ಕೋವಿಡ್ ರೋಗಿಗಳಿಗೆ ಉತ್ತಮ ಗಾಳಿಗಾಗಿ ಗಿಡನೆಟ್ಟು ಹಸಿರು ಪ್ರೇಮ ಮೆರೆದ​ ವೈದ್ಯರು

ಆಸ್ಪತ್ರೆಯ ಆವರಣದಲ್ಲಿ ಗಿಡಗಳನ್ನು ನೇಡುವ ಮೂಲಕ ರೋಗಿಗಳಿಗೆ ಉತ್ತಮ ಪರಿಸರ ಸೃಷ್ಟಿಸುವ ಜೊತೆಗೆ ಆಕ್ಸಿಜನ್​ ಹೆಚ್ಚಿರುವಂತೆ ನೋಡಿಕೊಂಡಿದ್ದಾರೆ.

news18-kannada
Updated:October 29, 2020, 7:33 AM IST
ಕೋವಿಡ್ ರೋಗಿಗಳಿಗೆ ಉತ್ತಮ ಗಾಳಿಗಾಗಿ ಗಿಡನೆಟ್ಟು ಹಸಿರು ಪ್ರೇಮ ಮೆರೆದ​ ವೈದ್ಯರು
ಪರಿಸರ ಪ್ರೇಮ ಮೆರೆಯುತ್ತಿರುವ ವೈದ್ಯರು
  • Share this:
ಯಾದಗಿರಿ (ಅ.28): ವೈದ್ಯೋ ನಾರಾಯಣೋ ಹರಿಯೇ ಎಂಬಂತೆ ವೈದ್ಯರು ಕೊರೋನಾ ವಿರುದ್ಧ  ಹೋರಾಡುತ್ತಿದ್ದಾರೆ. ಸೋಂಕಿತರ ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಇಲ್ಲಿನ  ಸೋಂಕಿತರ ಚಿಕಿತ್ಸೆಗೆ ಮುಂದಾಗಿರುವ ವೈದ್ಯರು ಅವರಿಗಾಗಿ ಪರಿಸರ ಪ್ರೇಮವನ್ನು ಮೆರೆದಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಗಿಡಗಳನ್ನು ನೇಡುವ ಮೂಲಕ ರೋಗಿಗಳಿಗೆ ಉತ್ತಮ ಪರಿಸರ ಸೃಷ್ಟಿಸುವ ಜೊತೆಗೆ ಆಕ್ಸಿಜನ್​ ಹೆಚ್ಚಿರುವಂತೆ ನೋಡಿಕೊಂಡಿದ್ದಾರೆ. ಅವರ ಈ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ ಜಿಲ್ಲೆಯ ತಾಲೂಕಿನ ಮುದ್ನಾಳ ಗ್ರಾಮದ ಸಮೀಪದ ಕೋವಿಡ್ ಆಸ್ಪತ್ರೆಯ ಆವರಣದಲ್ಲಿ ಕೋವಿಡ್​ ರೋಗಿಗಳಿಗೆ ಉಪಯುಕ್ತವಾಗಿರುವ ಹಣ್ಣು ಮತ್ತು ಸಸಿ ನೆಡಲಾಗಿದೆ.  ಕೋವಿಡ್ ಆಸ್ಪತ್ರೆಯ  ನೋಡಲ್ ಅಧಿಕಾರಿ ಡಾ.ನೀಲಮ್ಮ ಅವರ ನೇತೃತ್ವದಲ್ಲಿ, ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳ ತಂಡ ಈ ಕಾರ್ಯ ನಡೆಸಿದೆ. 

ರೋಗಿಗಳ ಚೇತರಿಕೆಗೆ ಸುತ್ತಮುತ್ತಲಿನ ಪರಿಸರ ಕೂಡ ಪ್ರಭಾವ ಬೀರುತ್ತದೆ ಎಂಬ ಮಾತಿನಂತೆ ಇವರು ಕಾರ್ಯನಿರ್ವಹಿಸಿದ್ದಾರೆ. ಸಿಕ್ಕ ಸಮಯದಲ್ಲಿಯೇ  ಕೋವಿಡ್ ಮುಂಜಾಗ್ರತೆ ವಹಿಸಿಕೊಂಡೆ ಔಷಧಿ ಸಸಿಗಳು ವಿವಿಧ ಹಣ್ಣಿನ ಗೀಡಗಳು,ಹೂವಿನ ಗಿಡಗಳನ್ನು ನೆಟ್ಟಿದ್ದಾರೆ‌. ಸುಮಾರು 50 ಸಸಿ ಹಾಗೂ ಗಿಡಗಳನ್ನು ನೆಟ್ಟಿದ್ದಾರೆ. ಮಾವು, ಸೀಬೆ, ತೆಂಗು  ಸೇರಿದಂತೆ ವಿವಿಧ ಹಣ್ಣಿನ ಗಿಡ ನೆಡಲಾಗಿದೆ. ಇದರ ಜೊತೆಗೆತುಳಸಿ, ಅಮೃತ ಬಳ್ಳಿ, ಅಲೊವೆರಾ ಹಾಗೂ ಇನ್ನಿತರ ಔಷಧಿ ಸಸಿಗಳನ್ನು ನೆಡಲಾಗಿದೆ.

ಕೋವಿಡ್ ರೋಗಿಗಳಿಗೆ ಉತ್ತಮ ಆಕ್ಸಿಜನ್ ಸಿಗುವ ಕಾಳಜಿ...!

ಕೋವಿಡ್ ಆಸ್ಪತ್ರೆಯಲ್ಲಿ  ರೋಗ ಗುಣಮುಖರಾಗಲು ರೋಗಿಗಳು ಆಗಮಿಸಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಕೆಲ ರೋಗಿಗಳು ಕೃತಕ ಆಮ್ಲಜನಕ ಪಡೆಯುತ್ತಾರೆ. ಆದರೆ, ರೋಗಿಗಳಿಗೆ  ನೈಸರ್ಗಿಕ ಉತ್ತಮ ಗಾಳಿ ಸಿಗಲು ಸಸಿಗಳನ್ನು ನೆಡಲಾಗಿದೆ.ಇದರಿಂದ ರೋಗಿಗಳಿಗೆ ಹಾಗೂ ಆಸ್ಪತ್ರೆ ಸಿಬ್ಬಂದಿಗಳಿಗೆ ಉತ್ತಮ ಗಾಳಿ ಲಭ್ಯವಾಗಲಿದೆ. ಸುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ರೋಗಿಗಳು ಬೇಗ ಗುಣಮುಖರಾಗಿ ವಾಪಾಸು ಮನೆಗೆ ಹೋಗಬಹುದು ಎನ್ನುತ್ತಾರೆ ಕೋವಿಡ್ ಆಸ್ಪತ್ರೆ ನೋಡೆಲ್ ಅಧಿಕಾರಿ ಡಾ.ನೀಲಮ್ಮ.

ಇದನ್ನು ಓದಿ: ಅನಕ್ಷರಸ್ಥ ಸಾಹಿತಿ ರಾಮಣ್ಣ ಬ್ಯಾಟಿಯವರ ಅಮೋಘ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ

ಇನ್ನು ಈ ಗಿಡಗಳನ್ನು ವೈದ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹಣ ಹಾಕಿ ತಂದು ಸಹಕಾರದಿಂದ ಈ ಕಾರ್ಯ ನಡೆಸಲಾಗಿದೆ. ಈ ಮೂಲಕ ಆರೋಗ್ಯ ಸೇವೆ ಜೊತೆ ಪರಿಸರ ಕಾಳಜಿಯನ್ನು ಮೆರೆಯಲಾಗಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಇದಕ್ಕೆ ಪ್ರತಿಯೊಬ್ಬರ ಸಹಕಾರ ಸಿಕ್ಕಿರುವುದು ಈ ಕೆಲಸಕ್ಕೆ ಮತ್ತಷ್ಟು ಸ್ಪೂರ್ತಿ ನೀಡಿದಂತೆ ಆಗಿದೆ.

ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಕೋವಿಡ್ ಆಸ್ಪತ್ರೆ ನೋಡೆಲ್ ಅಧಿಕಾರಿ ಡಾ.ನೀಲಮ್ಮ ಮಾತನಾಡಿ, ಕೋವಿಡ್ ರೋಗಿಗಳಿಗೆ ಉತ್ತಮ ಆಕ್ಸಿಜನ್ ಸಿಗಲು ಹಾಗೂ ಉತ್ತಮ ಪರಿಸರ ಕಾಪಾಡಲು ಸಸಿಗಳನ್ನು ನೆಡಲಾಗಿದೆ. ಪ್ರತಿಯೊಬ್ಬರೂ ಪರಿಸರ ಉಳಿಸಿ  ಬೆಳೆಸಿದರೆ ಅನುಕೂಲವಾಗುತ್ತದೆ ಎಂದರು. ಆಸ್ಪತ್ರೆ ಆವರಣದಲ್ಲಿರುವ ಎರಡು ಉದ್ಯಾನವನ ಹಾಗೂ ಸುತ್ತಲು ಸ್ವಚ್ಛತೆ ಕಾಪಾಡಿ ಸಸಿಗಳನ್ನು ನೆಡಲಾಗಿದ್ದು, ವೈದ್ಯರ ಈ ಕಾರ್ಯ ಪ್ರತಿಯೊಬ್ಬರಿಗೂ ಮಾದರಿಯಾಗಿದೆ.
Published by: Seema R
First published: October 29, 2020, 7:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading