news18-kannada Updated:April 20, 2021, 2:41 PM IST
ಪಿಜ್ಜಾ
ಜನಪ್ರಿಯ ಪಿಜ್ಜಾ ವಿತರಣಾ ಕಂಪನಿಯಾದ ಡೊಮಿನೊಸ್ ಗ್ರಾಹಕರ ಡೇಟಾ ಲೀಕ್ ಆಗಿದೆ ಎಂಬ ಮಾಹಿತಿ ವರದಿಯಾಗಿದೆ. ಕಳೆದ ಏಳು ವರ್ಷಗಳಿಂದ ಕಂಪನಿಯು ಒಳಗೊಂಡ ದಾಖಲೆ, 250ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸೇರಿದ ಡೇಟಾ ಮಾತ್ರವಲ್ಲದೆ, 18 ಕೋಟಿಗೂ ಹೆಚ್ಚಾ ಆಹಾರ ಆರ್ಡರ್ ಮಾಡಿದ ಗ್ರಾಹಕ ವಿವರ ಮತ್ತು 10 ಲಕ್ಷಕ್ಕೂ ಹೆಚ್ಚು ಕ್ರೆಡಿಟ್ ಕಾರ್ಡ್ಗಳ ಮಾಹಿತಿ ಒಳಗೊಂಡ ಡೇಟಾ ಲೀಕ್ ಆಗಿದೆ ಎಂದು ತಿಳಿದುಬಂದಿದೆ.
ಸೌರಜೀತ್ ಮಜುಂದರ್ ಎಂಬವರು ಈ ಡೇಟಾ ಲೀಕ್ ಆಗಿರುವ ಬಗ್ಗೆ ವರದಿ ಮಾಡಿದ್ದಾರೆ. ಡೊಮಿನೊಸ್ ಪಿಜ್ಜಾ ಕಂಪನಿ ಮತ್ತು ಸೆರ್ಟ್-ಇನ್ ಅಧಿಕಾರಿಗಾಳಿಗೆ ತಿಳಿಸಿದ್ದಾರೆ. ಮಾಹಿತಿಗಳ ಪ್ರಕಾರ ಹ್ಯಾಕರ್ಸ್ ಡೊಮಿನೊಸ್ ಇಂಡಿಯಾದ 50 ಟಿಬಿಸಿ (ಪ್ರಕಟನೆ ಅಂದಾಜು 21,3 ಕೋಟಿ) ಯಷ್ಟು ಸುಲಿಗೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮಜುಂದರ್ ತಿಳಿಸಿರುವಂತೆ ಹ್ಯಾಕರ್ಸ್ ಟ್ವಿಟ್ಟರ್ ಮೂಲಕ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಕ್ರಿಪ್ಟೊಕರೆನ್ಸಿ ಓಮ್ನಿಕಾಯಿನ್ ಎಸ್ಕೋ ಮಾಡೆಲ್ ಮೂಲಕ 7.5 ಲಕ್ಷ ರೂ ಪಾವತಿಸಲು ಕೇಳಿದ್ದಾರೆ. 5ಜಿಬಿ ಗಾತ್ರದ ಡೇಟಾವನ್ನು ಹ್ಯಾಕರ್ಸ್ ಒಳಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಹಲವು ದಿನಗಳ ಹಿಂದೆ ಮೊಬಿಕ್ವಿಕ್ ಕಂಪನಿಯ ಡೇಟಾ ಉಲ್ಲಂಘನೆಯಾಗಿತ್ತು. ಇದೀಗ ಡೊಮಿನೊಸ್ ಕಂಪೆನಿಯ ಡೇಟಾ ಲೀಕ್ ಆಗಿದೆ.
ಡೊಮಿನೊಸ್ 7 ವರ್ಷಗಳಿಂದ ಹೊಂದಿರುವ 13 ಟಿಬಿ ಗಾತ್ರದ ಡೇಟಾಬೇಸ್ ಒಳಗೊಂಡಿತ್ತು. 2015ರಿಂದ ಗ್ರಾಹಕರ ಡೇಟಾ ಸೇವ್ ಆಗಿತ್ತು. ಅದರಲ್ಲಿ ವಸತಿ ವಿಳಾಸ, ಪಾವತಿ ವಿವರಗಳನ್ನು ಒಳಗೊಂಡಿತ್ತು. ಅದರಲ್ಲಿ ಎರಡು ಪ್ಯಾಕೇಜ್ ಹೊಂದಿರುವ ಡೇಟಾ ಸೆಟ್ ಅನ್ನು ಡಾರ್ಕ್ ವೆಬ್ ಮಾರಾಟ ಮಾಡಿದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಡೊಮಿನಾಸ್ ಏನು ಯಾವುದೆ ಪ್ರತಿಕ್ರಿಯೆ ನೀಡಿಲ್ಲ.
Published by:
Harshith AS
First published:
April 20, 2021, 2:39 PM IST