HOME » NEWS » Tech » TWITTER TESTING UNDO FEATURE TO LET YOU EDIT TWEETS AFTER HITTING SEND HG

Twitter: ಪರಿಚಯಿಸಲು ಮುಂದಾಗಿದೆ Edit ಟ್ವೀಟ್ ಆಯ್ಕೆ!

ಅನೇಕ ವರ್ಷದಿಂದ ಫೇಸ್​ಬುಕ್​, ಇನ್​ಸ್ಟಾಗ್ರಾಂ ತನ್ನ ಫ್ಲಾರ್ಟ್​ಫಾರ್ಮ್​ನಲ್ಲಿ ಕಳುಹಿಸುವ ಸಂದೇಶ, ಫೋಸ್ಟ್​ ಅನ್ನು ಎಡಿಟ್​ ಮಾಡುವ ಆಯ್ಕೆಯನ್ನು ನೀಡಿದೆ. ಆದರೆ ಟ್ವಿಟ್ಟರ್​ ಅಂತಹದೊಂದು ಆಯ್ಕೆಯನ್ನು ಬಳಕೆದಾರರಿಗೆ ಒದಗಿಸಿರಲಿಲ್ಲ

news18-kannada
Updated:March 8, 2021, 11:04 AM IST
Twitter: ಪರಿಚಯಿಸಲು ಮುಂದಾಗಿದೆ Edit ಟ್ವೀಟ್ ಆಯ್ಕೆ!
ಟ್ವಿಟ್ಟರ್
  • Share this:
ವಿಶ್ವದಾದ್ಯಂತ ಅನೇಕರು ಟ್ವಿಟ್ಟರ್​ ಅನ್ನು ಬಳಸುತ್ತಾರೆ. ಅದರ ಮೂಲಕ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ರಾಜಕಾರಣಿಗಳು, ಸಿನಿ ತಾರೆಯರು ಮತ್ತು ಜನಸಾಮಾನ್ಯರು ಟ್ವಿಟ್ಟರನ್ನು ಬಳಸುತ್ತಾರೆ. ಅದರಂತೆ ಕ್ಯಾಲಿಫೋರ್ನಿಯಾ ಮೂಲದ ಟ್ವಿಟ್ಟರ್​ ಇದೀಗ ಹೊಸ ಫೀಚರ್​ ಅನ್ನು ತನ್ನ ಬಳಕೆದಾರರಿಗೆ ಪರಿಚಯಿಸಲು ಮುಂದಾಗಿದೆ.

ಬಳಕೆದಾರರು ಮಾಡಿರುವ ಟ್ವೀಟ್​ ಅನ್ನು ಎಡಿಟ್​ ಮಾಡುವ ಫೀಚರ್​​ ಅನ್ನು ಪರಿಚಯಿಸಲು ಟ್ವಿಟ್ಟರ್​​ ಮುಂದಾಗಿದೆ. ಅದಕ್ಕಾಗಿ ಟೆಸ್ಟಿಂಗ್​ ನಡೆಸುತ್ತಿದೆ. ಈವರೆಗೆ ಟ್ವಿಟ್ಟರ್​ನಲ್ಲಿ ಯಾವುದೇ ಟ್ವೀಟ್​ ಅನ್ನು ಎಡಿಟ್​ ಮಾಡುವ ಆಯ್ಕೆಯನ್ನು ನೀಡಿರಲಿಲ್ಲ. ಬಳಕೆದಾರ ಮಾಡಿರುವ ಟ್ವೀಟ್​ನಲ್ಲಿ ಅಕ್ಷರ ದೋಷ ಕಂಡುಬಂದರೆ ಡಿಲೀಟ್​ ಮಾಡಬೇಕಿತ್ತು. ಆದರೀಗ ವಾಸ್ತವಿಕ ದೋಷ ಕಂಡುಬಂದಾಗ ಟ್ವೀಟ್​ ಅನ್ನು ರದ್ದುಗೊಳಿಸುವ ಅವಕಾಶವನ್ನು ನೀಡಲು ಮುಂದಾಗಿದೆ.

ಅನೇಕ ವರ್ಷದಿಂದ ಫೇಸ್​ಬುಕ್​, ಇನ್​ಸ್ಟಾಗ್ರಾಂ ತನ್ನ ಫ್ಲಾರ್ಟ್​ಫಾರ್ಮ್​ನಲ್ಲಿ ಕಳುಹಿಸುವ ಸಂದೇಶ, ಫೋಸ್ಟ್​ ಅನ್ನು ಎಡಿಟ್​ ಮಾಡುವ ಆಯ್ಕೆಯನ್ನು ನೀಡಿದೆ. ಆದರೆ ಟ್ವಿಟ್ಟರ್​ ಅಂತಹದೊಂದು ಆಯ್ಕೆಯನ್ನು ಬಳಕೆದಾರರಿಗೆ ಒದಗಿಸಿರಲಿಲ್ಲ ಎಂದು ಸಿಇಒ ಜಾಕ್​ ಡಾರ್ಸೆ ಹೇಳಿದ್ದಾರೆ.



ಇತ್ತೀಚೆಗೆ ರಿವರ್ಸ್​ ಇಂಜಿನಿಯರ್​ ಜೇನ್​ ಮಂಚನ್​​ ವಾಂಗ್​ ಟ್ವಿಟ್ಟರ್​ನ ನೂತನ ಫೀಚರ್​ ಬಗ್ಗೆ ಹೇಳಿಕೊಂಡಿದ್ದಾರೆ. ಬಳಕೆದಾರ ಟ್ವೀಟ್​ ಮಾಡಿದ ಕೆಲವೇ ಸೆಂಕೆಂಡುಗಳಲ್ಲಿ ಮಾತ್ರ ಈ ಎಡಿಟ್​ ಆಯ್ಕೆ ಕಾಣಿಸಿಕೊಳ್ಳಲಿದೆ. ಆ ಬಳಿಕ ಕಾಣಿಸಿಕೊಳ್ಳಿವುದಿಲ್ಲ. ಆದರೆ ಡಿಲೀಟ್​ ಆಯ್ಕೆ ನಿರಂತರವಾಗಿ ಕಾಣಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
Youtube Video

ಟ್ವಿಟ್ಟರ್​ ಅನ್ನು ಸಾಕಷ್ಟು ಜನರು ಬಳಸುತ್ತಾರೆ. ಅದರಲ್ಲೂ ಸೆಲೆಬ್ರಿಗಳಿಂದ ಹಿಡಿದು, ರಾಜಕಾರಣಿಗಳು, ದೇಶ- ವಿದೇಶ ಸಮಗ್ರ ಮಾಹಿತಿಯನ್ನು ಇದರ ಮೂಲಕ ಹಂಚಿಕೊಳ್ಳುತ್ತಾರೆ. ಕ್ಯಾಲಿಫೋರ್ನಿಯಾ ಮೂಲದ ಟ್ವಿಟ್ಟರ್​ ಅನ್ನು 2006 ಮಾರ್ಚ್​ 21ರಂದು ಪರಿಚಯಿಸಲಾಯಿತು.
Published by: Harshith AS
First published: March 8, 2021, 11:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories