LG K92: ನಾಲ್ಕು ಕ್ಯಾಮೆರಾವಿರುವ ಸ್ಮಾರ್ಟ್​ಫೋನ್​ ಪರಿಚಯಿಸಿದ ಎಲ್​ಜಿ

ಎಲ್​ಜಿ K92 ಸ್ಮಾರ್ಟ್​ಫೋನ್​ 6.7 ಇಂಜಿನ ಫುಲ್​ಹೆಚ್​ಡಿ +ಎಲ್​ಸಿಡಿ ಪಂಚ್​ ಹೋಲ್​ ಡಿಸ್​ಪ್ಲೇ, ಒಕ್ಟಾ ಕೋರ್​ ಸ್ನಾಪ್​​ಡ್ರಾಗನ್​ 690 ಪ್ರೊಸೆಸರ್​ ಹೊಂದಿದೆ.

news18-kannada
Updated:October 31, 2020, 12:44 PM IST
LG K92: ನಾಲ್ಕು ಕ್ಯಾಮೆರಾವಿರುವ ಸ್ಮಾರ್ಟ್​ಫೋನ್​ ಪರಿಚಯಿಸಿದ ಎಲ್​ಜಿ
LG K92
  • Share this:
ದಕ್ಷಿಣ ಕೊರಿಯಾ ಮೂಲದ ಎಲ್​ಜಿ ಸ್ಮಾರ್ಟ್​ಫೋನ್​ ಸಂಸ್ಥೆ ಡ್ಯುಯೆಲ್​ಸ್ಕ್ರೀನ್​ ಹೊಂದಿರುವ ಸ್ಮಾಟ್​ಫೋನನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇದೀಗ K92 ಹೆಸರಿನ ಸ್ಮಾಟ್​ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸದ್ಯ  ಫೋನ್​ ಅಮೆರಿಕದಲ್ಲಿ ಬಿಡುಗಡೆಗೊಂಡಿದ್ದು, ಕೆಲವು ದಿನಗಳಲ್ಲಿ ದೇಶಿಯ ಮಾರುಕಟ್ಟೆಗೆ ಬರಲಿದೆ. ನೂತನ ಸ್ಮಾಟ್​ಫೋನ್​ 4 ಕ್ಯಾಮೆರಾವನ್ನು ಹೊಂದಿದ್ದು, 5G ಬೆಂಬಲವನ್ನು ಪಡೆದಿದೆ.

ವಿಶೇಷತೆ:

ಎಲ್​ಜಿ K92 ಸ್ಮಾರ್ಟ್​ಫೋನ್​ 6.7 ಇಂಜಿನ ಫುಲ್​ಹೆಚ್​ಡಿ +ಎಲ್​ಸಿಡಿ ಪಂಚ್​ ಹೋಲ್​ ಡಿಸ್​ಪ್ಲೇ, ಒಕ್ಟಾ ಕೋರ್​ ಸ್ನಾಪ್​​ಡ್ರಾಗನ್​ 690 ಪ್ರೊಸೆಸರ್​ ಹೊಂದಿದೆ. ಆ್ಯಂಡ್ರಾಯ್ಡ್​​ 10 ಬೆಂಬಲವನ್ನು ಪಡೆದಿದೆ. 6GB RAM ಮತ್ತು 128GB ಸ್ಟೊರೇಜ್​ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ.

ಸ್ಮಾರ್ಟ್​ಫೋನ್ ಹಿಂಭಾಗದಲ್ಲಿ 64 ಮೆಗಾಫಿಕ್ಸೆಲ್​, 5 ಮೆಗಾಫಿಕ್ಸೆಲ್​​, 2 ಮೆಗಾಫಿಕ್ಸೆಲ್​, 2 ಮೆಗಾಫಿಕ್ಸೆಲ್​ ನೀಡಲಾಗಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಹೊಂದಿದೆ.

ದೀರ್ಘಕಾಲದ ಬಳಕೆಗಾಗಿ 4 ಸಾವಿರ mAh​​ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇನ್ನು ಎಲ್​ಜಿ ಕೆ92 ಸ್ಮಾರ್ಟ್​ಫೋನ್​ ಅಮೆರಿಕದ ಬೆಲೆಗೆ ಹೋಲಿಸಿದರೆ. ಭಾರತದಲ್ಲಿ 26,780 ರೂ.ಗೆ ಸಿಗಲಿದೆ.
First published: October 31, 2020, 12:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading