HOME » NEWS » State » THE CENTER MADE IT CLEAR THAT KANNADA CANNOT BE GIVEN STATUS AS A HINDI OUTRAGE AT SOCIAL MEDIA MAK

ಹಿಂದಿಯಂತೆ ಕನ್ನಡಕ್ಕೆ ಸ್ಥಾನಮಾನ ನೀಡಲಾಗದು ಎಂದ ಕೇಂದ್ರ; ಸಾಮಾಜಿಕ ಜಾಲತಾಣಗಳಲ್ಲಿ ಭುಗಿಲೆದ್ದ ಆಕ್ರೋಶ

ಸುಪ್ರೀಂ ಕೊರ್ಟು ಸಲಹೆಯನ್ನು ನೀಡಿದ್ದರೂ ಸಹ ಕನ್ನಡವನ್ನು official language ಅಂತ ಮಾಡದಿರುವುದರ ಹಿಂದಿನ ಉದ್ದೇಶ, ಕನ್ನಡಿಗರನ್ನು policy making ನಿಂದ ದೂರ ಉಳಿಯುವಂತೆ ಮಾಡುವುದೇ ಆಗಿದೆ. ಬೇರೇನೂ ಇಲ್ಲ ಕರ್ನಾಟಕದ ಜನಪ್ರತಿನಿಧಿಗಳು ಪಕ್ಷ ಬೇದ ಮರೆತು ಕನ್ನಡವನ್ನು ಆಡಳಿತ ಭಾಷೆ ಮಾಡಿ ಅಂತ ಒತ್ತಾಯಿಸಬೇಕಿದೆ ಎಂಬ ಕೂಗು ಕೇಳಿಬರುತ್ತಿದೆ.

MAshok Kumar | news18-kannada
Updated:September 16, 2020, 4:21 PM IST
ಹಿಂದಿಯಂತೆ ಕನ್ನಡಕ್ಕೆ ಸ್ಥಾನಮಾನ ನೀಡಲಾಗದು ಎಂದ ಕೇಂದ್ರ; ಸಾಮಾಜಿಕ ಜಾಲತಾಣಗಳಲ್ಲಿ ಭುಗಿಲೆದ್ದ ಆಕ್ರೋಶ
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ಸೆಪ್ಟೆಂಬರ್‌ 16); ಭಾರತದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡ ಪ್ರಮುಖ ದ್ರಾವಿಡ ಭಾಷೆಯೂ ಹೌದು..! ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಯೂ ಹೌದು..! ಆದರೆ, ಇಷ್ಟು ದಿನಗಳ ಕಾಲ ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಹಿಂದಿ ಬರಹಗಳನ್ನು ಬರೆಯುವ ಮೂಲಕ ಪರೋಕ್ಷವಾಗಿ ಎಲ್ಲಾ ರಾಜ್ಯಗಳ ಮೇಲೆ ಹಿಂದಿ ಭಾಷೆ ಹೇರಿಕೆಗೆ ಮುಂದಾಗುತ್ತಿದ್ದ ಕೇಂದ್ರ ಸರ್ಕಾರ, ಇದೀಗ ನೂತನ ಶಿಕ್ಷಣ ನೀತಿಯ ಮೂಲಕ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಿ, ಆ ಮೂಲಕ ಶಾಲೆಗಳಲ್ಲಿ ಹಿಂದಿ ಓದನ್ನು ಖಡ್ಡಾಯಗೊಳಿಸಿ ಪ್ರತ್ಯಕ್ಷವಾಗಿಯೇ ಹಿಂದಿ ಏತರರ ಮೇಲೆ ಹಿಂದಿ ಭಾಷೆಯನ್ನು ಹೇರುತ್ತಿದೆ ಎಂಬುದು ಕನ್ನಡ ಪರ ಹೋರಾಟಗಾರರ ಆರೋಪ. ಹೀಗಾಗಿ "ಹಿಂದಿ ದಿವಸ್‌" ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಕನ್ನಡಿಗರು ವಿರೋಧಿಸಿದ್ದರು. ಅಲ್ಲದೆ, "ಹಿಂದಿ ಗೊತ್ತಿಲ್ಲ ಹೋಗೋ ನಾವು ಕನ್ನಡಿಗರು" ಎಂಬ ಘೋಷವಾಕ್ಯವನ್ನು ಪರಿಚಿತಗೊಳಿಸಿದ್ದರು. ಈ ನಡುವೆ "ಕೇಂದ್ರ ಸರ್ಕಾರ ಹಿಂದಿಯಂತೆ ಕನ್ನಡಕ್ಕೂ ಸ್ಥಾನಮಾನ ನೀಡಬೇಕು" ಎಂದು ಆಗ್ರಹಿಸಲಾಗಿತ್ತು. ಆದರೆ, ಭಾರತ ಸರ್ಕಾರ ಈ ಕೋರಿಕೆಯನ್ನು ತಳ್ಳಿಹಾಕುವ ಮೂಲಕ ಮತ್ತೊಮ್ಮೆ ಕನ್ನಡಿಗರನ್ನು ಕೆಣಕಿದೆ. ಪರಿಣಾಮ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರ ಆಕ್ರೋಶ ಭುಗಿಲೆದ್ದಿದೆ.ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿರುವ ಅರುಣ್ ಜಾವಗಲ್ ಎಂಬವರು, "ಕರ್ನಾಟಕದ ರಾಜಕಾರಣಿಗಳೇ ಭಾರತ ಸರಕಾರ ಕನ್ನಡಕ್ಕೆ ಹಿಂದಿಯಂತೆಯೇ ಸ್ತಾನಮಾನ ನೀಡೊಲ್ಲಾ ಅಂತ ಮತ್ತೆ ಇಂದು ಪುನರುಚ್ಚಾರ ಮಾಡಿದೆ. ಹಾಗಾಗಿ, ಕನ್ನಡಿಗರು ಎರಡನೇ ದರ್ಜೆ ನಾಗರೀಕರಾಗಿ ಬದುಕುವುದು ಮುಂದುವರೆಯಲಿದೆ.

ಸುಪ್ರೀಂ ಕೊರ್ಟು ಸಲಹೆಯನ್ನು ನೀಡಿದ್ದರೂ ಸಹ ಕನ್ನಡವನ್ನು official language ಅಂತ ಮಾಡದಿರುವುದರ ಹಿಂದಿನ ಉದ್ದೇಶ, ಕನ್ನಡಿಗರನ್ನು policy making ನಿಂದ ದೂರ ಉಳಿಯುವಂತೆ ಮಾಡುವುದೇ ಆಗಿದೆ. ಬೇರೇನೂ ಇಲ್ಲ ಕರ್ನಾಟಕದ ಜನಪ್ರತಿನಿಧಿಗಳು ಪಕ್ಷ ಬೇದ ಮರೆತು ಕನ್ನಡವನ್ನು ಆಡಳಿತ ಭಾಷೆ ಮಾಡಿ ಅಂತ ಒತ್ತಾಯಿಸಬೇಕಿದೆಎಲ್ಲಿಯವರೆಗೆ ಕನ್ನಡ ನಾಡಿನ ತೆರಿಗೆ ದೆಹಲಿಯ ರಾಜಕಾರಣಿಗಳ ಹಿಡಿತದಲ್ಲಿ ಇರುತ್ತೋ ಅಲ್ಲಿಯವರೆಗೆ ಕನ್ನಡ ನಾಡಿನ ಅಭಿವೃದ್ದಿ ಅಸಾಧ್ಯ. ನಾವು ತೆರಿಗೆ ದುಡ್ಡುನ್ನು ನೀಡಿ, ವಾಪಸ್ ಪಡೆಯಲು ಬಿಕ್ಷೆ ಬೇಡಬೇಕಾದ ಪರಿಸ್ತಿತಿಗೆ ಕಾರಣ, ಭಾರತ ಸರಿಯಾದ ಒಕ್ಕೂಟ ವ್ಯವಸ್ತೆಯನ್ನು ಅನುಸರಿಸದಿರುವುದೇ ಆಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರೆ.ಇನ್ನೂ ಕಳೆದ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಬಿಜೆಪಿ ನಾಯಕರು ಹೇಳಿದ್ದರು. ಇದರ ವಿರುದ್ಧವೂ ಕಿಡಿಕಾರಿರುವ ನೆಟ್ಟಿಗರು, "ಕೇಂದ್ರ ಮತ್ತು ರಾಜ್ಯದಲ್ಲಿ ಒಂದೆ ಪಕ್ಷ ಅಧಿಕಾರದಲ್ಲಿದ್ದರೆ.... ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅನ್ಯಾಯವಾಗುತ್ತೆ ಅಷ್ಟೆ.

ಇದನ್ನೂ ಓದಿ : Sandalwood Drug Scandal: ಐಂದ್ರಿತಾ ರೇ-ದಿಗಂತ್ ವಿಚಾರಣೆ ಮುಕ್ತಾಯ, ಏನಾಗಲಿದೆ ತಾರಾ ಜೋಡಿಯ ಭವಿಷ್ಯ?

ಸಾಮಾನ್ಯವಾಗಿ ಕೇಂದ್ರ ಸರಕಾರ ಕಾಯಿದೆ/ಕಾನೂನುಗಳು ಹಿಂದಿಯೇತರ ಭಾಷೆಯಲ್ಲಿ ಇರೊಲ್ಲಾ, ಉದಾಹರಣೆಗೆ, ರೈತ ಉಪಯೋಗಕ್ಕಾಗಿ ಇರುವ ಈ ಬಿಲ್ ಗಳು ಎಷ್ಟು ಜನ ಕರ್ನಾಟಕದ ರೈತರಿಗೆ, ರೈತರಿಗೆ ಉಪಯೋಗವಾಗುವಂತಹದ್ದು ಏನಿದೆ, ಏನಿಲ್ಲ ಅಂತ ಗೊತ್ತಾಗುತ್ತೆ?" ಎಂದು ಆರೋಪಿಸಿದ್ದಾರೆ.
Youtube Video

ಒಟ್ಟಲ್ಲಿ ಇಷ್ಟು ದಿನ ಹಿಂದಿ ಹೇರಿಕೆಯನ್ನು ಸಹಿಸಿಕೊಂಡಿದ್ದ ಕನ್ನಡಿಗರು ಇದೀಗ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ವಿರುದ್ಧ ತಿರುಗಿಬಿದ್ದಾರೆ. ಕನ್ನಡ ಪರ ಸಂಘಟನೆಗಳು ಹಿಂದಿ ಹೇರಿಕೆಯನ್ನು ವಿರೋಧಿಸಿ ಬೀದಿ ಗಿಳಿದು ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ಕರ್ನಾಟಕಕ್ಕೆ ಕನ್ನಡವೇ ರಾಷ್ಟ್ರಭಾಷೆ, ಕನ್ನಡಿಗನೇ ಸಾರ್ವಭೌಮ ಎಂಬ ಘೋಷಣೆಗಳೂ ಸಾಕಷ್ಟು ಪ್ರಸಿದ್ಧವಾಗುತ್ತಿವೆ. ಆದರೆ, ಕನ್ನಡಿಗರ ಈ ಹೋರಾಟಕ್ಕೆ ಗೆಲುವು ದಕ್ಕುತ್ತಾ? ಕನ್ನಡಕ್ಕೆ ಹಿಂದಿಗೆ ಸಮನಾದ ಸ್ಥಾನಮಾನ ಸಿಗುತ್ತಾ? ನಮ್ಮ ರಾಜ್ಯದ ಸಂಸದರು ಈ ನಿಟ್ಟಿನಲ್ಲಿ ಶ್ರಮವಹಿಸುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.
Published by: MAshok Kumar
First published: September 16, 2020, 4:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories