ಪರಂಗಿ ಹಣ್ಣಿನೊಳಗೆ ಮತ್ತೊಂದು ಪಪ್ಪಾಯಿ ಕಾಯಿ ಮತ್ತು ಹೂ; ಇದು ಸೃಷ್ಟಿಯ ವೈಚಿತ್ರ್ಯ

ಸಾಮಾನ್ಯವಾಗಿ ಎಲ್ಲಾ ಪಪ್ಪಾಯ ಹಣ್ಣಿನಲ್ಲಿ ಕಪ್ಪು ಬಣ್ಣದ ಬೀಜಗಳಿರುತ್ತವೆ, ಆದರೆ ಈ ಪಪ್ಪಾಯ ಹಣ್ಣಿನಲ್ಲಿ ಬೀಜದ ಬದಲಾಗಿ, ಹಣ್ಣಿನ ಕಾಯಿ ಮತ್ತು ಹೂವು ಬಿಟ್ಟು ಆಶ್ಚರ್ಯ ಮೂಡಿಸಿದೆ. ಈ ಸೃಷ್ಟಿಯ ವೈಚಿತ್ರ್ಯದಿಂದ ಅಚ್ಚರಿಯ ಜೊತೆಗೆ ಸುಧಾಕರ್ ಕುಟುಂಬಕ್ಕೆ ಆತಂಕ ಸಹ ಶುರುವಾಗಿದೆ.

news18-kannada
Updated:September 2, 2020, 7:24 PM IST
ಪರಂಗಿ ಹಣ್ಣಿನೊಳಗೆ ಮತ್ತೊಂದು ಪಪ್ಪಾಯಿ ಕಾಯಿ ಮತ್ತು ಹೂ; ಇದು ಸೃಷ್ಟಿಯ ವೈಚಿತ್ರ್ಯ
ಪಪ್ಪಾಯ
  • Share this:
ಶಿವಮೊಗ್ಗ(ಸೆ.02): ಪರಂಗಿ ಹಣ್ಣಿನೊಳಗೆ ಕಪ್ಪು ಬಣ್ಣದ ಬೀಜಗಳಿರುವುದು ಸಾಮಾನ್ಯ ಸಂಗತಿ. ಅದರೆ ಈ ಪರಂಗಿ ಹಣ್ಣನ್ನು  ತಿನ್ನಲು ಕತ್ತರಿಸಿದಾಗ, ಮನೆಯವರಿಗೆ ಅಚ್ಚರಿ ಕಾದಿತ್ತು. ಪರಂಗಿ ಹಣ್ಣಿನೊಳಗೊಂದು ಪಪ್ಪಾಯ ಕಾಯಿ ಮತ್ತು ಹೂ ಬಿಟ್ಟು ಹುಬ್ಬೇರಿಸುವಂತೆ ಮಾಡಿದೆ.  ಸೃಷ್ಟಿಯ ವೈಚಿತ್ರ್ಯ ಇದಾಗಿದೆ.

ಶಿವಮೊಗ್ಗ ನಗರದ ನವೀಲೆ ಬಡಾವಣೆ ನಿವಾಸಿ ಸುಧಾಕರ್ ಮನೆಯಲ್ಲಿ ಇಂತಹ ಒಂದು ಅಚ್ಚರಿ ನಡೆದಿದೆ. ಪಪ್ಪಾಯಿ ಹಣ್ಣಿನೊಳಗಿನ ವೈಚಿತ್ರ್ಯ ಸುಧಾಕರ್ ಮತ್ತು ಭಾಗ್ಯಲಕ್ಷ್ಮೀ ದಂಪತಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಸುಧಾಕರ್ ಅವರ ತೋಟದಲ್ಲಿ ಬಿಟ್ಟಿರುವಂತಹ ಈ ಸಣ್ಣ ತಳಿಯ ಪಪ್ಪಾಯದಲ್ಲಿ ಈ ರೀತಿಯ ಅಚ್ಚರಿಗೆ ಕಾರಣವಾಗುವಂತೆ ಮಾಡಿದೆ.  ಶಿವಮೊಗ್ಗದಿಂದ 25 ಕೀಮಿ ದೂರದಲ್ಲಿರುವ ಹಣಗೆರೆಕಟ್ಟೆ ರಸ್ತೆಯ ಇಟ್ಟಿಗೆಹಳ್ಳಿ ಗ್ರಾಮದಲ್ಲಿರುವ ಸುಧಾಕರ್  ತೋಟದಲ್ಲಿ ಕಳೆದ 3-4 ವರ್ಷಗಳಿಂದ ಪಪ್ಪಾಯಿ ಬೆಳೆಯುತ್ತಿದ್ದಾರೆ. ಬೆಂಗಳೂರಿನಿಂದ ಸುಮಾರು 200 ಸಸಿಗಳನ್ನು ತಂದು ನಾಟಿ ಮಾಡಿದ್ದರು. ವಿಶೇಷವಾಗಿ ಪಪ್ಪಾಯಿ ಹಣ್ಣುಗಳು, ದೊಡ್ಡದಾಗಿರುತ್ತವೆ. ಆದರೆ ಇವರ ತೋಟದಲ್ಲಿ ಬೆಳೆಯುವ ಪಪ್ಪಾಯಿ ಹಣ್ಣುಗಳು ಸಣ್ಣ  ಗಾತ್ರದ್ದಾಗಿವೆ.

LPG Gas: ಎಲ್​ಪಿಜಿ ಸಿಲಿಂಡರ್​ಗೆ ಕೊಡುತ್ತಿದ್ದ​​​​ ಸಬ್ಸಿಡಿ ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ

ಇವರ ತೋಟದಲ್ಲಿ ಪಪ್ಪಾಯ ಮರದಲ್ಲಿ ನಿನ್ನೆ ಹಣ್ಣೊಂದನ್ನು ಕಿತ್ತು, ಮನೆಗೆ ತಂದು ಪತ್ನಿ ಭಾಗ್ಯಲಕ್ಷ್ಮಿಗೆ ನೀಡಿದ್ದಾರೆ.  ತಿನ್ನಲು ಹಣ್ಣನ್ನು ಕತ್ತರಿಸಿದ ನಂತರವಷ್ಟೇ, ಇವರಿಗೆ ಈ ಪಪ್ಪಾಯ ಹಣ್ಣಿನಲ್ಲಿ ಬೀಜಗಳ ಬದಲಾಗಿ ಮತ್ತೊಂದು ಪಪ್ಪಾಯ ಕಾಯಿ ಬಂದಿದ್ದು, ಇದರ ಜೊತೆಗೆ ಹೂವು ಕೂಡ ಬಿಟ್ಟಿದೆ.  ಸಾಮಾನ್ಯವಾಗಿ ಎಲ್ಲಾ ಪಪ್ಪಾಯ ಹಣ್ಣಿನಲ್ಲಿ ಕಪ್ಪು ಬಣ್ಣದ ಬೀಜಗಳಿರುತ್ತವೆ, ಆದರೆ ಈ ಪಪ್ಪಾಯ ಹಣ್ಣಿನಲ್ಲಿ ಬೀಜದ ಬದಲಾಗಿ, ಹಣ್ಣಿನ ಕಾಯಿ ಮತ್ತು ಹೂವು ಬಿಟ್ಟು ಆಶ್ಚರ್ಯ ಮೂಡಿಸಿದೆ. ಈ ಸೃಷ್ಟಿಯ ವೈಚಿತ್ರ್ಯದಿಂದ ಅಚ್ಚರಿಯ ಜೊತೆಗೆ ಸುಧಾಕರ್ ಕುಟುಂಬಕ್ಕೆ ಆತಂಕ ಸಹ ಶುರುವಾಗಿದೆ.

ರೈತ ಸುಧಾಕರ್, ಇದೀಗ ಈ ರೀತಿ ಹಣ್ಣು ಬಿಟ್ಟಿರುವುದರ ಬಗ್ಗೆ ಜೋತಿಷ್ಯದ ಮೊರೆ ಹೋಗಲು ಮುಂದಾಗಿದ್ದಾರೆ. ಕೆಲವೊಂದು ಸಲ ಈ ರೀತಿಯ ಹಣ್ಣುಗಳು ಬಿಟ್ಟರೆ, ಮನೆಗೆ ಕೆಡುಕಾಗುತ್ತದೆ ಎಂಬ ಭಯ ಸುಧಾಕರ್ ಕುಟುಂಬವನ್ನು ಕಾಡುತ್ತಿದೆ. ಇದಕ್ಕಾಗಿ ಜೋತಿಷ್ಯ ಕೇಳಲು ಮುಂದಾಗಿದ್ದಾರೆ. 2 ಎಕರೆ ಜಾಗದಲ್ಲಿ ಸುಮಾರು 200 ಗಿಡಗಳನ್ನು ಬೆಳೆಯುತ್ತಿರುವ ಕೃಷಿಕ ಸುಧಾಕರ್ ಗೆ ಇದೇ ಮೊದಲ ಬಾರಿಗೆ ಈ ರೀತಿಯ ಹಣ್ಣು ಕಂಡು ಬಂದಿದೆ.

ಸಾಮಾನ್ಯವಾಗಿ, ತರಕಾರಿಗಳಲ್ಲಿ, ವಿವಿಧ ಕಲಾಕೃತಿಗಳಿಗೆ ಹೋಲಿಕೆಯಾಗುವಂತ ತರಕಾರಿಗಳು ಬೆಳೆದಿರೋದು ಕಂಡುಬರೋದು ಸಾಮಾನ್ಯ.  ಆದರೆ, ಹಣ್ಣಿನೊಳಗೆ ಮತ್ತೊಂದು ಹಣ್ಣು ಬಿಡುವ ರೀತಿಯಲ್ಲಿ ಕಂಡು ಬರೋದು ಅಪರೂಪದರಲ್ಲಿ ಅಪರೂಪ. ಇದನ್ನು ಕಂಡ ಸುಧಾಕರ್ ಕುಟುಂಬ ಸೇರಿದಂತೆ, ನೆರೆ ಹೊರೆಯವರು, ಈ ವಿಶೇಷ ಹಣ್ಣನ್ನು ಕಂಡು ಅಚ್ಚರಿಗೊಂಡಿದ್ದಾರೆ.
Published by: Latha CG
First published: September 2, 2020, 7:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading