ಹಬ್ಬದ ಪ್ರಯುಕ್ತ ಫೈನಾನ್ಸ್​ ಸ್ಕೀಮ್​ ಪರಿಚಯಿಸಿದ ಸ್ಯಾಮ್​ಸಂಗ್​; 20 ಸಾವಿರ ಕ್ಯಾಶ್​ಬ್ಯಾಕ್​ ಪಡೆಯುವ ಅವಕಾಶ

Samsung: ಸ್ಯಾಮ್​ಸಂಗ್ ತನ್ನ ಗ್ರಾಹಕರಿಗಾಗಿ​ ಫೈನಾನ್ಸ್​ ​ ಸ್ಕೀಮ್​ ಪರಿಚಯಿಸಿದೆ.  ಬಹು ಉತ್ಪನ್ನಗಳನ್ನು ಖರೀದಿಸುವ ಬಳಕೆದಾರರಿಗೆ ಒಂದೇ ಇಎಂಐ ಆಯ್ಕೆಯನ್ನು ನೀಡುತ್ತಿದೆ.

news18-kannada
Updated:October 23, 2020, 8:21 PM IST
ಹಬ್ಬದ ಪ್ರಯುಕ್ತ ಫೈನಾನ್ಸ್​ ಸ್ಕೀಮ್​ ಪರಿಚಯಿಸಿದ ಸ್ಯಾಮ್​ಸಂಗ್​; 20 ಸಾವಿರ ಕ್ಯಾಶ್​ಬ್ಯಾಕ್​ ಪಡೆಯುವ ಅವಕಾಶ
ಸ್ಯಾಮ್​ಸಂಗ್​ ‘ಹೋಮ್​ ಫೆಸ್ಟೀವ್​ ಹೋಮ್​’ ಸೇಲ್
  • Share this:
ಹಬ್ಬದ ಪ್ರಯುಕ್ತ ಸ್ಯಾಮ್​ಸಂಗ್ ಕಂಪನಿ ‘ಹೋಮ್​ ಫೆಸ್ಟೀವ್​ ಹೋಮ್​ ಸೇಲ್​ನಡೆಸುತ್ತಿದೆ. ಅಕ್ಟೋಬರ್​ 5 ರಿಂದ ಪ್ರಾರಂಭವಾಗಿ ನ. 20 ರವರೆಗೆ ಈ ಸೇಲ್​ ನಡೆಸುತ್ತಿದೆ. ಕೆಲವು ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಆಕರ್ಷಕ ಮತ್ತು ಡಿಸ್ಕೌಂಟ್​ ಬೆಲೆಗೆ ಉತ್ಪನ್ನಗಳು ಖರೀದಿಗೆ ಸಿಗಲಿದೆ.

ಸ್ಯಾಮ್​ಸಂಗ್ ತನ್ನ ಗ್ರಾಹಕರಿಗಾಗಿ​ ಫೈನಾನ್ಸ್​ ​ ಸ್ಕೀಮ್​ ಪರಿಚಯಿಸಿದೆ.  ಬಹು ಉತ್ಪನ್ನಗಳನ್ನು ಖರೀದಿಸುವ ಬಳಕೆದಾರರಿಗೆ ಒಂದೇ ಇಎಂಐ ಆಯ್ಕೆಯನ್ನು ನೀಡುತ್ತಿದೆ. ಅಂದರೆ ಎರಡು ಉತ್ಪನ್ನಗಳನ್ನು ಖರೀದಿಸಿದ ಬಳಕೆದಾರರಿಗೆ 1790 ರೂ ಇಎಮ್​ಐ ಆಯ್ಕೆ ನೀಡುತ್ತಿದೆ. ಮೂರು ಉತ್ಪನ್ನಗಳಾದರೆ 2490 ರೂ ಮತ್ತು ಮೂರು ಉತ್ಪನ್ನಗಳಾದರೆ 3390 ರೂ ಆಯ್ಕೆಯನ್ನು ನೀಡುತ್ತಿದೆ.

ಸ್ಯಾಮ್​ಸಂಗ್​ ಇಂಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜು ಪುಲ್ಲನ್ ಈ ಬಗ್ಗೆ​ ಮಾತನಾಡಿ, ಗ್ರಾಹಕರಿಗೆ ಹೆಚ್ಚಿನ ಅನುಕೂಲತೆ ಒದಗಿಸಲು ಮತ್ತು ಅವರ ಅಗತ್ಯಗಳಿಗೆ ಅನುಗುಣವಗಿ ಇಎಮ್​ಐ ಆಯ್ಕೆಯಲ್ಲಿ ಬದಲಾವಣೆ ಮಾಡಲಾಗಿದೆ. ಇದರಿಂದ ಉತ್ಪನ್ನಗಳನ್ನು ಖರೀದಿಸಲು ನೆರವಾಗುತ್ತದೆ ಎಂದರು.

ಸ್ಯಾಮ್​ಸಂಗ್​ ತಿಂಗಳ ಆರಂಭದಲ್ಲಿ ಟೆಲಿವಿಷನ್ ಮತ್ತು ಡಿಜಿಟಲ್​ ಉತ್ಪನ್ನಗಳ ಪ್ರಚಾರ ಮತ್ತು ಕೊಡುಗೆ ಬಗ್ಗೆ ತಿಳಿಸಿದೆ. ಹೋಮ್​ ಫೆಸ್ಟೀವ್​ ಸೇಲ್​​ ಮೂಲಕ ಸ್ಯಾಮ್​ಸಂಗ್​ ಕ್ಯೂಎಲ್​ಇಡಿ 8ಕೆ ಮತ್ತು ಕ್ಯೂಎಲ್​ಇಡಿ ಟಿವಿ ಖರೀದಿಸಿದರೆ ಉಡುಗೊರೆಯಾಗಿ ಗ್ಯಾಲಕ್ಸಿ ಫೋಲ್ಡ್​ ಮತ್ತು ಗ್ಯಾಲಕ್ಸಿ ಎಸ್​20 ಸ್ಮಾರ್ಟ್​ಫೋನ್ ಸಿಗಲಿದೆ. ಗ್ರಾಹಕರು 20 ಸಾವಿರ ರೂವರೆಗೆ ಕ್ಯಾಶ್​ಬ್ಯಾಕ್​ ಆಫರ್​ ಪಡೆಯಬಹುದಾಗಿದೆ ಎಂದು ತಿಳಿಸಿದೆ.

ಕಡಿಮೆ ಬೆಲೆಗೆ ಸಿಗುತ್ತೆ ಎಂದು ಆನ್​ಲೈನ್​ನಲ್ಲಿ ಐಫೋನ್ ಖರೀದಿಸಿದ; ಬಂದಿದ್ದು ಕೇಳಿದ್ರೆ ಶಾಕ್ ಆಗ್ತೀರಾ!
Published by: Harshith AS
First published: October 23, 2020, 8:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading