HOME » NEWS » State » SENIOR IPS OFFICER RP SHARMA CONDITION IS CRITICAL SAYS SOURCES GNR

ಐಪಿಎಸ್​​ ಅಧಿಕಾರಿ ಆರ್​​.ಪಿ ಶರ್ಮಾ ಕುತ್ತಿಗೆಗೆ ಗುಂಡೇಟು; ಸ್ಥಿತಿ ಗಂಭೀರ

ಹಿರಿಯ ಐಪಿಎಸ್​ ಅಧಿಕಾರಿ ಇಂದು ಮಿಸ್​​ ಫೈರ್​​ ಮಾಡಿಕೊಂಡಿದ್ದರು ಎನ್ನಲಾಗಿದೆ. ತಮ್ಮ ಸರ್ವೀಸ್​​ ರಿವಾಲ್ವರ್​​ನಿಂದಲೇ ಕುತ್ತಿಗೆಗೆ ಮಿಸ್​​ ಫೈರ್​​ ಮಾಡಿಕೊಂಡಿದ್ದ ಇವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

news18-kannada
Updated:September 2, 2020, 8:05 PM IST
ಐಪಿಎಸ್​​ ಅಧಿಕಾರಿ ಆರ್​​.ಪಿ ಶರ್ಮಾ ಕುತ್ತಿಗೆಗೆ ಗುಂಡೇಟು; ಸ್ಥಿತಿ ಗಂಭೀರ
ಆರ್​​.ಪಿ ಶರ್ಮಾ
  • Share this:
ಬೆಂಗಳೂರು(ಸೆ.02): ಇತ್ತೀಚೆಗೆ ತೀವ್ರ ಕ್ಯಾನ್ಸರ್​ ರೋಗದಿಂದ ಬಳಲುತ್ತಿದ್ದ ಹಿರಿಯ ಐಪಿಎಸ್​ ಅಧಿಕಾರಿ ಆರ್​​​.ಪಿ ಶರ್ಮಾ ಸ್ಥಿತಿ ಗಂಭೀರವಾಗಿದೆ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆ ವೈದ್ಯಕೀಯ ಮೂಲಗಳು ತಿಳಿಸಿವೆ.

ಹಿರಿಯ ಐಪಿಎಸ್​ ಅಧಿಕಾರಿ ಇಂದು ಮಿಸ್​​ ಫೈರ್​​ ಮಾಡಿಕೊಂಡಿದ್ದರು ಎನ್ನಲಾಗಿದೆ. ತಮ್ಮ ಸರ್ವೀಸ್​​ ರಿವಾಲ್ವರ್​​ನಿಂದಲೇ ಕುತ್ತಿಗೆಗೆ ಮಿಸ್​​ ಫೈರ್​​ ಮಾಡಿಕೊಂಡಿದ್ದ ಇವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಲ್ಲಿನ ವೈದ್ಯರ ತಂಡ ಆರ್​​.ಪಿ ಶರ್ಮಾರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು, ಆರ್​​.ಪಿ ಶರ್ಮಾ ಕೌಟುಂಬಿಕ ಸಮಸ್ಯೆಯಿಂದ ತಾವೇ ಫೈರಿಂಗ್​​ ಮಾಡಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ರಾ? ಎಂಬ ಚರ್ಚೆಯೂ ನಡೆಯುತ್ತಿದೆ. ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ವೈದ್ಯರು ಆರ್​​.ಪಿ ಶರ್ಮಾರ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಏನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಜಿಎಸ್​​​ಟಿ ಪಾಲು ನೀಡದೆ ಕೇಂದ್ರದಿಂದ ರಾಜ್ಯಗಳಿಗೆ ದ್ರೋಹ‘ - ಪ್ರಧಾನಿ ಮೋದಿಗೆ ಮಮತಾ ಬ್ಯಾನರ್ಜಿ ಪತ್ರ

ಈ ಮಧ್ಯೆಯೇ ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್, ಆರ್​​​.ಪಿ ಶರ್ಮಾ ಆಕಸ್ಮಿಕವಾಗಿ ಫೈರ್​​ ಮಾಡಿಕೊಂಡಿದ್ಧಾರೆ ಎಂದು ಮಾಹಿತಿ ನೀಡಿದ್ಧಾರೆ.
Published by: Ganesh Nachikethu
First published: September 2, 2020, 8:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories