HOME » NEWS » Tech » TWITTER EXPLAINS WHY SOME USERS ARE LOSING FOLLOWERS HG

Twitter: ಫಾಲೋವರ್ಸ್​ಗಳನ್ನು ಕಳೆದುಕೊಳ್ಳುತ್ತಿರುವ ಸೆಲೆಬ್ರಿಟಿಗಳು; ಟ್ವಿಟ್ಟರ್​ ಏನು ಹೇಳುತ್ತೆ?

Twitter: ಇತ್ತೀಚೆಗೆ ಟ್ವಿಟ್ಟರ್​ನಲ್ಲಿ ಸ್ಪಾಮ್​ ಪ್ರೊಫೈಲ್​ಗಳು ಹೆಚ್ಚಾಗಿ ಕಂಡುಬಂದವು. ಅದನ್ನು ಗಮನಿಸಿದ ಟ್ವಿಟ್ಟರ್​ ತೆಗೆದುಹಾಕಿದೆ. ಇದರಿಂದಾಗಿ ಕೆಲವು ಖಾತೆ ಅನುಯಾಯಿಗಳ ಸಂಖ್ಯೆಯಲ್ಲಿ ಏರಿಳಿತ ಕಾಣಲು ಪ್ರಮುಖ ಕಾರಣವಾಗಿದೆ.

news18-kannada
Updated:June 16, 2021, 10:35 AM IST
Twitter: ಫಾಲೋವರ್ಸ್​ಗಳನ್ನು ಕಳೆದುಕೊಳ್ಳುತ್ತಿರುವ ಸೆಲೆಬ್ರಿಟಿಗಳು; ಟ್ವಿಟ್ಟರ್​ ಏನು ಹೇಳುತ್ತೆ?
Twitter
  • Share this:
ಜನಪ್ರಿಯ ತಾಣಗಳಲ್ಲಿ ಟ್ವಿಟ್ಟರ್​ ಕೂಡ ಒಂದು.ಅನೇಕ ಬಳಕೆದಾರರನ್ನು ಹೊಂದಿರುವ ಮತ್ತು ಸೆಲೆಬ್ರಿಟಿ, ಸಿನಿಮಾ ತಾರೆಯರು, ರಾಜಕಾರಣಿ ಹೀಗೆ ನಾನಾ ದೇಶದ ಜನಸಾಮಾನ್ಯರು ಟ್ವಿಟ್ಟರ್​ ಅನ್ನು ಬಳಸುತ್ತಾರೆ. ಆದರೆ ಇತ್ತೀಚೆಗೆ ಟ್ವಿಟ್ಟರ್​ನಲ್ಲಿರುವ ಕೆಲವು ಖಾತೆಗಳ ಅನುಯಾಯಿ ಸಂಖ್ಯೆಯಲ್ಲಿ ಏರಿಳಿತ ಕಂಡುಬಂದಿದೆ.

ಇತ್ತೀಚೆಗೆ ಟ್ವಿಟ್ಟರ್​ನಲ್ಲಿ ಸ್ಪಾಮ್​ ಪ್ರೊಫೈಲ್​ಗಳು ಹೆಚ್ಚಾಗಿ ಕಂಡುಬಂದವು. ಅದನ್ನು ಗಮನಿಸಿದ ಟ್ವಿಟ್ಟರ್​ ತೆಗೆದುಹಾಕಿದೆ. ಇದರಿಂದಾಗಿ ಕೆಲವು ಖಾತೆ ಅನುಯಾಯಿಗಳ ಸಂಖ್ಯೆಯಲ್ಲಿ ಏರಿಳಿತ ಕಾಣಲು ಪ್ರಮುಖ ಕಾರಣವಾಗಿದೆ.

ಇತ್ತೀಚೆಗೆ ಬಾಲಿವುಡ್​ ನಟರನ್ನು ಒಳಗೊಂಡು, ಅನುಪಮ್​ ಖೇರ್​ ಮತ್ತು ಟಿವಿ ಪತ್ರಕರ್ತ ರಿಚರ್​ ಖೇರ್​ ಅವರು ಒಂದು ದಿನದಲ್ಲಿ ನೂರಾರು ಅನುಯಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ  ದೂರು ನೀಡಿದ್ದಾರೆ.

ಟ್ವಿಟ್ಟರ್ ತನ್ನ​​ ಖಾತೆದಾರರ ಪಾಸ್​ವರ್ಡ್​ ಪರಿಶೀಲನೆ ಮತ್ತು ಫೋನ್​ ನಂಬರ್ ಪರಿಶೀಲಿಸುತ್ತಿದೆ. ಸ್ಪಾಮ್​ ಅನ್ನು ತಡೆಗಟ್ಟಲು ಮತ್ತು ಖಾತೆದಾರರನ್ನು ಸುರಕ್ಷಿತವಾಗಿಡಲು ನಿಯಮಿತವನ್ನಾಗಿ ಮಾಡುತ್ತೇವೆ ಎಂದು ಹೇಳಿದೆ.

ಕೆಲವು ಖಾತೆಗಳು ತಾತ್ಕಾಲಿಕ ಐಡಿಗಳೊಂದಿಗೆ ಮತ್ತು ಟ್ರೋಲ್​ ಖಾತೆಗಳಿಗಾಗಿ ನಿರ್ವಹಿಸುತ್ತಾರೆ. ಇದನ್ನರಿತು ಟ್ವಿಟ್ಟರ್​ ಪರಿಶೀಲಿಸುತ್ತಿದೆ. ಜೊತೆಗೆ ಸ್ಪಾಮ್ ಖಾತೆಗಳನ್ನು ಕಿತ್ತೆಸೆಯುತ್ತಿದೆ.

ಕಂಪನಿ ಬಳಕೆದಾರರಿಗೆ ತಮ್ಮ ವೈಯ್ಯಕ್ತಿಕ ವಿವರವನ್ನು ಸರಿಯಾಗಿ ನಮೂದಿಸಲು ಸವಾಲು ಹಾಕಿದೆ. ಸ್ಪಂದಿಸದ ಖಾತೆಗಳಿನ್ನು ಲಾಕ್​ ಮಾಡುತ್ತದೆ. ಈ ಸಮಯದಲ್ಲಿ ಪ್ರಪಫೈಲ್​ ಒಳಗೊಂಡ ಫಾಲೋವರ್ಸ್​ಗ ಳ ಬಗ್ಗೆ ಟ್ವಿಟ್ಟರ್​ ಚಿಂತಿಸುವುದಿಲ್ಲ.
Published by: Harshith AS
First published: June 16, 2021, 10:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories