HOME » NEWS » State » UNION MINISTER DV SADANANDAGOWDA HITS OUT T MLA YATNAL AND MAHARASHTRA CM UDDHVA THACKERAY AKP LG

ಶಾಸಕ ಯತ್ನಾಳ್ ವರ್ತನೆಗೆ ಕೇಂದ್ರ ಸಚಿವ ಸದಾನಂದಗೌಡ ಗರಂ; ಗಡಿ ತಂಟೆಗೆ ಬಂದ ಮಹಾರಾಷ್ಟ್ರ ಸಿಎಂಗೆ ಎಚ್ಚರಿಕೆ

ಉದ್ದವ್ ಠಾಕ್ರೆ ಸರಕಾರ ಮಹಾರಾಷ್ಟ್ರದಲ್ಲಿ ಬೀಳುವ ಹಂತದಲ್ಲಿದ್ದು,  ಠಾಕ್ರೆ ಮೊದಲು ತಮ್ಮ ಸರಕಾರವನ್ನು ಉಳಿಸುವತ್ತ ಗಮನ ಹರಿಸಬೇಕು. ಶಿವಸೇನೆ ವಿರುದ್ಧ ಕಾಂಗ್ರೇಸ್ ಅಸಮಾಧಾನ ಹೊಂದಿದ್ದು, ಯಾವುದೇ ಸಂದರ್ಭದಲ್ಲೂ ಮಹಾರಾಷ್ಟ್ರ ದೋಸ್ತಿ ಸರಕಾರ ಬೀಳುವ ಸಾಧ್ಯತೆಯಿದೆ ಎಂದ ಅವರು ರಾಜ್ಯದ ಗಡಿ ತಂಟೆಗೆ ಯಾರು ಬಂದರೂ ಅದನ್ನು ಸಹಿಸುವುದಿಲ್ಲ ಎಂದರು.

news18-kannada
Updated:January 19, 2021, 3:26 PM IST
ಶಾಸಕ ಯತ್ನಾಳ್ ವರ್ತನೆಗೆ ಕೇಂದ್ರ ಸಚಿವ ಸದಾನಂದಗೌಡ ಗರಂ; ಗಡಿ ತಂಟೆಗೆ ಬಂದ ಮಹಾರಾಷ್ಟ್ರ ಸಿಎಂಗೆ ಎಚ್ಚರಿಕೆ
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ
  • Share this:
ದಕ್ಷಿಣ ಕನ್ನಡ(ಜ.19):  ಶಾಸಕ ಬಸವರಾಜ್ ಯತ್ನಾಳ ಇನ್ನು ಮುಂದೆ ಬಾಯಿ ಮುಚ್ಚದೇ ಇದ್ದಲ್ಲಿ ಕೇಂದ್ರ ನಾಯಕರು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಎಚ್ಚರಿಸಿದ್ದಾರೆ. ಪುತ್ತೂರಿನಲ್ಲಿ ಬಿಜೆಪಿ ಪಕ್ಷದ ಜನಸೇವಕ ಸಮಾವೇಶದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಸವರಾಜ್ ಯತ್ನಾಳ ನಾನು ಪಕ್ಷದ ರಾಜ್ಯಾಧ್ಯಕ್ಷ ನಾಗಿದ್ದ ಸಂದರ್ಭದಲ್ಲೂ ಇದೇ ರೀತಿಯ ವರ್ತನೆಯನ್ನು ತೋರುತ್ತಿದ್ದರು. ಹಲವು ಎಚ್ಚರಿಕೆಯ ಬಳಿಕವೂ ಅವರು ತಮ್ಮ ವರ್ತನೆಯನ್ನು ಸರಿಪಡಿಸದ ಕಾರಣಕ್ಕೆ ನಾನೇ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದೆ. ಇದೀಗ ಮತ್ತೆ ಅವರು ಅಂಥಹುದೇ ವರ್ತನೆಯನ್ನು ತೋರಿಸಲು ಆರಂಭಿಸಿದ್ದಾರೆ ಎಂದು ಕಿಡಿಕಾರಿದರು.

ಪಕ್ಷದ ವಿರುದ್ಧ, ಪಕ್ಷದ ನಾಯಕರ ವಿರುದ್ಧ ಬೀದಿ ಬದಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ಸಚಿವ ಸ್ಥಾನಕ್ಕಾಗಿ ಯತ್ನಾಳ್ ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ ಎನ್ನುವುದು ನಾಯಕರ ಗಮನಕ್ಕೆ ಬಂದಿದೆ. ಪಕ್ಷಕ್ಕೆ, ಪಕ್ಷದ ನಾಯಕರಿಗೆ ಸಲಹೆ ಕೊಡುವ ಕೆಲಸವನ್ನು ಯತ್ನಾಳ ನಿಲ್ಲಿಸಬೇಕು. ಯತ್ನಾಳ್ ಸಲಹೆ ಕೇಳುವಂತಹ ಮಟ್ಟದಲ್ಲಿ ಪಕ್ಷ ಈಗ ಇಲ್ಲ ಎಂದ ಅವರು ವಾಜಪೇಯಿ ಸರಕಾರದಲ್ಲಿ ರಾಜ್ಯ ಖಾತೆ ಸಚಿವರಾಗಿದ್ದ ಯತ್ನಾಳ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದರು.

ನಿರಂತರ ಜ್ಯೋತಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸೂಚನೆ; ಸಚಿವ ಕೆ.ಎಸ್.ಈಶ್ವರಪ್ಪ

ಇದೇ ರೀತಿಯ ವರ್ತನೆಯನ್ನು ಮುಂದುವರಿಸಿದ್ದಲ್ಲಿ ಕೇಂದ್ರ ನಾಯಕರು ಅವರ ಮೇಲೆ‌ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಶಾಸಕರಾಗಿ ಕ್ಷೇತ್ರದ ಜನರ ಕೆಲಸ ಮಾಡಿ ಎಂದು ಸಲಹೆ ನೀಡಿದ ಡಿ.ವಿ.ಸದಾನಂದ ಗೌಡ ಪಕ್ಷದಲ್ಲಿ ಅಸಮಾಧಾನವಿದ್ದಲ್ಲಿ ಅದನ್ನು ಕೇಂದ್ರ ನಾಯಕರ ಗಮನಕ್ಕೆ ತನ್ನಿ. ರಾಜ್ಯದ ಕೆಲವರು ನಾಯಕರು ದೆಹಲಿಗೆ ಬಂದು ಕೇಂದ್ರ ನಾಯಕರನ್ನು ಭೇಟಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಅದನ್ನು ಬಿಟ್ಟು ಬೀದಿ ಬದಿಯಲ್ಲಿ ಚರ್ಚೆ ಮಾಡುವುದನ್ನು ಪಕ್ಷ ಸಹಿಸುವುದಿಲ್ಲ ಎಂದು ಯತ್ನಾಳ ಅವರ ವಿರುದ್ಧ ಹರಿಹಾಯ್ದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್​​ ಠಾಕ್ರೆ ರಾಜ್ಯದ ಗಡಿ ವಿಚಾರವನ್ನು ಕೆದಕಿರುವುದಕ್ಕೆ ರಾಜ್ಯದ ಮುಖ್ಯಮಂತ್ರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ‌. ರಾಜ್ಯದ ನಿಲುವನ್ನು ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟಪಡಿಸಿದ್ದು, ನಮ್ಮ ನೆಲ-ಜಲದ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಕೇಂದ್ರ ಸಚಿವರು ಎಚ್ಚರಿಕೆಯನ್ನು ನೀಡಿದರು.

ಉದ್ದವ್ ಠಾಕ್ರೆ ಸರಕಾರ ಮಹಾರಾಷ್ಟ್ರದಲ್ಲಿ ಬೀಳುವ ಹಂತದಲ್ಲಿದ್ದು,  ಠಾಕ್ರೆ ಮೊದಲು ತಮ್ಮ ಸರಕಾರವನ್ನು ಉಳಿಸುವತ್ತ ಗಮನ ಹರಿಸಬೇಕು. ಶಿವಸೇನೆ ವಿರುದ್ಧ ಕಾಂಗ್ರೇಸ್ ಅಸಮಾಧಾನ ಹೊಂದಿದ್ದು, ಯಾವುದೇ ಸಂದರ್ಭದಲ್ಲೂ ಮಹಾರಾಷ್ಟ್ರ ದೋಸ್ತಿ ಸರಕಾರ ಬೀಳುವ ಸಾಧ್ಯತೆಯಿದೆ ಎಂದ ಅವರು ರಾಜ್ಯದ ಗಡಿ ತಂಟೆಗೆ ಯಾರು ಬಂದರೂ ಅದನ್ನು ಸಹಿಸುವುದಿಲ್ಲ ಎಂದರು.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಜನಸೇವಕ ಸಮಾವೇಶದಲ್ಲಿ ಮಾರ್ಗದರ್ಶನ ನೀಡಿದರು. ಸೋತ ಹಾಗೂ ಗೆದ್ದ ಅಭ್ಯರ್ಥಿಗಳು ನಿರಂತರವಾಗಿ ಗ್ರಾಮದ ಜನರ ಜೊತೆಗೆ ಕೆಲಸ ಮಾಡಬೇಕು ಎಂದು ಅವರು ಸೂಚನೆ ನೀಡಿದರು. ನೂತನವಾಗಿ ಸಚಿವರಾಗಿ ಆಯ್ಕೆಯಾದ ಸುಳ್ಯ ಶಾಸಕ ಎಸ್.ಅಂಗಾರರನ್ನು ಸಚಿವರು ಸಮಾವೇಶದಲ್ಲಿ ಪಕ್ಷದ ವತಿಯಿಂದ ಸನ್ಮಾನಿಸಿದರು.
Published by: Latha CG
First published: January 19, 2021, 3:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories