ಕೊಡಚಾದ್ರಿ ಬುಡದ ಹಿಡ್ಲುಮನೆ ಫಾಲ್ಸ್​ನಲ್ಲಿ ಸಿಲುಕಿದ ಪ್ರವಾಸಿಗ; 5 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ

ಕೊಡಚಾದ್ರಿಯ ಬುಡದಲ್ಲಿರುವ ಹಿಡ್ಲುಮನೆ ಜಲಪಾತದಲ್ಲಿ 80 ಅಡಿ ಮೇಲೆ ಸಿಲುಕಿಕೊಂಡಿದ್ದ 29 ವರ್ಷದ ಅಮೋಘ ಎಂಬ ಪ್ರವಾಸಿಗ ಸತತ 5 ಗಂಟೆ ಕಾರ್ಯಾಚರಣೆ ಬಳಿಕ ಅಪಾಯದಿಂದ ಪಾರಾಗಿದ್ದಾನೆ.

news18-kannada
Updated:October 19, 2020, 10:31 AM IST
ಕೊಡಚಾದ್ರಿ ಬುಡದ ಹಿಡ್ಲುಮನೆ ಫಾಲ್ಸ್​ನಲ್ಲಿ ಸಿಲುಕಿದ ಪ್ರವಾಸಿಗ; 5 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ
ಹಿಡ್ಲುಮನೆ ಫಾಲ್ಸ್​ನಲ್ಲಿ ಸಿಲುಕಿದ್ದ ಪ್ರವಾಸಿಗ ಅಮೋಘ
  • Share this:
ಶಿವಮೊಗ್ಗ (ಅ. 19): ಶಿವಮೊಗ್ಗದ ಪ್ರಮುಖ ಪ್ರವಾಸಿ ತಾಣವಾದ ಕೊಡಚಾದ್ರಿಗೆ ಕೊರೋನಾ ಅಬ್ಬರದ ನಡುವೆಯೂ ಪ್ರವಾಸಿಗರು ಕಡಿಮೆಯಾಗಿಲ್ಲ. ಕೊಡಚಾದ್ರಿ ಬಳಿ ಇರುವ ಹಿಡ್ಲುಮನೆ ಜಲಪಾತ ನೋಡಲು ಬಂದಿದ್ದ ಪ್ರವಾಸಿಗನೋರ್ವ ಹಿಡ್ಲುಮನೆ ಫಾಲ್ಸ್​ನಲ್ಲಿ 80 ಅಡಿ ಮೇಲ್ಭಾಗದಲ್ಲಿ ಸಿಲುಕಿಕೊಂಡಿದ್ದ. ಸತತ 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಆತನನ್ನು ಸುರಕ್ಷಿತವಾಗಿ ಕೆಳಗೆ ಕರೆತರಲಾಗಿದೆ. ಅಗ್ನಿಶಾಮಕ ದಳ, ವನ್ಯಜೀವಿ ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯರು ಕಾರ್ಯಾಚರಣೆ ನಡೆಸಿ, ಆತನನ್ನು ರಕ್ಷಿಸಿದ್ದಾರೆ. ಭಾನುವಾರ ಮಧ್ಯಾಹ್ನ 1.30ಕ್ಕೆ ಹಿಡ್ಲುಮನೆ ಜಲಪಾತದ ಮಧ್ಯೆ ಸಿಲುಕಿದ್ದ ಪ್ರವಾಸಿಗನನ್ನು ಸಂಜೆ 6 ಗಂಟೆಗೆ ಕೆಳಗಿಳಿಸಲಾಗಿದೆ. 

ಕೊಡಚಾದ್ರಿಯ ಬುಡದಲ್ಲಿರುವ ಹಿಡ್ಲುಮನೆ ಜಲಪಾತದಲ್ಲಿ 80 ಅಡಿ ಮೇಲೆ ಸಿಲುಕಿಕೊಂಡಿದ್ದ 29 ವರ್ಷದ ಅಮೋಘ ಎಂಬ ಪ್ರವಾಸಿಗ ಸತತ 5 ಗಂಟೆ ಕಾರ್ಯಾಚರಣೆ ಬಳಿಕ ಅಪಾಯದಿಂದ ಪಾರಾಗಿದ್ದಾನೆ. ಅಗ್ನಿಶಾಮಕ ದಳ, ವನ್ಯಜೀವಿ ಅರಣ್ಯ ಸಿಬ್ಬಂದಿಗಳು ಮತ್ತು ಸ್ಥಳೀಯರಿಂದ ಆತನನ್ನು ರಕ್ಷಣೆ ಮಾಡಲಾಗಿದೆ. 50ಕ್ಕೂ ಹೆಚ್ಚು ಜನರ ತಂಡ ಸತತ 5 ಗಂಟೆ ಕಾರ್ಯಾಚರಣೆ ಬಳಿಕ ಪ್ರವಾಸಿಗನ ರಕ್ಷಣೆ ಮಾಡಲಾಗಿದೆ.

ಕೊಡಚಾದ್ರಿ ಬುಡದಲ್ಲಿರುವ ಹಿಡ್ಲುಮನೆ ಫಾಲ್ಸ್​ ಮಧ್ಯೆ ಸಿಲುಕಿದ ಪ್ರವಾಸಿಗ


ಹಾಸನ ಮೂಲದ ಅಮೋಘ ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾನೆ. ತಮಿಳುನಾಡು ಮೂಲದ ಸಂಜೀವ್, ಜೈಪುರ ಮೂಲದ ಮಧು ಎಂಬುವವರ ಜೊತೆ ವೀಕೆಂಡ್​ಗೆ ಶನಿವಾರ ರಾತ್ರಿ ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದರು. ಕೊಡಚಾದ್ರಿ ಬಳಿ ಇರುವ ಹೋಂ ಸ್ಟೇಯಲ್ಲಿ ತಂಗಿದ್ದ ಯುವಕರು ನಿನ್ನೆ ಜೀಪ್‍ನಲ್ಲಿ ಕೊಡಚಾದ್ರಿ ಬೆಟ್ಟ ಹತ್ತಿ, ನಂತರ ನೇರವಾಗಿ ಹಿಡ್ಲುಮನೆ ಜಲಪಾತಕ್ಕೆ ತೆರಳಿದ್ದರು. ಹಿಡ್ಲುಮನೆ ಜಲಪಾತದ ಮಾರ್ಗವಾಗಿ ಕೊಡಚಾದ್ರಿಯಿಂದ ಕೆಳಗೆ ಇಳಿಯುತ್ತಿದ್ದರು. ಈ ವೇಳೆ ಅಮೋಘ ಹಿಡ್ಲುಮನೆ ಫಾಲ್ಸ್​ನ ಕೆಳಗಿನಿಂದ ಜಲಪಾತದ ನೀರು ಬೀಳುವ ಕಡೆಗೆ ಹತ್ತಿದ್ದ. ಆಗ ಕೆಳಗೆ ಇಳಿಯಲಾಗದೆ ಆತ ಮಧ್ಯೆ ಸಿಲುಕಿಕೊಂಡಿದ್ದ. ಆತ ಮಧ್ಯೆ ಸಿಲುಕಿದ್ದನ್ನು ನೋಡಿ ಇನ್ನಿಬ್ಬರು ಸಹಾಯಕ್ಕಾಗಿ ಜೋರಾಗಿ ಕಿರುಚಿಕೊಂಡಿದ್ದರು.

ಹಿಡ್ಲುಮನೆ ಜಲಪಾತದಿಂದ ಪ್ರವಾಸಿಗನನ್ನು ರಕ್ಷಿಸಿದ ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ


ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದರು. ಕೊನೆಗೆ ಸ್ಥಳೀಯರು, ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿ ಆತನನ್ನು ಹಗ್ಗದ ಮೂಲಕ ಕೆಳಗೆ ಇಳಿಸಿದರು. ಟ್ರೆಕಿಂಗ್ ಮಾಡುವ ಉತ್ಸಾಹದಲ್ಲಿ ಜಲಪಾತದ ಮೇಲ್ಭಾಗಕ್ಕೆ ಹತ್ತಲು ಹೋಗಿದ್ದ ಅಮೋಘ ಸ್ವಲ್ಪ ಯಾಮಾರಿದರೂ ಕೆಳಗೆ ಬೀಳುವ ಅಪಾಯವಿತ್ತು.
Published by: Sushma Chakre
First published: October 19, 2020, 10:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading