ಕಾರವಾರ ಹೆದ್ದಾರಿ ತುಂಬಾ ಬಿಡಾಡಿ ದನಗಳು; ನಿಯಂತ್ರಣಕ್ಕೆ ವಾಹನ ಸವಾರರ ಮನವಿ
ಹೆದ್ದಾರಿಗಳ ಮೇಲೆ ಬಿಡಾಡಿ ದನಗಳು ಹಗಲು ರಾತ್ರಿಯೆಲ್ಲಾ ಮನಸೋ ಇಚ್ಛೇ ತಿರುಗುತ್ತಿವೆ. ಅಲ್ಲದೇ ರಸ್ತೆಯ ಮೇಲೆ ಮಲಗಿರುವುದರಿಂದ ಸಂಚಾರಕ್ಕೂ ಸಾಕಷ್ಟು ಅಡ್ಡಿಯಾಗುತ್ತಿದೆ.
news18-kannada Updated:October 14, 2020, 7:20 AM IST

ಹೆದ್ದಾರಿಯಲ್ಲಿ ಓಡಾಡುತ್ತಿರುವ ಜಾನುವಾರುಗಳು
- News18 Kannada
- Last Updated: October 14, 2020, 7:20 AM IST
ಕಾರವಾರ (ಅ.14): ಇಲ್ಲಿನ ಹೆದ್ದಾರಿಯಲ್ಲಿ ಪ್ರಯಾಣ ಮಾಡುವುದು ಪ್ರಯಾಣಿಕರಿಗೆ ಈಗ ಸವಾಲ್ ಆಗಿದೆ. ಕಾರಣ ಹೆದ್ದಾರಿ ಮೇಲಿರುವ ಬಿಡಾಡಿ ದನಗಳು. ಇಲ್ಲಿನ ಬಿಡಾಡಿ ದನಗಳು ಮನಸೋಇಚ್ಛೆಯಾಗಿ ಹೆದ್ದಾರಿ ಮೇಲೆ ಸಂಚರಿಸುವುದರಿಂದ ಸವಾರರು ಸಾಕಷ್ಟು ಕಿರಿಕಿರಿ ಅನುಭವಿಸುವಂತೆ ಆಗಿದೆ. ಅಲ್ಲದೇ ಸವಾರರ ಅತಿ ವೇಗದ ಸಂಚಾರ ಬಿಡಾಡಿ ದನಗಳ ಸಾವಿಗೂ ಕಾರಣವಾಗುತ್ತಿರುವುದು ದುಃಖದ ಸಂಗತಿಯಾಗಿದೆ. ಇದರ ಜೊತೆಗೆ ಪ್ರಯಾಣಿಕರ ಜೀವಕ್ಕೂ ಕುತ್ತು ಬರುತ್ತಿದೆ. ಕಾರವಾರ-ಅಂಕೋಲಾ ತಾಲ್ಲೂಕುಗಳ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರನ್ನ ಚತುಷ್ಪಥಕ್ಕೇರಿಸಿದ್ದು ವಾಹನ ಸವಾರರ ಸಂಚಾರಕ್ಕೆ ಅನುಕೂಲ ಮಾಡಲಾಗಿದೆ. ಆದರೆ, ಈ ಹೆದ್ದಾರಿಗಳ ಮೇಲೆ ಬಿಡಾಡಿ ದನಗಳು ಹಗಲು ರಾತ್ರಿಯೆಲ್ಲಾ ಮನಸೋ ಇಚ್ಛೇ ತಿರುಗುತ್ತಿವೆ. ಅಲ್ಲದೇ ರಸ್ತೆಯ ಮೇಲೆ ಮಲಗಿರುವುದರಿಂದ ಸಂಚಾರಕ್ಕೂ ಸಾಕಷ್ಟು ಅಡ್ಡಿಯಾಗುತ್ತಿದೆ.
ರಾತ್ರಿ ವೇಳೆ ರಸ್ತೆಯಲ್ಲಿ ಜಾನುವಾರುಗಳು ಇರುವುದು ತಿಳಿಯದೇ ಸಾಕಷ್ಟು ಬಾರಿ ಹೆದ್ದಾರಿಯಲ್ಲಿ ಅಪಘಾತಗಳು ಸಹ ಸಂಭವಿಸಿವೆ. ಸಣ್ಣ ವಾಹನಗಳು ಜಾನುವಾರುಗಳಿಗೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ವಾಹನ ಸವಾರರಿಗೆ ಗಾಯಗಳಾಗುವುದಲ್ಲದೇ ಭಾರೀ ವಾಹನಗಳು ಡಿಕ್ಕಿಯಾದ ಸಂದರ್ಭಗಳಲ್ಲಿ ಜಾನುವಾರುಗಳು ಸಹ ಸಾವನ್ನಪ್ಪಿದ ಉದಾಹರಣೆ ಇವೆ. ಕಳೆದ ಎರಡು ದಿನದಲ್ಲಿ ಹತ್ತರಿಂದ ಹದಿನೈದು ಜಾನುವಾರುಗಳು ಸಾವನಪ್ಪಿರುವುದು ದುಃಖದ ಸಂಗತಿಯಾಗಿದೆ. ಬಿಡಾಡಿ ದನಗಳ ನಿಯಂತ್ರಣ ಇಲ್ಲದ ಪರಿಣಾಮ ಈ ವರ್ಷದ ಇಲ್ಲಿವರೆಗೆ ನೂರಕ್ಕು ಹೆಚ್ಚು ಜಾನುವಾರುಗಳು ಸಾವು ಕಂಡಿವೆ. ಇನ್ನು ಕೆಲ ದಿನಗಳ ಹಿಂದಷ್ಟೇ ಅಂಕೋಲಾ ತಾಲ್ಲೂಕಿನ ಹಾರವಾಡ ಗ್ರಾಮದ ಬಳಿ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಏಳು ಜಾನುವಾರುಗಳು ಸಾವನ್ನಪ್ಪಿದ್ದವು. ಅಲ್ಲದೇ ಹೆದ್ದಾರಿಯಲ್ಲಿ ಸಂಚರಿಸುವ ಬೈಕ್ ಸವಾರರಿಗೆ ಜಾನುವಾರುಗಳು ಸಾಕಷ್ಟು ಅಪಾಯಕಾರಿಯಾಗಿದ್ದು ಜಾನುವಾರುಗಳಿಗೆ ಡಿಕ್ಕಿಯಾಗುವುದನ್ನ ತಪ್ಪಿಸಲು ಮುಂದಾಗಿ ಅಪಘಾತಗಳು ಸಂಭವಿಸಿದೆ. ಹೀಗಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಆತಂಕದಲ್ಲೇ ವಾಹನ ಚಲಾಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇದನ್ನು ಓದಿ: ಬ್ಲೂ ಪ್ಲ್ಯಾಗ್ ಮಾನ್ಯತೆ ಪಡೆದ ಹೊನ್ನಾವರದ ಕಾಸರಕೋಡು ಕಡಲ ಕಿನಾರೆ ಹೇಗಿದೆ ಗೊತ್ತಾ!
ಈ ಅಪಘಾತಗಳನ್ನ ತಪ್ಪಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು ಜಾನುವಾರುಗಳಿಗೆ ರೇಡಿಯಂ ರಿಫ್ಲೆಕ್ಟರ್ಗಳನ್ನ ಅಳವಡಿಸುವ ಕಾರ್ಯವನ್ನ ಮಾಡುತ್ತಿದೆ. ಇದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಕತ್ತಲಿನಲ್ಲೂ ಜಾನುವಾರುಗಳು ಇರುವುದು ಕಂಡುಬರುವುದರಿಂದ ಜಾನುವಾರುಗಳೂ ಅಪಘಾತಕ್ಕೊಳಗಾಗುವುದನ್ನ ನಿಯಂತ್ರಿಸಲು ಸಾಧ್ಯವಾಗಲಿದೆ ಎನ್ನುತ್ತಾರೆ ಪೊಲೀಸರು
ಈ ರಿಫ್ಲೆಕ್ಟರ್ ಗಳ ಅಳವಡಿಕೆಗೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಖ್ಯವಾಗಿ ಜಾನುವಾರುಗಳನ್ನ ಹೆದ್ದಾರಿಗೆ ಹೋಗದಂತೆ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ರಾತ್ರಿ ವೇಳೆ ರಸ್ತೆಯಲ್ಲಿ ಜಾನುವಾರುಗಳು ಇರುವುದು ತಿಳಿಯದೇ ಸಾಕಷ್ಟು ಬಾರಿ ಹೆದ್ದಾರಿಯಲ್ಲಿ ಅಪಘಾತಗಳು ಸಹ ಸಂಭವಿಸಿವೆ. ಸಣ್ಣ ವಾಹನಗಳು ಜಾನುವಾರುಗಳಿಗೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ವಾಹನ ಸವಾರರಿಗೆ ಗಾಯಗಳಾಗುವುದಲ್ಲದೇ ಭಾರೀ ವಾಹನಗಳು ಡಿಕ್ಕಿಯಾದ ಸಂದರ್ಭಗಳಲ್ಲಿ ಜಾನುವಾರುಗಳು ಸಹ ಸಾವನ್ನಪ್ಪಿದ ಉದಾಹರಣೆ ಇವೆ. ಕಳೆದ ಎರಡು ದಿನದಲ್ಲಿ ಹತ್ತರಿಂದ ಹದಿನೈದು ಜಾನುವಾರುಗಳು ಸಾವನಪ್ಪಿರುವುದು ದುಃಖದ ಸಂಗತಿಯಾಗಿದೆ. ಬಿಡಾಡಿ ದನಗಳ ನಿಯಂತ್ರಣ ಇಲ್ಲದ ಪರಿಣಾಮ ಈ ವರ್ಷದ ಇಲ್ಲಿವರೆಗೆ ನೂರಕ್ಕು ಹೆಚ್ಚು ಜಾನುವಾರುಗಳು ಸಾವು ಕಂಡಿವೆ.