ್ಲಿಯೇ ವಾಟ್ಸಾಪ್ ಬಳಸಬೇಕು ಎಂದಾದರೆ, ತಮ್ಮ ಮೊಬೈಲ್‌ನ ಹಳೆಯ ಆಪರೇಟಿಂಗ್ ಸಿಸ್ಟಮ್‌ ಅನ್ನು ಅಪ್‌ಡೇಟ್ ಮಾಡಬೇಕಾಗುತ್ತದೆ. ಐಫೋನ್‌ನಲ್ಲಿ ಐಓಎಸ್ 9ಕ್ಕಿಂತ ಲೆಟೇಸ್ಟ್ ಇರುವ ಆಪರೇಟಿಂಗ್ ಸಿಸ್ಡಮ್‌ಗೆ ಅಪ್‌ಡೇಟ್ ಮಾಡಬೇಕಾಗುತ್ತದೆ. ಇನ್ನು ಆಂಡ್ರಾಯ್ಡ್ ಬಳಕೆದಾರರು ತಮ್ಮ ಸೆಟ್ಟಿಂಗ್‌ಗೆ ಹೋಗಿ ಲೇಟೆಸ್ಟ್ ಆಪರೇಟಿಂಗ್ ಸಿಸ್ಟೆಮ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಹೀಗೆ ಮಾಡಿದರೆ ಮಾತ್ರ ಇನ್ಮುಂದೆ ವಾಟ್ಸಾಪ್ ಈ ಡಿವೈಸ್‌ಗಳಲ್ಲಿ ಕಾರ್ಯ ನಿರ್ವಹಣೆ ಮಾಡಲಿದೆ.

WABetaInfo ಎನ್ನುವ ವೆಬ್‌ಸೈಟ್ ಈ ಕುರಿತು ಮತ್ತೊಂದು ಮಾಹಿತಿಯನ್ನು ಹೊರ ಹಾಕಿದೆ. ವಾಟ್ಸಾಪ್‌ನ 'ಡಿಸ್‌ಅಪಿಯರಿಂಗ್ ಇಮೇಜ್' (ಆಟೋ ಡಿಲೀಟ್) ಎನ್ನುವ ಫೀಚರ್‌ ಬಗ್ಗೆ ಈ ವೆಬ್‌ಸೈಟ್ ಹೇಳೋದೇನೆಂದರೆ, ವಾಟ್ಸಾಪ್ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಬಳಕೆದಾರರು ಚಾಟ್‌ನಲ್ಲಿ ಕಳಿಸಿದ ಫೋಟೊಗಳು ಕೆಲವೊಂದು ನಿರ್ದಿಷ್ಟ ಸಮಯದೊಳಗೆ ಆಟೋ ಡಿಲೀಟ್ ಆಗುವ ಫೀಚರ್ ಇದಾಗಿದೆ. ಆದರೆ ಈ ಫೀಚರ್‌ನಲ್ಲಿ ನ್ಯೂನತೆಯೊಂದು ಇದನ್ನು ಕಾಡುತ್ತಿದೆ. ಹೌದು, ನಾವು ಚಾಟ್‌ನಲ್ಲಿ ಫೋಟೊ/ಇಮೇಜ್ ಕಳಿಸಿದ ಮೇಲೆ ಅದನ್ನು ಸ್ವೀಕರಿಸಿದವರು ಸ್ಕ್ರೀನ್ ಶಾಟ್ ತೆಗೆಯುವ ಸಾಧ್ಯತೆ ಇದೆ. ಹೀಗಾಗಿ ಈ ನ್ಯೂನತೆ ಮೇಲೆ ವಾಟ್ಸಾಪ್ ಸದ್ಯಕ್ಕೆ ಕೆಲಸ ಮಾಡುತ್ತಿದೆ.

ಅಲ್ಲದೇ ಈ ಆಟೋ ಡಿಲೀಟ್ ಫೀಚರ್ ಪ್ರೈವೇಟ್ ಮತ್ತು ಗ್ರೂಪ್‌ ಚಾಟ್‌ಗಳಿಗೆ ಇರಡಕ್ಕೂ ಇರಲಿದೆ. ಇನ್ನು ವಾಟ್ಸಾಪ್‌ನ ಮತ್ತೊಂದು ಹೊಸ ಫೀಚರ್ ಕೂಡ ಇದೀಗ ಸುದ್ದಿಯಲ್ಲಿದೆ. ಡೆಸ್ಕ್‌ಟಾಪ್‌ ಮೇಲೆ ಆಡಿಯೋ ಮತ್ತು ವಿಡಿಯೋ ಫೀಚರ್ ಅನ್ನು ವಾಟ್ಸಾಪ್ ಪರಿಚಯಿಸುತ್ತಿದೆ. ಈ ಫೀಚರ್ ಸದ್ಯಕ್ಕೆ ಕೆಲವೊಂದು ಬೀಟಾ ವರ್ಶನ್‌ಗಳಲ್ಲಿ ಮಾತ್ರ ಬಿಡುಗಡೆ ಆಗಿದೆ. ಕೆಲವು ಸಮಯದ ನಂತರ ಇನ್ನುಳಿದವುಗಳಿಗೂ ಈ ಫೀಚರ್ ಅನ್ನು ವಾಟ್ಸಾಪ್ ಪರಿಚಯಿಸುತ್ತದೆ.

ಆದರೆ, ಹಳೆಯ ಮೊಬೈಲ್‌ನಲ್ಲಿ ವಾಟ್ಸಾಪ್‌ ಬಳಸುವವರು ಮಾತ್ರ ತಮ್ಮ ಆಪರೇಟಿಂಗ್ ಸಿಸ್ಟಮ್ ಅನ್ನು ಲೇಟೆಸ್ಟ್ ವರ್ಶನ್‌ಗೆ ಅಪ್‌ಡೇಟ್‌ ಮಾಡುವುದನ್ನು ಮರೆಯಬೇಡಿ.
Published by: Sushma Chakre
First published: March 9, 2021, 11:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories