HOME » NEWS » Tech » FACEBOOK MESSENGER INSTAGRAM DOWN USERS COMPLAIN ZP

ಜಗತ್ತಿನಾದ್ಯಂತ ಫೇಸ್‌ಬುಕ್‌, ಇನ್​ಸ್ಟಾಗ್ರಾಮ್​ನಲ್ಲಿ ತಾಂತ್ರಿಕ ದೋಷ: ಆತಂಕದಲ್ಲಿ ಬಳಕೆದಾರರು

ಫೇಸ್​ಬುಕ್, ಇನ್​ಸ್ಟಾಗ್ರಾಂ ಸರ್ವರ್ ಡೌನ್ ಆಗಿರುವುದು ಸೋಷಿಯಲ್ ಮೀಡಿಯಾ ಬಳಕೆದಾರರ ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ ದಿನಗಳ ಹಿಂದೆಯಷ್ಟೇ ಫೇಸ್​ಬುಕ್ ಇಂಕ್ ಸಂಸ್ಥೆ ವಾಟ್ಸ್​ಆ್ಯಪ್​ ಖಾತೆದಾರರ ಮಾಹಿತಿಗಳನ್ನು ಹ್ಯಾಕರುಗಳು ಕಲೆ ಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದು ತಿಳಿಸಿತ್ತು.

news18-kannada
Updated:December 10, 2020, 7:59 PM IST
ಜಗತ್ತಿನಾದ್ಯಂತ ಫೇಸ್‌ಬುಕ್‌, ಇನ್​ಸ್ಟಾಗ್ರಾಮ್​ನಲ್ಲಿ ತಾಂತ್ರಿಕ ದೋಷ: ಆತಂಕದಲ್ಲಿ ಬಳಕೆದಾರರು
ಫೇಸ್​ಬುಕ್-ಇನ್​ಸ್ಟಾಗ್ರಾಮ್
  • Share this:
ಗುರುವಾರ ಬೆಳಗ್ಗೆ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಮ್​ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪರಿಣಾಮ ಈ ಎರಡು ಮೆಸೆಂಜರ್ ಆ್ಯಪ್​ಗಳಲ್ಲಿ ಸಂದೇಶ ಕಳುಹಿಸಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಟ್ರ್ಯಾಕಿಂಗ್ ವೆಬ್​ಸೈಟ್ ಮಾಹಿತಿ ನೀಡಿದ್ದಾರೆ.

ಫೇಸ್‌ಬುಕ್ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರ ಪ್ರಕಾರ, ಈ ಸಮಸ್ಯೆಯು ಆರಂಭದಲ್ಲಿ ಯುರೋಪ್ ಬಳಕೆದಾರರಲ್ಲಿ ಕಾಣಿಸಿಕೊಂಡಿತ್ತು. ಇದರ ನಂತರ, ಜಪಾನ್‌ನಲ್ಲೂ ಈ ಎರಡೂ ಸೋಷಿಯಲ್ ಮೀಡಿಯಾ ಸೇವೆಯು ಕಡಿತಗೊಂಡಿದೆ ಎಂಬ ದೂರು ಕೇಳಿ ಬಂದಿತ್ತು. ಇದಾದ ಬಳಿಕ ಭಾರತದಲ್ಲಿನ ಕೆಲ ಫೇಸ್‌ಬುಕ್ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರು ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಇನ್ನು ಹಲವು ದೇಶದ ಬಳಕೆದಾರರು ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿವುದಾಗಿ ತಿಳಿಸಿದ್ದು, ಇದರಿಂದ ಫೇಸ್‌ಬುಕ್ ಮೆಸೆಂಜರ್‌ನ ಬಳಕೆದಾರರು ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ. ಹಾಗೆಯೇ ಕೆಲ ಬಳಕೆದಾರರಿಗೆ ಲಾಗಿನ್ ಆಗಲು ಆಗುತ್ತಿಲ್ಲ ಎಂದು ದೂರಿದ್ದಾರೆ. ಆದರೆ ಈ ಬಗ್ಗೆ ಫೇಸ್​ಬುಕ್ ಕಂಪೆನಿಯು ಇನ್ನೂ ಕೂಡ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಇತರೆ ಸೋಷಿಯಲ್ ಮೀಡಿಯಾ ಮೂಲಕ ಬಳಕೆದಾರರು ಕಂಪೆನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಜುಲೈ ತಿಂಗಳಲ್ಲೂ ಕೂಡ ಫೇಸ್​ಬುಕ್, ಟ್ವಿಟರ್ ಸೇರಿದಂತೆ ವಿಶ್ವದಾದ್ಯಂತ ಸೋಷಿಯಲ್ ನೆಟ್​ವರ್ಕ್ ಸರ್ವರ್ ಡೌನ್ ಆಗಿತ್ತು. ಇದರಿಂದ ಫೋಟೊ ಅಪ್‌ಲೋಡ್‌, ಡೌನ್ ಲೋಡ್‌ನಂತಹ ಸೇವೆ ನಿಧಾನಗೊಂಡಿತ್ತು. ಈ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.


ಇದೀಗ ಮತ್ತೊಮ್ಮೆ ಫೇಸ್​ಬುಕ್, ಇನ್​ಸ್ಟಾಗ್ರಾಂ ಸರ್ವರ್ ಡೌನ್ ಆಗಿರುವುದು ಸೋಷಿಯಲ್ ಮೀಡಿಯಾ ಬಳಕೆದಾರರ ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ ದಿನಗಳ ಹಿಂದೆಯಷ್ಟೇ ಫೇಸ್​ಬುಕ್ ಇಂಕ್ ಸಂಸ್ಥೆ ವಾಟ್ಸ್​ಆ್ಯಪ್​ ಖಾತೆದಾರರ ಮಾಹಿತಿಗಳನ್ನು ಹ್ಯಾಕರುಗಳು ಕಲೆ ಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದು ತಿಳಿಸಿತ್ತು. ಹೀಗಾಗಿ ಸರ್ವರ್​ ಡೌನ್​ಗೆ ಏನು ಕಾರಣ ಎಂಬ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿದೆ.
Youtube Video

ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಕಿಂಗ್ ಪ್ರಕಟ: ಟಾಪ್ 10 ಪಟ್ಟಿಯಲ್ಲಿ ಇಬ್ಬರು ಭಾರತೀಯರು
Published by: zahir
First published: December 10, 2020, 7:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories