ಡ್ಯುಯೆಲ್​​ ಸ್ಕ್ರೀನ್​ ಸ್ಮಾರ್ಟ್​ಫೋನ್​ ಪರಿಚಯಿಸಲು ಮುಂದಾದ LG ಸಂಸ್ಥೆ; ಅ.28ರಂದು ಬಿಡುಗಡೆ

LG Wing smartphone: ನೂತನ ಸ್ಮಾರ್ಟ್​ಫೋನಿನ ಮೈನ್​ ಸ್ಕ್ರೀನ್​​ 6.8 ಇಂಚಿನ ಫುಲ್​ HD+P-OLED ಡಿಸ್​ಪ್ಲೇ ಸೆಕೆಂಡರಿ ಸ್ಕ್ರೀನ್​ 3.9 ಇಂಚಿನ G-OLED ಸ್ಕ್ರೀನ್ ​ಹೊಂದಿದೆ.

news18-kannada
Updated:October 24, 2020, 7:20 PM IST
ಡ್ಯುಯೆಲ್​​ ಸ್ಕ್ರೀನ್​ ಸ್ಮಾರ್ಟ್​ಫೋನ್​ ಪರಿಚಯಿಸಲು ಮುಂದಾದ LG ಸಂಸ್ಥೆ; ಅ.28ರಂದು ಬಿಡುಗಡೆ
LG ವಿಂಗ್​
  • Share this:
ಜನಪ್ರಿಯ ಎಲ್​ಜಿ ಸಂಸ್ಥೆ ಡ್ಯುಯೆಲ್​ ಸ್ಕ್ರೀನ್​ ಅಳವಡಿಸಿರುವ LG ವಿಂಗ್​ ಹೆಸರಿನ ಸ್ಮಾರ್ಟ್​ಫೋನ್​ ಉತ್ಪಾದಿಸಿದ್ದು, ಇದೇ ಅ. 28ರಂದು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಬೆಳಗ್ಗೆ 11;30ಕ್ಕೆ ಸರಿಯಾಗಿ ನೂತನ ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

LG ವಿಂಗ್​​ ಸ್ಮಾರ್ಟ್​ಫೋನ್​ನಲ್ಲಿ ಟಾಪ್​-ಎಂಡ್​ ಸ್ಪೇಸ್​ ನೀಡಲಾಗಿದ್ದು, ಮೈನ್​ಸ್ಕ್ರೀನ್ ಮತ್ತು ಸೆಕೆಂಡ್​ ಸ್ಕ್ರೀನ್​ ನೀಡಲಾಗಿದೆ. ಹಾಗಾಗಿ ಇದನ್ನು ಗಡಿಯಾರ ತಿರುಗಿದಂತೆ ತಿರುಗಿಸಬಹುದಾಗಿದೆ. ಅದರ ಜೊತೆಗೆ ಪಾಪ್​ ಅಪ್​ ಸೆಲ್ಫಿ ಮತ್ತು ಗಿಂಬಲ್​ ಮೋಡ್​ ಕ್ಯಾಮೆರಾವನ್ನು ಸ್ಮಾರ್ಟ್​ಫೋನಿನ​ ಹಿಂಭಾಗದಲ್ಲಿ ಜೋಡಿಸಲಾಗಿದೆ.

LG ವಿಂಗ್​ ವಿಶೇಷತೆ;

ನೂತನ ಸ್ಮಾರ್ಟ್​ಫೋನಿನ ಮೈನ್​ ಸ್ಕ್ರೀನ್​​ 6.8 ಇಂಚಿನ ಫುಲ್​ HD+P-OLED ಡಿಸ್​ಪ್ಲೇ ಸೆಕೆಂಡರಿ ಸ್ಕ್ರೀನ್​ 3.9 ಇಂಚಿನ G-OLED ಸ್ಕ್ರೀನ್ ​ಹೊಂದಿದೆ.

ಒಕ್ಟಾಕೋರ್​ ಸ್ನಾಪ್​ಡ್ರಾಗನ್​ 765G ಪ್ರೊಸೆಸರ್​ ಮತ್ತು ಆ್ಯಂಡ್ರೇನೊ 620GPU ನೀಡಲಾಗಿದೆ. 8GB RAM​ ಮತ್ತು 128GB/256GB ಇಂಟರ್​ನಲ್​ ಸ್ಟೊರೇಜ್​ ಆಯ್ಕೆ ಇದರಲ್ಲಿದೆ. ಅಷ್ಟು ಮಾತ್ರವಲ್ಲದೆ, 2TB ತನಕ ಮೈಕ್ರೋಕಾರ್ಡ್​ ವೃದ್ಧಿಸಬಹುದಾಗಿದೆ.

ಆ್ಯಂಡ್ರಾಯ್ಡ್​ 10 ಬೆಂಬಲವನ್ನು ಪಡೆದಿರುವ ಈ ಸ್ಮಾರ್ಟ್​ಫೋನ್​ 4 ಸಾವಿರ mah​ ಬ್ಯಾಟರಿ ಅಳವಡಿಸಲಾಗಿದೆ.  25 ವ್ಯಾಟ್​​ ಫಾಸ್ಟ್​ ಚಾರ್ಜಿಂಗ್​ ಸೌಲಭ್ಯ ಮತ್ತು 10 ವ್ಯಾಟ್​​ ವೈರ್​ಲೆಸ್​​ ಚಾರ್ಜಿಂಗ್​ ಸಪೋರ್ಟ್​ ಹೊಂದಿದೆ.





ಕ್ಯಾಮೆರಾ: 64 ಮೆಗಾಫಿಕ್ಸೆಲ್​​ ರಿಯಲ್​ ಕ್ಯಾಮೆರಾ ಜೊತೆಗೆ ಎಲ್​​ಇಡಿ ಫ್ಲಾಶ್​, 13 ಮೆಗಾಫಿಕ್ಸೆಲ್​ ಅಲ್ಟ್ರಾ-ವೈಡ್​-ಆ್ಯಂಗಲ್​ ಲೆನ್ಸ್​, 12 ಮೆಗಾಫಿಕ್ಸೆಲ್​​ ಅಲ್ಟ್ರಾ ವೈಡ್​​ ಗಿಂಬಲ್​ ಮೋಡ್​ ಮತ್ತು 32 ಮೆಗಾಫಿಕ್ಸೆಲ್​ ಪಾಪ್​ ಅಪ್​ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಇನ್ನು ಸ್ಮಾರ್ಟ್​ಫೋನಿನಲ್ಲಿ ಫಿಂಗರ್​ಪ್ರಿಂಟ್​ ಸೆನ್ಸಾರ್​, ನೀರು ಮತ್ತು ಧೂಳಿನಿಂದ ರಕ್ಷಿಸಬಹುದಾದ ಫೀಚರ್​ ಎಲ್​ಜಿ ವಿಂಗ್​ ಸ್ಮಾರ್ಟ್​ಫೋನ್​ ಹೊಂದಿದೆ.

ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​​ಗಳೇ ಬೆಸ್ಟ್; ಐಫೋನ್ ಪ್ರಿಯರನ್ನು ಬೆರಗುಗೊಳಿಸಿದೆ ಈ ವಿಡಿಯೋ!

ಮತ್ತೊಮ್ಮೆ ಆಫರ್​ಗಳನ್ನು ಹೊತ್ತುತಂದ ಫ್ಲಿಪ್​ಕಾರ್ಟ್​; ಅ.29ರಿಂದ Big Diwali Sale ಆರಂಭ!
Published by: Harshith AS
First published: October 24, 2020, 7:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading