ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಹಣ ಕೊಡಲಿಲ್ಲ ಎಂದು ಸುಪಾರಿ ಕೊಟ್ಟು ಅಪ್ಪನ ಕೊಲೆ ಮಾಡಿಸಿದ ಮಗ

ಮಗ ರಾಜೇಶ್ ತನ್ನ ತಂದೆ ದೇವಸ್ಥಾನಕ್ಕೆ ಹೋದವರು ವಾಪಸ್ ಬಂದಿಲ್ಲ. ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ಶುಕ್ರವಾರ ಹನ್ನೊಂದು ಗಂಟೆಗೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಪ್ರಕರಣ ಕೈಗೆತ್ತಿಕೊಂಡು ವಿವಿಧ ಅಯಾಮಗಳಲ್ಲಿ ತೀವ್ರ ತನಿಖೆ ನಡೆಸಿದ ಪೊಲೀಸರು ಕೌಟುಂಬಿಕ ವಿಚಾರಗಳ ಬಗ್ಗೆ ತನಿಖೆ ಮಾಡುತ್ತಿದ್ದ ವೇಳೆ ಮಗನ ಮೇಲೆ ಸಂಶಯದ ಸುಳಿ ಹುಟ್ಟಿಕೊಂಡಿದೆ.

news18-kannada
Updated:August 9, 2020, 7:21 AM IST
ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಹಣ ಕೊಡಲಿಲ್ಲ ಎಂದು ಸುಪಾರಿ ಕೊಟ್ಟು ಅಪ್ಪನ ಕೊಲೆ ಮಾಡಿಸಿದ ಮಗ
ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು
  • Share this:
ಬೆಂಗಳೂರು; ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಹಣ ಕೊಡಲಿಲ್ಲ ಎಂದು ಸುಪಾರಿ ಕೊಟ್ಟು ತಂದೆ ಹತ್ಯೆ ಮಾಡಿಸಿದ ಮಗ ಹಾಗೂ ಆತನ ಸ್ನೇಹಿತರನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ರಾಜೇಶ್, ಪಾರ್ಥಿಬನ್, ಸ್ಟ್ಯಾನ್ಲಿ ಮತ್ತು ಆನಂದ್ ಬಂಧಿತ ಆರೋಪಿಗಳು.

ಆರೋಪಿ ರಾಜೇಶ್ ತಂದೆ ಪನ್ನೀರ್ ಸೆಲ್ವಂ ರಾಮಮೂರ್ತಿ ನಗರದ ಸರ್ ಎಂ.ವಿ. ನಗರ ನಿವಾಸಿಯಾಗಿದ್ದು, ಬಾಣಸವಾಡಿ, ರಾಮಮೂರ್ತಿ ನಗರ ಸುತ್ತಮುತ್ತ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಮನೆ ಬಾಡಿಗೆ ಕೊಡಿಸುವುದು, ಲೀಸ್ ಹಾಕಿಸುವುದು, ಮನೆ ಮಾರಾಟ ಸೇರಿದಂತೆ ಹಲವು ವ್ಯವಹಾರ ಮಾಡುತ್ತಿದ್ದರು. ರಿಯಲ್ ಎಸ್ಟೇಟ್ ವ್ಯವಹಾರದಿಂದ ಒಂದಷ್ಟು ಹಣವನ್ನೂ ಸಂಪಾದನೆ ಮಾಡಿದ್ದರು. ಅಪ್ಪನಂತೆ ಮಗ ರಾಜೇಶ್ ಸಹ ಸಣ್ಣ ಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರ ನಡೆಸೋಕೆ ಮುಂದಾಗಿದ್ದ. ಆದರೆ ಸಾಕಷ್ಟು ಹಣಕಾಸು ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿದ್ದ. ತನ್ನ ವ್ಯವಹಾರಕ್ಕೆ ಹಣಕಾಸು ನೆರವು ನೀಡುವಂತೆ ರಾಜೇಶ್ ಅಪ್ಪನ ಬಳಿ ಕೇಳಿದ್ದನಂತೆ. ಅಲ್ಲದೆ ತನ್ನ ತಂದೆ ಅಕ್ರಮ ಸಂಬಂಧ ಹೊಂದಿದ್ದು, ಹಣವನ್ನೆಲ್ಲ ಅವರಿಗೆ ಖರ್ಚು ಮಾಡುತ್ತಾನೆ ಎಂದು ಆಕ್ರೋಶಗೊಂಡಿದ್ದನಂತೆ. ಆದರೆ ಮಗ ಹಣವನ್ನು ದುಂದುವೆಚ್ಚ ಮಾಡಿ ಪೋಲು ಮಾಡುತ್ತಾನೆ ಎಂದು ತಂದೆ ಹಣ ನೀಡಲು ನಿರಾಕರಿಸಿದ್ದನಂತೆ.

ಅಪ್ಪ ತನಗೆ ಹಣ ನೀಡಲು ಹಿಂದೇಟು ಹಾಕಿದ್ದಕ್ಕೆ ಕುಪಿತಗೊಂಡ ಮಗ ರಾಜೇಶ್ ಮೂರು ತಿಂಗಳ ಹಿಂದೆ ಸ್ನೇಹಿತರ ಮೂಲಕ ತನ್ನ ತಂದೆಯ ಕೊಲೆಗೆ ಸಂಚು ರೂಪಿಸಿದ್ದನಂತೆ. ಸ್ನೇಹಿತರ ಮೂಲಕ ತಂದೆಯ ಮೇಲೆ ಅಟ್ಯಾಕ್ ಮಾಡಿಸಿ ಹಲ್ಲೆ ಮಾಡಿಸಿದ್ದನಂತೆ. ಹೀಗೆ ಮೂರ್ನಾಲ್ಕು ಬಾರಿ ತನ್ನ ತಂದೆ ಮೇಲೆ ಹಲ್ಲೆ ಯತ್ನಗಳು ನಡೆಸಿ ಕೊಲೆ ಮಾಡಲು ಮುಂದಾಗಿದ್ದನಂತೆ. ಆದರೆ ಪ್ರತಿಬಾರಿ ಪನ್ನೀರ್ ಸೆಲ್ವಂ ಪ್ರಾಣಾಪಾಯದಿಂದ ಪರಾಗಿದ್ದರು.

ಕಳೆದ ವಾರ ತನ್ನ ತಂದೆಯ ಕೊಲೆಗೆ ಮತ್ತೊಮ್ಮೆ ಸಂಚು ರೂಪಿಸಿದ ಆರೋಪಿ ಮಗ ರಾಜೇಶ್ ಈ ಬಾರಿ ಹೇಗಾದರೂ ಮಾಡಿ ಕೊಲೆ ಮಾಡಲೇಬೇಕು ಎಂದು ಸ್ನೇಹಿತರಿಗೆ 10 ಲಕ್ಷಕ್ಕೆ ಸುಪಾರಿ ನೀಡಿದ್ದನಂತೆ. ಶುಕ್ರವಾರ ಎಂದಿನಂತೆ ತನ್ನ ತಂದೆ ದೇವಸ್ಥಾನಕ್ಕೆ ಹೋಗುತ್ತಾರೆ ಎಂದು ಅರಿತ ರಾಜೇಶ್ ತನ್ನ ಸ್ನೇಹಿತರ ಮೂಲಕ ಕಿಡ್ನಾಪ್ ಮಾಡಿಸಿದ್ದಾನೆ.

ರಾಜೇಶನ ನಾಲ್ವರು ಸ್ನೇಹಿತರು ಪನ್ನೀರ್ ಸೆಲ್ವಂ ಅವರನ್ನು ಕಿಡ್ನಾಪ್ ಮಾಡಿ ಬಳಿಕ ಕಾರಿನಲ್ಲಿ ವಿಷಯುಕ್ತ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ್ದಾರೆ. ಮೂರ್ನಾಲ್ಕು ಗಂಟೆ ಒದ್ದಾಡಿದ ಪನ್ನೀರ್ ಸೆಲ್ವಂ ಅಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

ಇನ್ನೂ ಆರೋಪಿಗಳು ದೇವನಹಳ್ಳಿ, ಹೊಸಕೋಟೆ ಕ್ರಾಸ್ ಎಲ್ಲ ಸುತ್ತಾಡಿಸಿ ಬಳಿಕ ಕೋಲಾರದ ವೇಮಗಲ್ ಬಳಿಯ ನೀಲಗಿರಿ ತೋಪಿನಲ್ಲಿ ಶವ ಎಸೆದು ಪರಾರಿಯಾಗಿದ್ದಾರೆ. ಬಳಿಕ ಮಗ ರಾಜೇಶ್ ತನ್ನ ತಂದೆ ದೇವಸ್ಥಾನಕ್ಕೆ ಹೋದವರು ವಾಪಸ್ ಬಂದಿಲ್ಲ. ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ಶುಕ್ರವಾರ ಹನ್ನೊಂದು ಗಂಟೆಗೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ.

ಇದನ್ನು ಓದಿ: Karnataka SSLC Result 2020: ಸೋಮವಾರ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ; ವಿದ್ಯಾರ್ಥಿಗಳ ಮೊಬೈಲ್​ಗೆ ಬರಲಿದೆ ರಿಸಲ್ಟ್ಪ್ರಕರಣ ಕೈಗೆತ್ತಿಕೊಂಡು ವಿವಿಧ ಅಯಾಮಗಳಲ್ಲಿ ತೀವ್ರ ತನಿಖೆ ನಡೆಸಿದ ಪೊಲೀಸರು ಕೌಟುಂಬಿಕ ವಿಚಾರಗಳ ಬಗ್ಗೆ ತನಿಖೆ ಮಾಡುತ್ತಿದ್ದ ವೇಳೆ ಮಗನ ಮೇಲೆ ಸಂಶಯದ ಸುಳಿ ಹುಟ್ಟಿಕೊಂಡಿದೆ. ಕೂಡಲೇ ಪೊಲೀಸರು ರಾಜೇಶನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಿಗೆ ಬಂದಿದೆ. ಸದ್ಯ ರಾಮಮೂರ್ತಿ ನಗರ ಪೊಲೀಸರು ಆರೋಪಿ ಪುತ್ರ ರಾಜೇಶ್ ಆತನ ಸ್ನೇಹಿತರಾದ ಪಾರ್ಥಿಬನ್, ಸ್ಟ್ಯಾನ್ಲಿ ಮತ್ತು ಆನಂದ್ ಎಂಬುವರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
Published by: HR Ramesh
First published: August 9, 2020, 7:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading