SSLC Result: ಮರು ಮೌಲ್ಯಮಾಪನದಲ್ಲಿ ಬಂತು 625ಕ್ಕೆ 624 ಅಂಕ; ಶಿವಮೊಗ್ಗದ ವಿದ್ಯಾರ್ಥಿನಿ ರಾಜ್ಯಕ್ಕೆ ಸೆಕೆಂಡ್​​

ಹಿಂದಿ ಮತ್ತು ವಿಜ್ಞಾನ ವಿಷಯದಲ್ಲಿ ಶೇಕಡಾ 100ರಷ್ಟು ಅಂಕ ದೊರೆತ ಪರಿಣಾಮ 625 ಕ್ಕೆ 624 ಅಂಕ ಬಂದಿದೆ. ಕಾವ್ಯ ಸಹ ಸಂತಸಗೊಂಡಿದ್ದಾರೆ. ಇನ್ನು ಪ್ರಿಯದರ್ಶಿನಿ ಶಾಲೆಯ ಶಿಕ್ಷಕರು ಸಹ ಖುಷಿಯಾಗಿದ್ದಾರೆ. ಅವರ ಶಾಲೆಗೆ ವಿದ್ಯಾರ್ಥಿನಿ ಕಾವ್ಯ ಹೆಸರು ತಂದಿದ್ದಾಳೆ ಎಂಬ ಖುಷಿಯನ್ನು ಶಾಲಾ ಆಡಳಿತ ಮಂಡಳಿಗೆ ಹಂಚಿಕೊಂಡಿದೆ.

news18-kannada
Updated:September 6, 2020, 5:33 PM IST
SSLC Result: ಮರು ಮೌಲ್ಯಮಾಪನದಲ್ಲಿ ಬಂತು 625ಕ್ಕೆ 624 ಅಂಕ; ಶಿವಮೊಗ್ಗದ ವಿದ್ಯಾರ್ಥಿನಿ ರಾಜ್ಯಕ್ಕೆ ಸೆಕೆಂಡ್​​
ಕಾವ್ಯಾ ಎಸ್​
  • Share this:
ಶಿವಮೊಗ್ಗ(ಸೆ.06): ಎಸ್​​ಎಸ್ಎಲ್​​ಸಿ ಫಲಿತಾಂಶದಲ್ಲಿ ಬಂದ ಅಂಕಗಳ ಬಗ್ಗೆ ಈ ವಿದ್ಯಾರ್ಥಿನಿಗೆ ಕಸಿವಿಸಿ ಇತ್ತು.  625ಕ್ಕೆ 620 ಅಂಕ ಬಂದಿದ್ದರೂ ಈಕೆಗೆ ಸಮಾಧಾನ ಆಗಿರಲಿಲ್ಲ. ನನಗೆ ಇನ್ನು ಹೆಚ್ಚಿನ ಅಂಕ ಬರಬೇಕು ಎಂದು ಈ ವಿದ್ಯಾರ್ಥಿನಿ ಮರು ಮೌಲ್ಯಮಾಪನಕ್ಕೆ  ಮನವಿ ಮಾಡಿಕೊಂಡಾಗ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿದ್ದಾಳೆ. ಈ ವಿದ್ಯಾರ್ಥಿನಿ ಹೆಸರು ಕಾವ್ಯ ಆರ್. ಶಿವಮೊಗ್ಗ ನಗರದ ಕಲ್ಲಹಳ್ಳಿ ಬಡಾವಣೆಯ ಪ್ರಿಯದರ್ಶಿನಿ ಶಾಲೆಯಲ್ಲಿ ಎಸ್​​ಎಸ್​​ಎಲ್​​ಸಿ ವ್ಯಾಸಂಗ ಮಾಡಿದ್ದಾಳೆ. ಕಾವ್ಯಾಗೆ ಎಸ್​​ಎಸ್​​ಎಲ್​​ಸಿಯಲ್ಲಿ  625ಕ್ಕೆ 620 ಅಂಕ ಗಳಿಸಿದ್ದಳು. ಆದರೀಗ ಮೌರು ಮೌಲ್ಯಮಾಪನದಲ್ಲಿ 625ಕ್ಕೆ 624 ಅಂಕಗಳಿಸಿ ರಾಜ್ಯಕ್ಕೆ ಸೆಕೆಂಡ್​​ ಬಂದಿದ್ದಾಳೆ.

ಮೊದಲಿಗೆ ಕಾವ್ಯಾಗೆ ಬಂದ ಅಂಕಗಳ ಬಗ್ಗೆ ಸಮಾಧಾನ ಆಗಿರಲಿಲ್ಲ. ನನಗೆ ಇನ್ನು ಹೆಚ್ಚಿನ ಅಂಕ ಬರಬೇಕಿತ್ತು ಎಂದು ಪೋಷಕರು ಸೇರಿದಂತೆ ಶಾಲೆಯ ಶಿಕ್ಷಕರ ಬಳಿ  ಹೇಳಿಕೊಂಡಿದ್ದಳು. ಅಲ್ಲದೇ ಕಾವ್ಯಾ ಶೇಕಡಾ 100ರಷ್ಟು ಅಂಕ ಗಳಿಸಬಹುದು ಎಂಬ ಭರವಸೆ ಶಾಲಾ ಶಿಕ್ಷಕರಲ್ಲಿ ಸಹ ಇತ್ತು. ಆದರೆ, ಫಲಿತಾಂಶ ಬಂದ ದಿನ ಬೇಸರವಾಗಿತ್ತು.   ಫಲಿತಾಂಶದಲ್ಲಿ 625ಕ್ಕೆ 620 ಅಂಕ ಬಂದಿತ್ತು.  ಯಾಕೆ ಹೀಗೆ ಎಂದು ಯೋಚಿಸಿ ಆಡಳಿತ ಮಂಡಳಿಗೆ ಸಂಪರ್ಕಿಸಿದಾಗ ಶಾಲೆಯ ಪ್ರಾಂಶುಪಾಲರು ಮತ್ತು ಕಾರ್ಯದರ್ಶಿಗಳ ಆಸಕ್ತಿಯಿಂದ ಹಿಂದಿ ಮತ್ತು ವಿಜ್ಞಾನ ವಿಷಯವನ್ನು ಮರು ಮೌಲ್ಯಮಾಪನಕ್ಕೆ ಮನವಿ ಮಾಡಿಕೊಂಡಿದ್ದರು.

ಈ ಎರಡು ವಿಷಯದಲ್ಲಿ 98 ಅಂಕಗಳು ಬಂದಿದ್ದವು. ಮರು ಮೌಲ್ಯಮಾಪನ ಮಾಡಿದ ಬಳಿಕ ಫಲಿತಾಂಶ ಬಂದಾಗ ಶಾಕ್ ಆಗಿತ್ತು.  ಹಿಂದಿ ಮತ್ತು ವಿಜ್ಞಾನ ಎರಡು ವಿಷಯದಲ್ಲಿ 100ಕ್ಕೆ 100 ಅಂಕ ಬಂದಿವೆ. ಕಾವ್ಯಾ ಅಂದುಕೊಂಡಂತೆ 625ಕ್ಕೆ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಉತ್ತಮ ಅಂಕ ತೆಗೆಯುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿರುವ ಕಾವ್ಯ ಶಿವಮೊಗ್ಗದ ಪ್ರಿಯದರ್ಶಿನಿ ಶಾಲೆಗೂ ಕೀರ್ತಿ ತಂದಿದ್ದಾಳೆ.

ಇದನ್ನೂ ಓದಿ: ಡ್ರಗ್ಸ್‌ ಜಾಲ; ಪೊಲೀಸ್‌ ವಿಚಾರಣೆ ಸ್ಪಂದಿಸದ ನಟಿ ರಾಗಿಣಿ, ಪ್ರಶ್ನೆ ಕೇಳಿ ಬಾಯ್‌ಬಿಡಿಸಲು ಸಾಧ್ಯವಾಗದೆ ಹೈರಾಣಾದ ಅಧಿಕಾರಿಗಳು

ಹಿಂದಿ ಮತ್ತು ವಿಜ್ಞಾನ ವಿಷಯದಲ್ಲಿ  ಶೇಕಡಾ 100ರಷ್ಟು ಅಂಕ ದೊರೆತ ಪರಿಣಾಮ 625 ಕ್ಕೆ 624 ಅಂಕ ಬಂದಿದೆ. ಕಾವ್ಯ ಸಹ ಸಂತಸಗೊಂಡಿದ್ದಾರೆ. ಇನ್ನು ಪ್ರಿಯದರ್ಶಿನಿ ಶಾಲೆಯ ಶಿಕ್ಷಕರು ಸಹ ಖುಷಿಯಾಗಿದ್ದಾರೆ. ಅವರ ಶಾಲೆಗೆ ವಿದ್ಯಾರ್ಥಿನಿ ಕಾವ್ಯ ಹೆಸರು ತಂದಿದ್ದಾಳೆ ಎಂಬ ಖುಷಿಯನ್ನು ಶಾಲಾ ಆಡಳಿತ ಮಂಡಳಿಗೆ ಹಂಚಿಕೊಂಡಿದೆ.
Published by: Ganesh Nachikethu
First published: September 6, 2020, 5:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading