ಯಡಿಯೂರಪ್ಪ ಅತಿಭ್ರಷ್ಟ; ಮುಖ್ಯಮಂತ್ರಿ ಸ್ಥಾನದಿಂದ ಕಿತ್ತೊಗೆಯಿರಿ - ಶಂಕರ್ ಬಿದರಿ

ರಾಜ್ಯದಲ್ಲಿ ಯಡಿಯೂರಪ್ಪ ಮತ್ತವರ ಕುಟುಂಬದಿಂದ ಭ್ರಷ್ಟಾಚಾರ ಆಗುತ್ತಿದ್ದರೂ ಯಾಕೆ ಕಣ್ಮುಚ್ಚಿ ಕುಳಿತುಕೊಳ್ಳಲಾಗಿದೆ? ಯಡಿಯೂರಪ್ಪ ಅವರನ್ನು ತೆಗೆದುಹಾಕಲು ಯಾಕೆ ಧೈರ್ಯತೋರುತ್ತಿಲ್ಲ ಎಂದು ಶಂಕರ್ ಬಿದರಿ ಅವರು ಬಿಜೆಪಿ ವರಿಷ್ಠರನ್ನು ಪ್ರಶ್ನೆ ಮಾಡಿದ್ಧಾರೆ.

news18-kannada
Updated:September 19, 2020, 9:49 AM IST
ಯಡಿಯೂರಪ್ಪ ಅತಿಭ್ರಷ್ಟ; ಮುಖ್ಯಮಂತ್ರಿ ಸ್ಥಾನದಿಂದ ಕಿತ್ತೊಗೆಯಿರಿ - ಶಂಕರ್ ಬಿದರಿ
ಶಂಕರ್ ಬಿದರಿ ಅವರ ಫೈಲ್ ಚಿತ್ರ
  • Share this:
ಬೆಂಗಳೂರು(ಸೆ. 19): ಯಡಿಯೂರಪ್ಪ ಹಾಗೂ ಅವರ ಕುಟುಂಬದವರು ಭ್ರಷ್ಟಾಚಾರ ನಡೆಸುತ್ತಿರುವುದು ಗೊತ್ತಿದ್ದರೂ ಯಾಕೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ? ಪಕ್ಷದ ಗೌರವವೆಲ್ಲಾ ಕಸದ ಬುಟ್ಟಿ ಸೇರಿವೆ. ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಕಿತ್ತೊಗೆಯಿರಿ ಎಂದು ಮಾಜಿ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಬಿಜೆಪಿ ವರಿಷ್ಠರನ್ನು ಒತ್ತಾಯಿಸಿದ್ದಾರೆ. ಸರಣಿ ಟ್ವೀಟ್​ಗಳನ್ನ ಮಾಡಿದ ಬಿದರಿ, ಯಡಿಯೂರಪ್ಪ ಅವರನ್ನ ಕಿತ್ತೊಗೆಯಲು ಪಕ್ಷ ಯಾಕೆ ಹಿಂದೇಟು ಹಾಕುತ್ತಿರುವುದುಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದು ಬಿಎಸ್​ವೈ ಕುಟುಂಬದ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿರುವುದು ಐಟಿ, ಇಡಿ ಮತ್ತು ಪಕ್ಷದ ಗಮನಕ್ಕೆ ಬಂದಿಲ್ಲವಾ ಎಂದು ಪ್ರಶ್ನಿಸಿರುವ ಅವರು, ಪಕ್ಷದ ಗೌರವ ಮತ್ತು ಭವಿಷ್ಯದ ಬಗ್ಗೆ ನಿಮಗೆ ಕಾಳಜಿ ಇಲ್ಲವಾ? ನಿಮ್ಮ ಈ ನಿಷ್ಕ್ರಿಯತೆಯನ್ನು ದೇಶ ಹೇಗೆ ಪರಿಭಾವಿಸುತ್ತದೆ? ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿದರಿ ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಮತ್ತವರ ಕುಟುಂಬದ ಅತ್ಯಂತ ಹೀನ ಭ್ರಷ್ಟಾಚಾರವನ್ನು ಹೇಗೆ ಸಹಿಸಿಕೊಳ್ಳುತ್ತಿದ್ದೀರಿ? ಪಕ್ಷ ಹಾಗೂ ಪ್ರಧಾನಿಗಳ ಗೌರವ, ಪ್ರತಿಷ್ಠೆ ಹಾಗೂ ಭವಿಷ್ಯವು ಕರ್ನಾಟಕದ ಕಸದ ಬುಟ್ಟಿಯಲ್ಲಿದೆ ಎಂಬುದು ಗೊತ್ತಿದೆಯಾ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಲ್ಹಾದ ಜೋಷಿ ಅವರನ್ನ ಟ್ಯಾಗ್ ಮಾಡಿ ಬಿದರಿ ಮತ್ತೊಂದು ಟ್ವೀಟ್ ಮಾಡಿದ್ಧಾರೆ.

ಇದನ್ನೂ ಓದಿ: ವಿಜಯೇಂದ್ರ ಸೂಪರ್ ಸಿಎಂ ಅಲ್ಲ, ಮುಂದೊಂದು ದಿನ ಸಿಎಂ ಆಗುತ್ತಾರೆ: ಶಾಸಕ ಪ್ರೀತಮ್ ಗೌಡ

ಚಿಮನ್​ಭಾಯ್ ಎದುರಾಗಿ ದೊಡ್ಡ ಆಂದೋಲನ ನಡೆಸಿದ ಪಕ್ಷ, ಕೇಶುಭಾಯ್ ಅವರನ್ನ ಕಿತ್ತೊಗೆಯಲು ಮೀನಮೇಷ ಎಣಿಸದ ಪಕ್ಷ ಈಗ ಕರ್ನಾಟಕದ ಕೇಶುಭಾಯ್ ಬಗ್ಗೆ ಭಯಪಡುತ್ತಿದೆಯಾ? ಇದು ಮುಖರ್ಜಿ (ಶ್ಯಾಮಪ್ರಸಾದ್), ಉಪಾಧ್ಯಾಯ (ದೀನದಯಾಳ್) ಮತ್ತು ಅಟಲ್​ಜಿ ಅವರ ಪಕ್ಷವಾ ಎಂದೂ ಬಿದರಿ ಕಟುವಾಗಿ ಪ್ರಶ್ನಿಸಿದ್ದಾರೆ.


ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಪ್ರಯತ್ನವಾಗುತ್ತಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಆದರೆ, ಬಹಿರಂಗವಾಗಿ ಈ ಬಗ್ಗೆ ಧ್ವನಿ ಎತ್ತಿರುವುದು ಶಂಕರ್ ಬಿದರಿ ಅವರೇ. ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿದ್ದ (ಡಿಜಿ-ಐಜಿಪಿ) ಶಂಕರ್ ಬಿದರಿ ಪೊಲೀಸ್ ಸೇವೆಯಿಂದ ನಿವೃತ್ತರಾದ ಬಳಿಕ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಅವರು ಬಿಜೆಪಿಯಲ್ಲಿದ್ದಾರೆ.
Published by: Vijayasarthy SN
First published: September 19, 2020, 9:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading