25 ಕೋಟಿ ರೂ. ಬೆಲೆಯ ಕಾರಿನ ನಂಬರ್ ಪ್ಲೇಟ್​​ಗೆ ಆತ ಖರ್ಚು ಮಾಡಿದ್ದು ಬರೋಬ್ಬರಿ 52 ಕೋಟಿ ರೂ.!

Bugatti Chiron: ಬುಗಾಟಿ ಚಿರೋನ್​ನ ಮಾಲೀಕ ತನ್ನ ಹೊಸ ಕಾರಿಗೆ 52 ಕೋಟಿ ರೂ. ನೀಡಿ ನಂಬರ್​ ಪ್ಲೇಟ್​ ಹಾಕಿಸಿಕೊಂಡಿದ್ದಾರೆ. ವಿಚಿತ್ರ ಎಂದರೆ ಅದೇ ಹಣಕ್ಕೆ ಮತ್ತೊಂದು ಬುಗಾಟಿ ಚಿರೋನ್​ ಕಾರು ಖರೀದಿಸಬಹುದಾಗಿತ್ತು. ಆದರೂ ಆತ ಅಷ್ಟು ಹಣವನ್ನು ನೀಡಿ ನಂಬರ್​ ಪ್ಲೇಟ್​​ ಖರೀದಿಸಿದ್ಯಾಕೆ? ಅಂಹತದ್ದೇನಿದೆ ಆ ನಂಬರ್​ ಪ್ಲೇಟ್​​ನಲ್ಲಿ?.

news18-kannada
Updated:September 12, 2020, 12:38 PM IST
25 ಕೋಟಿ ರೂ. ಬೆಲೆಯ ಕಾರಿನ ನಂಬರ್ ಪ್ಲೇಟ್​​ಗೆ ಆತ ಖರ್ಚು ಮಾಡಿದ್ದು ಬರೋಬ್ಬರಿ 52 ಕೋಟಿ ರೂ.!
ಬುಗಾಟಿ ಚಿರೋನ್
  • Share this:
ವಿಶ್ವದ ದುಬಾರಿ ಕಾರುಗಳಲ್ಲಿ ಬುಗಾಟಿ ಚಿರೋನ್​ ಕಾರು ಕೂಡ ಒಂದು. ಭಾರತಕ್ಕೆ ಹೋಲಿಸಿದರೆ ವಿದೇಶಿ ರಸ್ತೆಯಲ್ಲಿ ಈ ಕಾರು ಗಂಟೆಗೆ ಒಂದರಂತೆ ಕಾಣಸಿಗುತ್ತದೆ. ಶ್ರಿಮಂತರೇ ಈ ಕಾರುಗಳನ್ನು ಖರೀದಿಸುವ ಶಕ್ತಿಯನ್ನು ಹೊಂದಿದ್ದಾರೆ. ಯಾಕೆಂದರೆ ಇದರ ಬೆಲೆಗೆ ಬೆಂಗಳೂರಿನಂತರ ಪ್ರದೇಶದಲ್ಲಿ ಸೈಟ್​ ಖರೀದಿಸಿಬಹುದಾಗಿದೆ. ಹಾಗಾಗಿ ಬುಗಾಟಿ ಚಿರೋನ್ ಕಾರು ಭಾರತದಲ್ಲಿ ಕೆಲವರಲ್ಲಿ ಮಾತ್ರ ಇದೆ. ಇದರ ಬೆಲೆ 25 ಕೋಟಿ ರೂ ಆಗಿದ್ದು, ದುಬಾರಿ ಕಾರು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಅಂದಹಾಗೆಯೇ ಇಲ್ಲೊಂದು ವಿಚಿತ್ರ ಸುದ್ದಿಯಿದೆ. ಅದೇನೆಂದರೆ ಇಂತಹ ಐಷಾರಾಮಿ ಕಾರು ಖರೀದಿಸುವುದೇ ಕಷ್ಟ. ಅಂತಹದರಲ್ಲಿ ಮಾಲೀಕರೊಬ್ಬರು 25 ಕೋಟಿ ನೀಡಿ ಬುಗಾಟಿ ಚಿರೋನ್​ ಕಾರು ಖರೀದಿಸುವುದಲ್ಲದೆ ಅದಕ್ಕಿಂತ  2ರಷ್ಟು ಪಟ್ಟು ಹೆಚ್ಚು ಹಣ ನೀಡಿ ನಂಬರ್​ ಪ್ಲೇಟ್​​ ಖರೀದಿಸಿದ್ದಾರೆ.

ಬುಗಾಟಿ ಚಿರೋನ್​ನ ಮಾಲೀಕ ತನ್ನ ಹೊಸ ಕಾರಿಗೆ 52 ಕೋಟಿ ರೂ. ನೀಡಿ ನಂಬರ್​ ಪ್ಲೇಟ್​ ಹಾಕಿಸಿಕೊಂಡಿದ್ದಾರೆ. ವಿಚಿತ್ರ ಎಂದರೆ ಅದೇ ಹಣಕ್ಕೆ ಮತ್ತೊಂದು ಬುಗಾಟಿ ಚಿರೋನ್​ ಕಾರು ಖರೀದಿಸಬಹುದಾಗಿತ್ತು. ಆದರೂ ಆತ ಅಷ್ಟು ಹಣವನ್ನು ನೀಡಿ ನಂಬರ್​ ಪ್ಲೇಟ್​​ ಖರೀದಿಸಿದ್ಯಾಕೆ? ಅಂಹತದ್ದೇನಿದೆ ಆ ನಂಬರ್​ ಪ್ಲೇಟ್​​ನಲ್ಲಿ?.

ಮಾಲೀಕ ತನ್ನ ದುಬಾರಿ ಕಾರು ಬುಗಾಟಿ ಚಿರೋನ್​ಗಾಗಿ ಫ್ಯಾನ್ಸಿ ನಂಬರ್​ ಹಾಕಿಸಿಕೊಳ್ಳಬೇಕೆಂಬ ಕಾರಣಕ್ಕೆ ಅಷ್ಟೊಂದು ಖರ್ಚು ಮಾಡಿದ್ದಾನೆ. 52 ಕೋಟಿ ರೂ. ವ್ಯವಮಾಡುವ ಮೂಲಕ ಕೊನೆಗೂ ಒಂದೇ ಅಂಕೆಯ ನಂಬರ್​ ಪ್ಲೇಟ್​​ ಹಾಕಿಸಿಕೊಂಡಿದ್ದಾನೆ. ಒಟ್ಟಾರೆಯಾಗಿ ಆತ 77 ಕೋಟಿ ರೂವನ್ನು ಕಾರು ಮತ್ತು ನಂಬರ್​ ಪ್ಲೇಟ್​ಗೆ ಖರ್ಚು ಮಾಡಿದ್ದಾನೆ.ಈ ಘಟನೆ ದುಬೈನಲ್ಲಿ ನಡೆದಿದೆ. ಭಾರತಕ್ಕೆ ಹೋಲಿಸಿದರೆ ದುಬೈನಲ್ಲಿ ಐಷಾರಾಮಿ ಕಾರುಗಳನ್ನು ಬಳಸುತ್ತಿರುವವರ ಸಂಖ್ಯೆ ಹೆಚ್ಚು. ಮಾತ್ರವಲ್ಲದೆ, ಅಲ್ಲಿನ ನಂಬರ್​ ಪ್ಲೇ ಕೂಡ ಭಿನ್ನವಾಗಿದೆ. ಹಾಗಾಗಿ ಬುಗಾಟಿ ಚಿರೋನ್​ ಮಾಲೀಕ ತನ್ನ ನೂತನ ಕಾರಿಗೆ 9 ಅಂಕೆಯ ಫ್ಯಾನ್ಸಿ ನಂಬರ್​ ಪ್ಲೇಟ್​ ಹಾಕಿಕೊಂಡಿದ್ದಾನೆ. ಒಟ್ಟಾರಿ ದುಬಾರಿ ಕಾರಿಗೆ ದುಬಾರಿ ನಂಬರ್​ ಪ್ಲೇಟ್​ ಹಾಕಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾನೆ.
Published by: Harshith AS
First published: September 12, 2020, 12:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading