news18-kannada Updated:April 9, 2021, 8:44 AM IST
ಅಮೇಜ್ಫಿಟ್ ವಾಚ್
ಅಮೇಜ್ಫಿಟ್ ಬಿಪ್ ಯೂ ಕಡಿಮೆ ಬೆಲೆಯಲ್ಲಿ ಕೈಗೆಟಕುವ ವಾಚ್ ಪ್ರಿಯರ ಆಯ್ಕೆಯಾಗಿದೆ. ಆದರೆ ಕೆಲವೊಂದು ಫೀಚರ್ಗಳ ಕೊರತೆಯಿಂದ ಹೊರ ಬರುವ ಉದ್ದೇಶದಿಂದ ಈಗ ಅಮೇಜ್ಫಿಟ್ ಬಿಪ್ ಯೂ ಪ್ರೊ ವರ್ಷನ್ ಮಾರುಕಟ್ಟೆಗೆ ಬಂದಿದೆ. ಉತ್ಕೃಷ್ಟ ದರ್ಜೆಯ ಸ್ಕ್ರೀನ್ ಇದ್ದು, ಇನ್ ಕಮಿಂಗ್ ಕಾಲ್ಸ್, ಮೆಸೆಜ್ ಮತ್ತು ರಿಮೈಂಡರ್ಗಳ ಸ್ಪಷ್ಟ ಫೀಚರ್ ಇದೆ. ಅಮೇಜ್ಫಿಟ್ ಬಜೆಟ್ ಸ್ಮಾರ್ಟ್ ವಾಚ್ ಬಿಪ್ ಸರಣಿಯ ಹೊಸ ವಾಚ್ ಆಗಿದೆ. ಬಿಪ್ ಪ್ರೊ ಸಾಕಷ್ಟು ಹೊಸ ಫೀಚರ್ಗಳನ್ನು ಒಳಗೊಂಡಿದ್ದು, ಇದರ ಹಿಂದಿನ ವರ್ಷನ್ ಬಿಪ್ ಯೂ ಗಿಂತ ಸ್ವಲ್ಪ ಹೆಚ್ಚಿನ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಅಮೇಜ್ಫಿಟ್ ಬಿಪ್ ಯೂ ಪ್ರೊ ಸ್ಮಾರ್ಟ್ ವಾಚ್ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ. ಕಳೆದ ವರ್ಷ ಲಾಂಚ್ ಆದ ಅಮೇಜ್ಫಿಟ್ ಬಿಪ್ ಯೂ ಕೇವಲ 3,499 ರೂ ಗೆ ಲಭ್ಯವಿತ್ತು. ಈಗ ಅಮೇಜ್ಫಿಟ್ ಬಿಪ್ ಯೂ ಪ್ರೊ ಲಾಂಚ್ ಆಗಿದ್ದು ಎಲ್ಲರ ಗಮನ ಸೆಳೆದಿದೆ.
ಹ್ಯುಯಾಮಿ ಅವರ ಅಮೇಜ್ಫಿಟ್ ಬಿಪ್ ಯೂ ಪ್ರೊ ಫೀಚರ್ಸ್ ಈ ರೀತಿ ಇದೆ. 1.43 ಡಿಸ್ಪ್ಲೇ, 230mAh ಬ್ಯಾಟರಿ, ಜಿಪಿಎಸ್, ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್ ಮತ್ತು 5 ATM ವಾಟರ್ ರೆಸಿಸ್ಟೆನ್ಸಿ ಪವರ್ ಇದೆ. ಅಮೇಜ್ಫಿಟ್ ಬಿಪ್ ಯೂ ಪ್ರೊ ಭಾರತದಲ್ಲಿ 4,999 ರೂಗಳಿಗೆ ಲಭ್ಯವಿದೆ. ಅಮೇಜ್ಫಿಟ್ ಬಿಪ್ ಯು ಪ್ರೊ ಹ್ಯುಯಾಮಿ ಅವರ ಮಿಡ್ ರೇಂಜ್ ವಾಚ್ ಆಗಿದೆ. ರಿಯಲ್ ಮಿ ವಾಚ್ ಎಸ್, ಹಾನರ್ ವಾಚ್ ಇಎಸ್ ಮತ್ತು ಎಂಐ ಬ್ಯಾಂಡ್ 6 ವಾಚ್ಗಳೊಂದಿಗೆ ಸ್ಪರ್ಧೆಯಲ್ಲಿದೆ.
ಅಮೇಜ್ಫಿಟ್ ಬಿಪ್ ಯೂ ಪ್ರೊ ಕಂಪನಿಯ ಅಧಿಕೃತ ವೆಬ್ಸೈಟ್ ಮತ್ತು ಅಮೆಜಾನ್ನಲ್ಲಿ ಈಗಾಗಲೇ ಲಭ್ಯವಿದೆ. ಅಮೇಜ್ಫಿಟ್ ಬಿಪ್ ಯೂ ನ ಡಿಸೈನ್ನ ಹೋಲಿಕೆಯೂ ಅಮೇಜ್ಫಿಟ್ ಬಿಪ್ ಯೂ ಪ್ರೊ ನಲ್ಲಿ ಕಂಡು ಬರುತ್ತದೆ. ಡಿವೈಸ್ನ ಬಲಭಾಗದಲ್ಲಿ ಡಿಜಿಟಲ್ ಡಯಲ್ ಆಯ್ಕೆ ಇದೆ.
ಅಮೇಜ್ಫಿಟ್ ಬಿಪ್ ಯೂ ಪ್ರೊ ನಲ್ಲಿ 1.43 ಇಂಚಿನ ಐಪಿಎಸ್ LCD ಡಿಸ್ಪ್ಲೇ ಇದೆ. 2.5 ಗ್ಲಾಸ್ ಮತ್ತು ಆ್ಯಂಟಿ ಫಿಂಗರ್ ಪ್ರಿಂಟ್ ಕೋಟಿಂಗ್ ಇದೆ. 320 x 302 ಪಿಕ್ಸೆಲ್ನಷ್ಟು ಎಲ್ಸಿಡಿ ಪ್ಯಾನಿಂಗ್ ಅತ್ಯುತ್ತಮ ರೆಸಲ್ಯೂಷನ್ ಹೊಂದಿದೆ. ಹಾರ್ಟ್ ರೇಟ್ ಮಾನಿಟರಿಂಗ್ಗಾಗಿ ಆಪ್ಟಿಕಲ್ ಹಾರ್ಟ್ ರೇಟ್ ಸೆನ್ಸಾರ್, ಬ್ಲಡ್ ಆಕ್ಸಿಜನ್(SpO2) ಸೆನ್ಸಾರ್, ಟ್ರೈ-ಆಕ್ಸಿಸ್ ಆಕ್ಸಿಲರೊಮೀಟರ್, ಟ್ರೈ-ಆಕ್ಸಿಸ್ ಗೈರೊ ಮತ್ತು ಜಿಯೋಮಿಟ್ರಿಕ್ ಸೆನ್ಸಾರ್ ಒಳಗೊಂಡಿದೆ. ನಾರ್ವೆಯ ಪೈ ಆರೋಗ್ಯ ಸಂಶೋಧನೆಯ ಆಧಾರದ ಮೇಲೆ ಪಿಎಐ ಮೌಲ್ಯಮಾಪನ ವ್ಯವಸ್ಥೆ ಜೊತೆಗೆ ವಿಶೇಷ ಅಲ್ಗಾರಿದಮ್ ಬಳಸಿ ಸಿದ್ಧ ಮಾಡಲಾಗಿದೆ.
ಅಮೇಜ್ಫಿಟ್ ಬಿಪ್ ಪ್ರೊ ನ ಪ್ರಮುಖ ಬದಲಾವಣೆ ಎಂದರೆ, ಜಿಪಿಎಸ್ ಮತ್ತು ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್. ಈ ಕಾರಣದಿಂದ ನೀವು ವಾಕಿಂಗ್ ಅಥವಾ ಜಾಗಿಂಗ್ ಹೋಗುವಾಗ ನಿಮ್ಮ ಸ್ಮಾರ್ಟ್ ಫೋನ್ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ.
ಇದಿಷ್ಟೇ ಅಲ್ಲದೇ ಅಮೇಜ್ಫಿಟ್ ಬಿಪ್ ಪ್ರೊ ನಿಮ್ಮ ನಿದ್ದೆಯನ್ನು ಮಾನಿಟರ್ ಮಾಡುತ್ತದೆ, ಒತ್ತಡವನ್ನು ಟ್ರ್ಯಾಕ್ ಮಾಡುತ್ತದೆ, ಉಸಿರಾಟದ ವ್ಯಾಯಾಮ ಮತ್ತು ಹೆಣ್ಣು ಮಕ್ಕಳಿಗೆ ಪೀರಿಯಡ್ಸ್ ಸೈಕಲ್ ಟ್ರ್ಯಾಕ್ ಮಾಡಲು ನೆರವಾಗುತ್ತದೆ. ಇದಿಷ್ಟೇ ಅಲ್ಲದೇ 60 ಕ್ಕೂ ಹೆಚ್ಚು ಕ್ರೀಡಾ ಚಟುವಟಿಕೆಯನ್ನು ಟ್ರ್ಯಾಕ್ ಮಾಡುತ್ತದೆ.
ಇದರ ಜೊತೆಗೆ ಸ್ಮಾರ್ಟ್ ವಾಚ್ 50 ಕ್ಕೂ ಅಧಿಕ ಸೈಡ್ಲೋಡ್ ಫೋಟೋಸ್ ಜೊತೆಗೆ ವಾಚ್ ಫೇಸ್ ಆಗಿ ಬಳಸುವ ಸೌಲಭ್ಯ ಹೊಂದಿದೆ. ಅಷ್ಟೇ ಅಲ್ಲದೇ ಈ ವಾಚ್ ಧೂಳು ಮತ್ತು ನೀರಿನಿಂದ ರಕ್ಷಣೆ ಪಡೆಯಲು 5ATM ರೆಸಿಸ್ಟೆನ್ಸ್ ಪವರ್ ಹೊಂದಿದೆ.ಅಮೇಜ್ಫಿಟ್ ಬಿಪ್ ಪ್ರೊ ಜೊತೆಗೆ ನಿಮ್ಮ ಫೋನ್ ನೋಟಿಫಿಕೇಷನ್, ಮ್ಯೂಸಿಕ್ ಕಂಟ್ರೋಲ್, ದೂರದಿಂದಲೇ ಪಿಕ್ಚರ್ ಕ್ಲಿಕ್ ಮಾಡಬಹುದು. ಜೊತೆಗೆ ನಿಮ್ಮ ಫೋನ್ ಕೂಡ ಹುಡುಕಬಹುದು. ಇಂತಹ ಹತ್ತಾರು ಆಯ್ಕೆಗಳು ಈ ವಾಚ್ನಲ್ಲಿದೆ.
ಅಮೇಜ್ಫಿಟ್ ಬಿಪ್ ಯೂ ಪ್ರೊ ನಲ್ಲಿ 5.0 ಬ್ಲೂ ಟೂತ್ ಮತ್ತು 230 mAh ಬ್ಯಾಟರಿಯೂ ಇದೆ. 2 ಗಂಟೆ ಬ್ಯಾಟರಿ ಚಾರ್ಜ್ ಮಾಡಿದರೆ ಸಾಕು. ಸಾಮಾನ್ಯ ಬಳಕೆಯಲ್ಲಿ 9 ದಿನಗಳವರೆಗೂ ಬ್ಯಾಟರಿ ಸಾಮರ್ಥ್ಯವಿದ್ದು, ಹೆಚ್ಚಿನ ಬಳಕೆಯಲ್ಲಿ 5 ದಿನ ಬ್ಯಾಟರಿ ಸಾಮರ್ಥ್ಯವಿದೆ ಎಂದು ಫೀಚರ್ಸ್ನಲ್ಲಿ ತಿಳಿಸಲಾಗಿದೆ.
Published by:
Harshith AS
First published:
April 9, 2021, 8:42 AM IST