HOME » NEWS » Tech » TWITTER DOWN FOR MANY USERS THOUSANDS OF NETIZENS REPORT USAGE ISSUES HG

Twitter down: ಹ್ಯಾಶ್​​ಟ್ಯಾಗ್​ ಬಳಸಿ ದೂರು ಹೇಳಿದ ಬಳಕೆದಾರರು!

ಅಮೆರಿಕ ಮಾತ್ರವಲ್ಲದೆ ಚೀನಾ ಮತ್ತು ಇತರೆ ದೇಶಗಳ ಜನರಿಗೆ ಟ್ವಿಟ್ಟರ್​ ಸರ್ವರ್​ ಡೌನ್​ ಆಗಿದೆ ಎಂಬುದು ಗೊತ್ತಾಗಿದೆ.

news18-kannada
Updated:March 30, 2021, 8:32 AM IST
Twitter down: ಹ್ಯಾಶ್​​ಟ್ಯಾಗ್​ ಬಳಸಿ ದೂರು ಹೇಳಿದ ಬಳಕೆದಾರರು!
ಟ್ವಿಟರ್​
  • Share this:
ಜನಪ್ರಿಯ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್​ ​ಮಾರ್ಚ್​ 29ರಂದು ವಿಶ್ವದ ಹಲವು ದೇಶಗಳಲ್ಲಿ ಡೌನ್​ ಆಗಿತ್ತು. ಅಮೆರಿಕದಲ್ಲಿ ಹೆಚ್ಚಿನ ಜನರಿಗೆ ಟ್ವಿಟ್ಟರ್​ ಸರ್ವರ್ ಡೌನ್​ ಆಗಿರುವ​ ಸಮಸ್ಯೆಯ ಬಗ್ಗೆ ಗೊತ್ತಾಗಿದ್ದು, ಹೀಗಾಗಿ ಈ ವಿಚಾರವನ್ನು ಅವರು ಹ್ಯಾಶ್​ಟ್ಯಾಗ್​ ಬಳಸುವ ಮೂಲಕ ಸಮಸ್ಯೆಯ ಬಗ್ಗೆ ಬರೆದುಹಾಕಿದ್ದಾರೆ.

ಅಮೆರಿಕ ಮಾತ್ರವಲ್ಲದೆ ಚೀನಾ ಮತ್ತು ಇತರೆ ದೇಶಗಳ ಜನರಿಗೆ ಟ್ವಿಟ್ಟರ್​ ಸರ್ವರ್​ ಡೌನ್​ ಆಗಿದೆ ಎಂಬುದು ಗೊತ್ತಾಗಿದೆ. ಇತ್ತೀಚೆಗೆ ಜನಪ್ರಿಯ ಫೇಸ್​ಬುಕ್​, ಇನ್​​ಸ್ಟಾಗ್ರಾಂ ಮತ್ತು ವಾಟ್ಸ್​​​ಆ್ಯಪ್​ ಡೌನ್​ ಆಗಿತ್ತು. ಇದರಿಂದ ಬಳಕೆದಾರರು ಸಮಸ್ಯೆ ಎದುರಿಸಿದ್ದರು.  ಈ ಸಮಸ್ಯೆಯನ್ನು ಬಹಿರಂಗವಾಗಿ ಹೇಳಿಕೊಂಡರು. ಅದರಂತೆ  ಟ್ಬಿಟ್ಟರ್​ನಲ್ಲೂ ಕೂಡ ಅದೇ ಸಮಸ್ಯೆ ಕಾಣಿಸಿಕೊಂಡಿದ್ದು, ಬಳಕೆದಾರರು ಸಮಸ್ಯೆ ಎದುರಿಸಿದ್ದರು.

ವಾಷಿಂಗ್ಟನ್​, ಅಮೆರಿಕ ಬೋಸ್ಟನ್​, ನ್ಯೂಯಾರ್ಕ್​, ಅಟ್ಲಾಂಟಾ ಕಡೆಗಳಲ್ಲಿನ ಟ್ವಿಟ್ಟರ್​ ಬಳಕೆದಾರರು ಸಮಸ್ಯೆಯನ್ನು ಎದುರಿಸಿದ್ದರು.  #twitterdown​ ಹ್ಯಾಶ್​ಟ್ಯಾಗ್​ ಬಳಸಿ ಸಮಸ್ಯೆಯನ್ನು ಹೇಳಿದ್ದಾರೆ. ಸುಮಾರು 18 ಸಾವಿರ ಜನರು ಈ ಸಮಸ್ಯೆ ಬಗ್ಗೆ ಜಗತ್ತಿಗೆ ಗೊತ್ತಾಗಲಿ ಎಂದು ಹ್ಯಾಶ್​ಟ್ಯಾಗ್​ ಬಳಸಿ ಅದರ ಮೂಲಕ ತಿಳಿಸಿದ್ದಾರೆ.  ಇದೀಗ ಬಳಕೆದಾರರು ಈ ಸಮಸ್ಯೆಯಿಂದ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ.
Published by: Harshith AS
First published: March 30, 2021, 8:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories