PUBG Mobile: ಇಂದಿನಿಂದ ಭಾರತದಲ್ಲಿ ವರ್ಕ್​ ಆಗಲ್ಲ ಪಬ್​ಜಿ; ಅಧಿಕೃತಗೊಳಿಸಿದ ಸಂಸ್ಥೆ

ಭಾರತದಲ್ಲಿ ಪಬ್​ಜಿ ಮೇಲಿನ ಸಂಪೂರ್ಣ ಹಿಡಿತವನ್ನು ಪಬ್​ಜಿ ಕಾರ್ಪೋರೇಷನ್​ ತೆಗೆದುಕೊಳ್ಳಲಿದೆ. ಈ ಮೂಲಕ ಭಾರತದಲ್ಲಿ Tencent ಅನ್ನು ಕೈ ಬಿಡುವ ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿ, ಶೀಘ್ರವೇ ಪಬ್​ಜಿ ಬ್ಯಾನ್​ ಅನ್ನು ಸರ್ಕಾರ ಹಿಂಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.

news18-kannada
Updated:October 30, 2020, 11:23 AM IST
PUBG Mobile: ಇಂದಿನಿಂದ ಭಾರತದಲ್ಲಿ ವರ್ಕ್​ ಆಗಲ್ಲ ಪಬ್​ಜಿ; ಅಧಿಕೃತಗೊಳಿಸಿದ ಸಂಸ್ಥೆ
ಪಬ್​ಜಿ
  • Share this:
ಗಡಿ ಭಾಗದಲ್ಲಿ ಭಾರತದ ಜೊತೆಗೆ ಚೀನಾ ತಕರಾರು ತೆಗೆದ ಬೆನ್ನಲ್ಲೇ ಚೀನಾ ಬೆಂಬಲ ಇರುವ 118 ಆ್ಯಪ್​ಗಳನ್ನು ಕೇಂದ್ರ ಸರ್ಕಾರ ಬ್ಯಾನ್​ ಮಾಡಿದೆ. ದೇಶದ ಭದ್ರತೆಗೆ ದಕ್ಕೆ ತರುತ್ತಿರುವ ಆರೋಪದ ಮೇಲೆ 118 ಆ್ಯಪ್​ಗಳನ್ನು ಬ್ಯಾನ್​ ಮಾಡಲಾಗಿದೆ. ಪಬ್​ಜಿ ಸೇರಿ 118 ಆ್ಯಪ್​ಗಳನ್ನು ಪ್ಲೇಸ್ಟೋರ್​ನಿಂದ ತೆಗೆಯಲಾಗಿದೆ. ಆದರೆ ಈ ಆ್ಯಪ್ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಲೇ ಇತ್ತು. ಆದರೆ, ಇಂದಿನಿಂದ ಆ್ಯಪ್​ ಕಾರ್ಯ ಸ್ಥಗಿತಗೊಳಿಸಲಿದೆ ಎನ್ನಲಾಗಿದೆ

Players Unknown Battleground ಪಬ್​ಜಿ ವಿಸ್ತ್ರತ ರೂಪ.ಪಬ್​ಜಿ ಉಗಮ ಅಗಿದ್ದು ದಕ್ಷಿಣ ಕೊರಿಯಾದಲ್ಲಿ. ಈ ಆಟ ಮೊದಲು ಪರಿಚಯಗೊಂಡಿದ್ದು 2017ರ ಡಿಸೆಂಬರ್​ 20ರಂದು. ಪಬ್​ಜಿ ಕಾರ್ಪೋರೇಷನ್​ ಈ ಆಟದ ಸೃಷ್ಟಿಕರ್ತ. ಆದರೆ, ಪಬ್​ ಜಿ ಈ ಮೊದಲು ಕೇವಲ ವಿಡಿಯೋ ಗೇಮ್​ ಆಗಿತ್ತು. ನಂತರ ಇದನ್ನು ಪಬ್​ಜಿ ಮೊಬೈಲ್​ ಆಗಿ ಬದಲಾಯಿಸಿದ್ದು ಚೀನಾ ಮೂಲದ Tencent Games ಕಂಪನಿ. ಪಬ್​ಜಿಗೆ ಚೀನಾ ಕಂಪೆನಿಯ ಸಹಭಾಗಿತ್ವ ಇರುವ ಕಾರಣ ಭಾರತದಲ್ಲಿ ಈ ಗೇಮ್​ ಬ್ಯಾನ್​ ಮಾಡಲಾಗಿತ್ತು. ಆದರೆ, ಈ ಆ್ಯಪ್​ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಲೇ ಇತ್ತು.

ಭಾರತದಲ್ಲಿ ಪಬ್​ಜಿ ಮೇಲಿನ ಸಂಪೂರ್ಣ ಹಿಡಿತವನ್ನು ಪಬ್​ಜಿ ಕಾರ್ಪೋರೇಷನ್​ ತೆಗೆದುಕೊಳ್ಳಲಿದೆ. ಈ ಮೂಲಕ ಭಾರತದಲ್ಲಿ Tencent ಅನ್ನು ಕೈ ಬಿಡುವ ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿ, ಶೀಘ್ರವೇ ಪಬ್​ಜಿ ಬ್ಯಾನ್​ ಅನ್ನು ಸರ್ಕಾರ ಹಿಂಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಈಗ ಪಬ್​ಜಿ ಭಾರತದಲ್ಲಿ ಇನ್ಮುಂದೆ ಕಾರ್ಯ ನಿರ್ವಹಿಸುವುದಿಲ್ಲ ಎಂದು ಸಂಸ್ಥೆಯೇ ಹೇಳಿದೆ.

ಈ ಬಗ್ಗೆ ಫೇಸ್​ಬುಕ್​ನಲ್ಲಿ ಹೇಳಿಕೆ ಬಿಡುಗೆ ಮಾಡಿರುವ ಪಬ್​ಜಿ ಸಂಸ್ಥೆ,  ಈ ರೀತಿಯ ಫಲಿತಾಂಶ ಬಂದಿರುವುದಕ್ಕೆ ನಮಗೆ ತುಂಬಾನೇ ವಿಷಾದ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.
Published by: Rajesh Duggumane
First published: October 30, 2020, 11:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading