Vijay Reddy Passes Away: ಅಣ್ಣಾವ್ರ ಹಿಟ್​ ಸಿನಿಮಾಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ವಿಜಯ್​ ಇನ್ನಿಲ್ಲ..!

ಹಿರಿಯ ನಿರ್ದೇಶಕನ ಅಗಲಿಕೆಗೆ ನಟ ಪುನೀತ್​ ರಾಜ್​ಕುಮಮಾರ್ ಸಹ ಕಂಬನಿ ಮಿಡಿದಿದ್ದಾರೆ. ಅಲ್ಲದೆ ಅವರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ತನ್ನ ಭಾಗ್ಯ ಎಂದು ಹಳೇ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

Anitha E | news18-kannada
Updated:October 10, 2020, 7:42 AM IST
Vijay Reddy Passes Away: ಅಣ್ಣಾವ್ರ ಹಿಟ್​ ಸಿನಿಮಾಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ವಿಜಯ್​ ಇನ್ನಿಲ್ಲ..!
ವಿಜಯ್​ ರೆಡ್ಡಿ ಹಾಗೂ ರಾಜ್​ಕುಮಾರ್​
  • Share this:
ಕನ್ನಡದ ಯಶಸ್ವೀ ಚಿತ್ರನಿರ್ದೇಶಕರಲ್ಲಿ ಒಬ್ಬರಾದ ವಿಜಯ್‌ ಕೊನೆಯುಸಿರೆಳೆದಿದ್ದಾರೆ. 84 ವರ್ಷ ವಿಜಯ್​ ಅವರು ಚೆನ್ನೈನಲ್ಲಿ ನಿನ್ನೆ ಸಂಜೆ 6 ಗಂಟೆಗೆ ಅಗಲಿದ್ದಾರೆ. ಆಂಧ್ರ ಮೂಲದ ವಿಜಯ್ ರೆಡ್ಡಿ ಕನ್ನಡದಲ್ಲಿ 'ವಿಜಯ್‌' ಎಂದೇ ಹೆಸರಾಗಿದ್ದವರು. ರೈತ ಕುಟುಂಬದವರಾದ ಅವರು ಕೆಲಸ ಅರಸುತ್ತಾ ಮದ್ರಾಸಿಗೆ ಹೋಗಿ ಯಶಸ್ವೀ ನಿರ್ದೇಶಕ, ನಿರ್ಮಾಪಕರಾಗಿ ಬೆಳೆದದ್ದೇ ಒಂದು ಸೋಜಿಗ. 1970ರಲ್ಲಿ 'ರಂಗಮಹಲ್ ರಹಸ್ಯ' ಚಿತ್ರದೊಂದಿಗೆ ಕನ್ನಡಕ್ಕೆ ಬಂದ ಅವರ ಹೆಸರಿನಲ್ಲಿ ಹಿಟ್​ ಸಿನಿಮಾಗಳ ದೊಡ್ಡ ಪಟ್ಟಿಯೇ ಇದೆ. ರಾಜ್​ ಕುಮಾರ್​ ಅವರ ಜೊತೆ ಹಲವಾರು ಹಿಟ್​ ಸಿನಿಮಾಗಳನ್ನೂ ನೀಡಿದ್ದಾರೆ. ಮಯೂರ, ಸನಾದಿ ಅಪ್ಪಣ್ಣ, ನಾ ನಿನ್ನ ಮರೆಯಲಾರೆ, ಭಕ್ತ ಪ್ರಹ್ಲಾದ, ಹುಲಿಯ ಹಾಲಿನ ಮೇವು, ಬಡವರ ಬಂಧು, ತಾಳಿಯ ಭಾಗ್ಯ, ಕೌಬಾಯ್‌ ಕುಳ್ಳ, ನಾನಿನ್ನ ಬಿಡಲಾರೆ, ಆಟೋ ರಾಜ, ದೇವ ಸೇರಿದಂತೆ 37 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 16 ಹಿಂದಿ, 12 ತೆಲುಗು ಸಿನಿಮಾಗಳನ್ನು ನಿರ್ದೇಶಿಸಿದ್ದು, ಚಿತ್ರನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ.

ಹಿರಿಯ ನಿರ್ದೇಶಕನ ಅಗಲಿಕೆಗೆ ನಟ ಪುನೀತ್​ ರಾಜ್​ಕುಮಮಾರ್ ಸಹ ಕಂಬನಿ ಮಿಡಿದಿದ್ದಾರೆ. ಅಲ್ಲದೆ ಅವರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ತನ್ನ ಭಾಗ್ಯ ಎಂದು ಹಳೇ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ತಂದೆಯವರ ಮರೆಯಲಾಗದ ಸಿನಿಮಾಗಳಾದ ಗಂಧದಗುಡಿ, ಮಯೂರ, ನಾ ನಿನ್ನ ಮರೆಯಲಾರೆ ಹಾಗು ಹಲಾವಾರು ಸಿನೆಮಾಗಳನ್ನು ನಿರ್ದೇಶಿಸಿರುವ ವಿಜಯ್ ರೆಡ್ಡಿ ಅವರು ನಿಧನರಾಗಿದ್ದಾರೆ. ಅವರ ನಿರ್ದೇಶನದ ಭಕ್ತ ಪ್ರಹ್ಲಾದ ಚಿತ್ರದಲ್ಲಿ ನಾನು ನಟಿಸಿರುವುದೆ ನನ್ನ ಭಾಗ್ಯ. ಅವರ ಆತ್ಮಕ್ಕೆ ಶಾಂತಿಸಿಗಲಿ. pic.twitter.com/oyd7ajbGrMತಂದೆಯವರ ಮರೆಯಲಾಗದ ಸಿನಿಮಾಗಳಾದ ಗಂಧದಗುಡಿ, ಮಯೂರ, ನಾ ನಿನ್ನ ಮರೆಯಲಾರೆ ಹಾಗೂ ಹಲಾವಾರು ಸಿನೆಮಾಗಳನ್ನು ನಿರ್ದೇಶಿಸಿರುವ ವಿಜಯ್ ರೆಡ್ಡಿ, ಅವರು ನಿಧನರಾಗಿದ್ದಾರೆ. ಅವರ ನಿರ್ದೇಶನದ ಭಕ್ತ ಪ್ರಹ್ಲಾದ ಚಿತ್ರದಲ್ಲಿ ನಾನು ನಟಿಸಿರುವುದೇ ನನ್ನ ಭಾಗ್ಯ. ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಅಪ್ಪು ಟ್ವೀಟ್​ ಮಾಡುವುದರೊಂದಿಗೆ ತಮ್ಮ ತಂದೆ ಜತೆಗಿರುವ ಅವರ ಫೋಟೋವನ್ನೂ ಹಂಚಿಕೊಂಡಿದ್ದಾರೆ.
Published by: Anitha E
First published: October 10, 2020, 7:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading