ಮತ್ತೊಮ್ಮೆ ಆಫರ್​ಗಳನ್ನು ಹೊತ್ತುತಂದ ಫ್ಲಿಪ್​ಕಾರ್ಟ್​; ಅ.29ರಿಂದ Big Diwali Sale ಆರಂಭ!

ಫ್ಲಿಪ್​ಕಾರ್ಟ್​ ಪ್ಲಸ್ ಬಳಕೆದಾರರಿಗಾಗಿ ಅ.29ರ ಮಧ್ಯರಾತ್ರಿಯಿಂದ ಫ್ಲಿಪ್​ಕಾರ್ಟ್​ ‘ಬಿಗ್​ ದಿವಾಳಿ ಸೇಲ್​​’ ತೆರೆಯಲಿದೆ. 7 ದಿನಗಳ ಕಾಲ ಈ ಸೇಲ್​ ನಡೆಯಲಿದ್ದು, ಆಕರ್ಷಕ ಆಫರ್​ ನೀಡುವುದಾಗಿ ತಿಳಿಸಿದೆ.

news18-kannada
Updated:October 24, 2020, 6:28 PM IST
ಮತ್ತೊಮ್ಮೆ ಆಫರ್​ಗಳನ್ನು ಹೊತ್ತುತಂದ ಫ್ಲಿಪ್​ಕಾರ್ಟ್​; ಅ.29ರಿಂದ Big Diwali Sale ಆರಂಭ!
ಬಿಗ್​ ದಿವಾಳಿ ಸೇಲ್
  • Share this:
ಇತ್ತೀಚೆಗೆ ಆನ್​ಲೈನ್ ಇ-ಕಾಮರ್ಸ್ ಮಳಿಗೆಯಾದ ಫ್ಲಿಪ್​ಕಾರ್ಟ್​ ‘ಬಿಗ್​ ಬಿಲಿಯನ್​ ಡೇಸ್​’ ಹಮ್ಮಿಕೊಂಡಿತ್ತು. ಅಕ್ಟೋಬರ್​ 17ರಿಂದ ಪ್ರಾರಂಭವಾಗಿ 21ರವರೆಗೆ ಸೇಲ್​ ನಡೆಸಿತ್ತು. ಗ್ರಾಹಕರಿಗಾಗಿ ಭರ್ಜರಿ ಆಫರ್​ ನೀಡಿತ್ತು. ಇದೀಗ ದೀಪಾವಳಿ ಹಬ್ಬದ ಸಲುವಾಗಿ ‘ಬಿಗ್​ ದಿವಾಳಿ ಸೇಲ್​​‘ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಅ.29ರಿಂದ ಪ್ರಾರಂಭವಾಗಿ ನವೆಂಬರ್​ 4ರವರೆಗೆ ಈ ಸೇಲ್​ ನಡೆಯಲಿದೆ. ದೀಪಾವಳಿ ಹಬ್ಬದ ಪ್ರಯಕ್ತ ಮತ್ತೊಮ್ಮೆ ಗ್ರಾಹಕರಿಗೆ ಆಫರ್ ​ಮತ್ತು ಡಿಸ್ಕೌಂಟ್​ ನೀಡಲು ಮುಂದಾಗಿದೆ.

ಫ್ಲಿಪ್​ಕಾರ್ಟ್​ ಪ್ಲಸ್ ಬಳಕೆದಾರರಿಗಾಗಿ ಅ.29ರ ಮಧ್ಯರಾತ್ರಿಯಿಂದ ಫ್ಲಿಪ್​ಕಾರ್ಟ್​ ‘ಬಿಗ್​ ದಿವಾಳಿ ಸೇಲ್​​’ ತೆರೆಯಲಿದೆ. 7 ದಿನಗಳ ಕಾಲ ಈ ಸೇಲ್​ ನಡೆಯಲಿದ್ದು, ಆಕರ್ಷಕ ಆಫರ್​ ನೀಡುವುದಾಗಿ ತಿಳಿಸಿದೆ. ಇನ್ನು ಆ್ಯಕ್ಸಿಸ್​ ಬ್ಯಾಂಕ್​ ಕ್ರೆಡಿಟ್​ ಮತ್ತು ಡೆಬಿಟ್​ ಕಾರ್ಡ್​ ಬಳಸಿ ವಸ್ತುಗಳನ್ನು ಖರೀದಿಸುವ ಗ್ರಾಹಕರಿಗಾಗಿ ಶೇ.10 ರಷ್ಟು ಡಿಸ್ಕೌಂಟ್​ ನೀಡಲಿದೆ. ಜೊತೆಗೆ ನೋ-ಕಾಸ್ಟ್ ಇಎಮ್​ಐ ಆಯ್ಕೆಯನ್ನು ನೀಡುವುದಾಗಿ ತಿಳಿಸಿದೆ.

ಹಬ್ಬದ ಸಲುವಾಗಿ ಫ್ಲಿಪ್​​ಕಾರ್ಟ್​ವಿವಿಧ ಕಂಪನಿಗಳ ಸ್ಮಾರ್ಟ್​ಫೋನ್​ಗಳ ಮೇಲೆ ಆಫರ್​ ಡಿಸ್ಕೌಂಟ್​ ನೀಡುತ್ತಿದೆ. ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​41, ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​20+, ಗ್ಯಾಲಕ್ಸಿ ಎ50ಎಸ್​, ಪೊಕೊ ಎಮ್​2, ಪೊಕೊ ಎಮ್​2 ಪ್ರೊ, ಪೊಕೊ ಸಿ3 ಡಿಸ್ಕೌಂಟ್​ ಬೆಲೆಗೆ ನೀಡಲಿದೆ.

ಇನ್ನು ಒಪ್ಪೊ ಕಂಪನಿಗಳ ಸ್ಮಾರ್ಟ್​ಫೋನ್​ಗಳಾದ ಒಪ್ಪೊ ರೆನೊ 2ಎಫ್​, ಎ52, ಎಫ್​15 ಹಾಗೂ ರಿಯಲ್​​ಮಿ ನಾರ್ಜೊ 20 ಸಿರೀಸ್​ಗಳು ಆಫರ್​ ಬೆಲೆಗೆ ಸಿಗಲಿದೆ.

ಅಷ್ಟು ಮಾತ್ರವಲ್ಲದೆ, ಇಲೆಕ್ಟ್ರಾನಿಕ್ಸ್​​ ಮತ್ತು ಅಸೆಸ್ಸರೀಸ್​​, ಕ್ಯಾಮೆರಾ, ಲ್ಯಾಪ್​ಟಾಪ್​, ಸ್ಮಾರ್ಟ್​ವಾಚ್​, ಹೆಡ್​ಫೋನ್​ಗಳನ್ನು ಸೇಲ್​​ ಮಾಡುತ್ತಿದೆ. ಲ್ಯಾಪ್​ಟಾಪ್​ಗಳ ಮೇಲೆ ಶೇ 50ಷ್ಟು ಡಿಸ್ಕೌಂಟ್ ನೀಡಿ​ ಮಾರಾಟ ಮಾಡಲಿದೆ. ಇನ್ನು ಟ್ಯಾಬ್​ಲೆಟ್​​ ಮೇಲೆ ಶೇ.40ರಷ್ಟು ಡಿಸ್ಕೌಂಟ್​ ಮತ್ತು ಸ್ಪೀಕರ್​ ಮೇಲೆ 80ರಷ್ಟು ಡಿಸ್ಕೌಂಟ್​ ನೀಡುವುದಾಗಿ ತಿಳಿಸಿದೆ.

Malware App: ಈ ಆ್ಯಪ್​ಗಳು ಸ್ಮಾರ್ಟ್​ಫೋನ್​​ನಲ್ಲಿದ್ದರೆ ಕೂಡಲೇ ಡಿಲೀಟ್ ಮಾಡಿ!
Published by: Harshith AS
First published: October 24, 2020, 6:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading