Ragini Dwivedi: ಸ್ಯಾಂಡಲ್​ವುಡ್ ಡ್ರಗ್ ಕೇಸ್; ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಸೆ. 19ಕ್ಕೆ ಮುಂದೂಡಿಕೆ

Sandalwood Drug Scandal: ನಟಿ ರಾಗಿಣಿಯ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿ ಎನ್​ಡಿಪಿಎಸ್ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಇತರೆ ಆರೋಪಿಗಳಾದ ರಾಹುಲ್ ತೋಷೆ, ಶಿವಪ್ರಕಾಶ್, ವಿನಯ್ ಕುಮಾರ್ ಜಾಮೀನು ಅರ್ಜಿ ವಿಚಾರಣೆಯೂ ಸೆ.19 ಕ್ಕೆ ಮುಂದೂಡಿಕೆಯಾಗಿದೆ.

news18-kannada
Updated:September 16, 2020, 12:16 PM IST
Ragini Dwivedi: ಸ್ಯಾಂಡಲ್​ವುಡ್ ಡ್ರಗ್ ಕೇಸ್; ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಸೆ. 19ಕ್ಕೆ ಮುಂದೂಡಿಕೆ
ನಟಿ ರಾಗಿಣಿ
  • Share this:
ಬೆಂಗಳೂರು (ಸೆ. 16): ಸ್ಯಾಂಡಲ್​ವುಡ್ ಡ್ರಗ್ಸ್​ ದಂಧೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಕೋರಿ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಎರಡನೇ ಬಾರಿಯೂ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ಇಂದು ನಟಿ ರಾಗಿಣಿಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ ವಿಶೇಷ ಕೋರ್ಟ್​ ಅರ್ಜಿ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿದೆ. ಈ ಪ್ರಕರಣದಲ್ಲಿ ಹೊಸ ಎಸ್​ಪಿಪಿಗಳ ನೇಮಕ ಹಿನ್ನೆಲೆಯಲ್ಲಿ ಹೊಸ ಅಭಿಯೋಜಕರಿಂದ ಕಾಲಾವಕಾಶ ಕೋರಲಾಗಿದೆ. ಆಕ್ಷೇಪಣೆ ಸಲ್ಲಿಸಲು ಅಭಿಯೋಜಕರು ಕಾಲಾವಕಾಶ ಕೋರಿದ್ದರಿಂದ ರಾಗಿಣಿಗೆ ಸದ್ಯಕ್ಕೆ ಯಾವುದೇ ರಿಲೀಫ್ ಇಲ್ಲ.

ನಟಿ ರಾಗಿಣಿಯ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿ ಎನ್​ಡಿಪಿಎಸ್ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಇತರೆ ಆರೋಪಿಗಳಾದ ರಾಹುಲ್ ತೋಷೆ, ಶಿವಪ್ರಕಾಶ್, ವಿನಯ್ ಕುಮಾರ್ ಜಾಮೀನು ಅರ್ಜಿ ವಿಚಾರಣೆಯೂ ಸೆ.19 ಕ್ಕೆ ಮುಂದೂಡಿಕೆಯಾಗಿದೆ. ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದೆ. ಡ್ರಗ್ಸ್​ ದಂಧೆಯಲ್ಲಿ ನಟಿ ರಾಗಿಣಿ ದ್ವಿವೇದಿ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಂಧನಕ್ಕೊಳಗಾಗಿರುವ ರಾಗಿಣಿ ದ್ವಿವೇದಿ ಸೇರಿದಂತೆ 5 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು.

ಇದನ್ನೂ ಓದಿ: Sandalwood Drug Case: ಮಾದಕ ವಸ್ತು ಪ್ರಕರಣ: ಸ್ಟಾರ್​ ದಂಪತಿ ದಿಗಂತ್​-ಐಂದ್ರಿತಾ ವಿಚಾರಣೆ

ಡ್ರಗ್ಸ್​ ದಂಧೆಯಲ್ಲಿ ಸಾಕಷ್ಟು ಪ್ರಭಾವಿಗಳ ಹೆಸರು ಬೆಳಕಿಗೆ ಬರುತ್ತಿದೆ. ರಾಗಿಣಿ ಇದುವರೆಗೂ ಸಿಸಿಬಿ ಪೊಲೀಸರ ಯಾವ ಪ್ರಶ್ನೆಗಳಿಗೂ ಸೂಕ್ತ ಮಾಹಿತಿ ನೀಡಿಲ್ಲ. ನಟಿ ರಾಗಿಣಿಯ ಜೊತೆಗೆ ನಟಿ ಸಂಜನಾ ಗಲ್ರಾನಿ ಕೂಡ ಬಂಧನಕ್ಕೊಳಗಾಗಿದ್ದಾರೆ. ಇಂದು ನಟರಾದ ದಿಗಂತ್ ಮತ್ತು ಐಂದ್ರಿತಾ ರೇಗೂ ವಿಚಾರಣೆಗೆ ಹಾಜರಾಗಲು ಸಿಸಿಬಿ ನೋಟಿಸ್ ನೀಡಿದೆ. ಈ ಡ್ರಗ್ಸ್​ ದಂಧೆಯಲ್ಲಿ ಸ್ಯಾಂಡಲ್​ವುಡ್​ನ ಹಲವು ನಟರು, ಪ್ರಭಾವಿಗಳು ಶಾಮೀಲಾಗಿರುವ ಸಾಧ್ಯತೆಯಿದೆ.

ಸಿಸಿಬಿ ವಶದಲ್ಲಿದ್ದ ರಾಗಿಣಿ ಸೇರಿದಂತೆ ಐವರು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಿ ಸಿವಿಲ್ ಕೋರ್ಟ್​ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು. ರಾಗಿಣಿ, ರಾಹುಲ್, ವಿರೇನ್ ಖನ್ನಾ, ರವಿಶಂಕರ್ ಹಾಗೂ ಲೂಯಿ ಪೆಪ್ಪರ್ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿತ್ತು. ನಟಿ ಸಂಜನಾ ಅವರ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದೆ. ಹೀಗಾಗಿ, ಅವರು ಕೂಡ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

ಸಂಜನಾ ಅಷ್ಟೆ ಅಲ್ಲದೆ ಡ್ರಗ್​ ಪ್ರಕರಣದ ಆರೋಪಿಗಳಾದ ವಿರೇನ್ ಖನ್ನಾ ಹಾಗೂ ರವಿಶಂಕರ್ ಪೊಲೀಸ್ ಕಸ್ಟಡಿ ಸಹ ಇಂದಿಗೆ ಕೊನೆಯಾಗಲಿದೆ. ಸಿಸಿಬಿ ಪೊಲೀಸರು ಇಂದು ಮದ್ಯಾಹ್ನದ ಬಳಿಕ ಮೂವರು ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಈಗಾಗಲೆ 11 ದಿನಗಳ ಕಾಲ ನಟಿ ಸಂಜನಾ ಅವರನ್ನು ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ತುಂಬಾ ಕಡಿಮೆ ಇದೆ. ಸಂಜನಾ ನಿನ್ನೆ ಅವರ ವಕೀಲರ ಜೊತೆ ಮಾತನಾಡಿದ್ದು ಇಂದು ಜಾಮೀನಿಗಾಗಿ ಅರ್ಜಿ ಸಲ್ಲಿಸೋ ಸಾಧ್ಯತೆ ಇದೆ. ಒಂದು ವೇಳೆ ಪೊಲೀಸರು ಕಸ್ಟಡಿಗೆ ಕೇಳದೆ ಇದ್ದರೆ, ಇತ್ತ ಜಾಮೀನು ಸಿಗದೆ ಇದ್ದರೆ ನಟಿ ಸಂಜನಾ ಸಹ ಇಂದು ಪರಪ್ಪನ ಅಗ್ರಹಾರ ಜೈಲು ಸೇರೋದು ಖಚಿತ ಎನ್ನಲಾಗಿದೆ.
Published by: Sushma Chakre
First published: September 16, 2020, 12:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading